Monday, August 31, 2026
spot_img
More
    spot_img
    HomeLatest newsಬಿಜೆಪಿಯವರು ಸೌಜನ್ಯ ಮನೆಗೆ ಹೋದಾಗ ಆಕೆ ತಾಯಿ ವೀರೇಂದ್ರ ಹೆಗ್ಗಡೆ ಹೆಸರು ಹೇಳಿದ್ರು ಎಂದ ಪ್ರಿಯಾಂಕ್‌...

    ಬಿಜೆಪಿಯವರು ಸೌಜನ್ಯ ಮನೆಗೆ ಹೋದಾಗ ಆಕೆ ತಾಯಿ ವೀರೇಂದ್ರ ಹೆಗ್ಗಡೆ ಹೆಸರು ಹೇಳಿದ್ರು ಎಂದ ಪ್ರಿಯಾಂಕ್‌ ಖರ್ಗೆ

    ಧರ್ಮಸ್ಥಳದಲ್ಲಿ ನಡೆಯುತ್ತಿರುವ ಎಸ್‌ಐಟಿ ತನಿಖೆಗೆ ಆರಂಭದಿಂದಲೂ ವಿರೋಧಗಳು ವ್ಯಕ್ತವಾಗುತ್ತಲೇ ಇವೆ. ಅದರಲ್ಲಿಯೂ ಬಿಜೆಪಿ ಎಸ್‌ಐಟಿ ತನಿಖೆ ವಿರೋಧಿಸಿ ಹಾಗೂ ಈ ತನಿಖೆಯಿಂದ ಧರ್ಮಸ್ಥಳದ ವಿರುದ್ಧ ಅಪಪ್ರಚಾರವಾಗುತ್ತಿದೆ ಎಂದು ಆರೋಪಿಸಿ ಧರ್ಮಸ್ಥಳ ಚಲೋ ಕೈಗೊಂಡಿದ್ದರು.

    Advertisement

    ಈ ಹೋರಾಟದ ವಿರುದ್ಧ ಸಾಮಾನ್ಯವಾಗಿ ಕಾಂಗ್ರೆಸ್‌ ಸಹ ಕಿಡಿಕಾರಿತ್ತು. ಸದ್ಯ ಈ ಪ್ರಕರಣದಲ್ಲಿ ಹಲವು ಬದಲಾವಣೆಗಳು ನಡೆದಿದ್ದು, ಎಸ್‌ಐಟಿ ಆರಂಭದಲ್ಲಿ ಸಾಕ್ಷಿ ದೂರುದಾರನಾಗಿದ್ದ ಚಿನ್ನಯ್ಯನನ್ನು ಆರೋಪಿಯನ್ನಾಗಿ ಬಂಧಿಸಿದೆ. ಇತ್ತ ಧರ್ಮಸ್ಥಳ ಪ್ರಕರಣದಲ್ಲಿ ನ್ಯಾಯ ಸಿಗಬೇಕೆಂದು ಈ ಹಿಂದಿನಿಂದಲೂ ದನಿ ಎತ್ತುತ್ತಾ ಬಂದಿರುವ ಮಹೇಶ್‌ ಶೆಟ್ಟಿ ತಿಮರೋಡಿಯನ್ನು ದಕ್ಷಿಣ ಕನ್ನಡ ಜಿಲ್ಲೆಯಿಂದ ಗಡಿಪಾರು ಮಾಡಲಾಗಿದ್ದು, ಈ ಕುರಿತು ಪ್ರತಿಕ್ರಿಯಿಸುವಾಗ ಸಚಿವ ಪ್ರಿಯಾಂಕ್‌ ಖರ್ಗೆ ಬಿಜೆಪಿ ಕಾಲೆಳೆದಿದ್ದಾರೆ.

    ಧರ್ಮಸ್ಥಳ ಚಲೋ ಸಂದರ್ಭದಲ್ಲಿ ಮೊದಲಿಗೆ ವೇದಿಕೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ವಿಜಯೇಂದ್ರ ಹಾಗೂ ತಂಡ ಬಳಿಕ ಪಾಂಗಳದ ಸೌಜನ್ಯ ಮನೆಗೆ ಭೇಟಿ ನೀಡಿತ್ತು. ಈ ಸಂದರ್ಭದಲ್ಲಿ ಸೌಜನ್ಯ ತಾಯಿ ಕುಸುಮಾವತಿ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಹೆಸರನ್ನು ಪ್ರಸ್ತಾಪಿಸಿದ್ದರು.

    ತಮ್ಮ ದೊಡ್ಡಪ್ಪನ ಬಳಿ ಮಾತನಾಡಿದ್ದ ವೀರೇಂದ್ರ ಹೆಗ್ಗಡೆಯವರು ತಮ್ಮ ಕುಟುಂಬದಿಂದ ತಪ್ಪಾಗಿ ಹೋಗಿದೆ, ಇದನ್ನು ಇಲ್ಲಿಗೆ ಬಿಟ್ಟುಬಿಡಿ ಎಂದು ಹೇಳಿದ್ದರು ಎಂದು ಸ್ಪೋಟಕ ಹೇಳಿಕೆಯನ್ನು ವಿಜಯೇಂದ್ರ ಮುಂದೆಯೇ ಹೇಳಿದ್ದರು.

    ಇದೇ ಹೇಳಿಕೆಯನ್ನು ಇದೀಗ ಉಲ್ಲೇಖಿಸಿರುವ ಪ್ರಿಯಾಂಕ್‌ ಖರ್ಗೆ ಬಿಜೆಪಿಯವರು ಯಾರ ಪರ ಎಂದು ಪ್ರಶ್ನೆ ಎತ್ತಿದ್ದಾರೆ. ವೇದಿಕೆ ಹತ್ತಿದರೆ ಧರ್ಮಾಧಿಕಾರಿ ಪರ ಎನ್ನುವ ಬಿಜೆಪಿಗರು ವೇದಿಕೆ ಇಳಿದರೆ ಸೌಜನ್ಯ ಪರ ಎನ್ನುತ್ತಾರೆ. ಅಂದು ಇವರು ಸೌಜನ್ಯ ಮನೆಗೆ ಹೋದಾಗ ಸೌಜನ್ಯ ಮನೆಯವರು ಯಾರ ಹೆಸರನ್ನು ಉಲ್ಲೇಖಿಸಿದರು? ಆಗ ಸುಪ್ರೀಂ ಕೋರ್ಟ್‌ಗೆ ಹೋಗಲು ಸಹಾಯ ಮಾಡ್ತೀವಿ ಅಂತಲೂ ಬಿಜೆಪಿಗರು ತಿಳಿಸಿದರು. ವೇದಿಕೆ ಇಳಿದಾಗ ಧರ್ಮಸ್ಥಳದ ವಿರುದ್ಧ, ವೇದಿಕೆ ಏರಿದಾಗ ಧರ್ಮಸ್ಥಳದ ಪರ ಎಂದು ಪ್ರಿಯಾಂಕ್‌ ಖರ್ಗೆ ಚಾಟಿ ಬೀಸಿದರು.

    ಕೇವಲ 10 ನಿಮಿಷದಲ್ಲಿ ಕಳೆದುಹೋದ ಮೊಬೈಲ್‌ ಹುಡುಕಿಕೊಟ್ಟ ಬೆಂಗಳೂರು ಪೊಲೀಸರು; ಯುವತಿ ಶಾಕ್

    ಎಐ ಅಡ್ವೋಕೇಟ್‌ ಅಸಿಸ್ಟೆಂಟ್‌ ವೆಬ್‌ಸೈಟ್‌ಗಾಗಿ ಇಲ್ಲಿ ಕ್ಲಿಕ್‌ ಮಾಡಿ


    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe to get the latest posts sent to your email.

    Leave a Reply

    Related News

    ಎಸ್‌ಐಆರ್ ಅಕ್ರಮ: ಎನ್‌ಡಿಎ ನಿಯೋಗ ಮುಖ್ಯ ಚುನಾವಣಾ ಆಯುಕ್ತರಿಗೆ ದೂರು

    ಕರ್ನಾಟಕದಲ್ಲಿ ಎಸ್‌ಐಆರ್ ಪ್ರಕ್ರಿಯೆ ದುರುಪಯೋಗದ ಆರೋಪದೊಂದಿಗೆ ಕುಮಾರಸ್ವಾಮಿ ಮತ್ತು ಪ್ರಲ್ಹಾದ ಜೋಶಿ ನೇತೃತ್ವದ ಎನ್‌ಡಿಎ ನಿಯೋಗ ನವದೆಹಲಿಯಲ್ಲಿ ಮುಖ್ಯ ಚುನಾವಣಾ ಆಯುಕ್ತರಿಗೆ ದಾಖಲೆ ಸಮೇತ ದೂರು ಸಲ್ಲಿಸಿತು.

    ಮಾದಪಟ್ಟಣ ಕ್ವಾರಿ ದುರಂತ: ಅಶೋಕ ತಲಾ ₹50 ಲಕ್ಷ ಪರಿಹಾರ ಆಗ್ರಹ

    ಬೆಂಗಳೂರು ಮಾದಪಟ್ಟಣ ಕ್ವಾರಿಯಲ್ಲಿ ಬಂಡೆ ಬಿದ್ದು 7 ಕಾರ್ಮಿಕರು ಮೃತಪಟ್ಟ ಘಟನೆಗೆ ಪ್ರತಿಪಕ್ಷ ನಾಯಕ ಆರ್.ಅಶೋಕ ರಾಜ್ಯ ಸರ್ಕಾರದ ನಿರ್ಲಕ್ಷ್ಯವೇ ಕಾರಣ ಎಂದು ದೂರಿ ತಲಾ ₹50 ಲಕ್ಷ ಪರಿಹಾರ ಒತ್ತಾಯಿಸಿದ್ದಾರೆ.

    Most Popular

    Recent Comments

    Home
    Play
    Notification
    Search

    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe now to keep reading and get access to the full archive.

    Continue reading