ದುಬೈ: ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಏಷ್ಯಾ ಕಪ್ 2025 ( Asia Cup 2025 ) ಸೂಪರ್ 4 ಪಂದ್ಯದಲ್ಲಿ ಭಾರತ ಹಾಗೂ ಬಾಂಗ್ಲಾದೇಶ ಮುಖಾಮುಖಿಯಾಗಿವೆ.
ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿರುವ ಭಾರತ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 168 ರನ್ ಕಲೆಹಾಕಿದ್ದು, ಬಾಂಗ್ಲಾದೇಶಕ್ಕೆ 169 ರನ್‌ಗಳ ಗುರಿಯನ್ನು ನೀಡಿದೆ.
ತಂಡದ ಪರ ಆರಂಭಿಕರಾಗಿ ಕಣಕ್ಕಿಳಿದ ಅಭಿಷೇಕ್ ಶರ್ಮಾ ಈ ಪಂದ್ಯದಲ್ಲೂ ಸಹ ಅಬ್ಬರಿಸಿದ್ದು, 37 ಎಸೆತಗಳಲ್ಲಿ 6 ಬೌಂಡರಿ ಹಾಗೂ 5 ಸಿಕ್ಸರ್ ಸಹಿತ 75 ರನ್ ಬಾರಿಸಿದರೆ, ಮತ್ತೋರ್ವ ಆರಂಭಿಕ ಆಟಗಾರ ಶುಬ್‌ಮನ್ ಗಿಲ್ 29 (19) ರನ್ ಗಳಿಸಿದರು. ಇನ್ನುಳಿದಂತೆ ಶಿವಮ್ ದುಬೆ 2, ನಾಯಕ ಸೂರ್ಯಕುಮಾರ್ ಯಾದವ್ 5, ತಿಲಕ್ ವರ್ಮಾ 5, ಹಾರ್ದಿಕ್ ಪಾಂಡ್ಯ 38 (29) ರನ್ ಹಾಗೂ ಅಕ್ಷರ್ ಪಟೇಲ್ ಅಜೇಯ 10 (15) ರನ್ ಗಳಿಸಿದರು.
ಬಾಂಗ್ಲಾದೇಶದ ಪರ ರಿಷದ್ ಹೊಸೈನ್ 2 ವಿಕೆಟ್, ತನ್ಜಿಮ್ ಹಸನ್ ಸಕಿಬ್, ಮುಸ್ತಫಿಜರ್ ರಹಮಾನ್ ಹಾಗೂ ಮೊಹಮ್ಮದ್ ಸೈಫುದ್ದೀನ್ ತಲಾ ಒಂದೊಂದು ವಿಕೆಟ್ ಪಡೆದರು.
ಮೈಸೂರು ದಸರಾಗೆ ಆಗಮಿಸುವವರಿಗೆ ಗುಡ್‌ನ್ಯೂಸ್; 51 ವಿಶೇಷ ರೈಲುಗಳ ಆಯೋಜನೆ
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


