ಸೌದಿ ಅರೇಬಿಯಾದ ಜೆಡ್ಡಾದಲ್ಲಿ ನಡೆಯುತ್ತಿರುವ 2025ರ ಇಂಡಿಯನ್ ಪ್ರೀಮಿಯರ್ ಲೀಗ್‌ನ ಮೆಗಾ ಹರಾಜು ಪ್ರಕ್ರಿಯೆಯಲ್ಲಿ ಮೊದಲ ದಿನವೇ ಎರಡೆರಡು ದಾಖಲೆ ನಿರ್ಮಾಣವಾಗಿವೆ.
ಮೊದಲಿಗೆ ಶ್ರೇಯಸ್ ಐಯ್ಯರ್ ಅವರನ್ನು ಪಂಜಾಬ್ ಕಿಂಗ್ಸ್ ತಂಡ 26.75 ಕೋಟಿ ರೂಪಾಯಿ ಬಿಡ್ ಮಾಡುವ ಮೂಲಕ ಖರೀದಿಸಿತ್ತು. ಈ ಮೂಲಕ ಶ್ರೇಯಸ್ ಐಯ್ಯರ್ ಐಪಿಎಲ್ ಇತಿಹಾಸದಲ್ಲೇ ಅತಿಹೆಚ್ಚು ಮೊತ್ತಕ್ಕೆ ಖರೀದಿಯಾದ ಆಟಗಾರ ಎನಿಸಿಕೊಂಡಿದ್ದರು.
ಆದರೆ ಕೆಲವೇ ನಿಮಿಷಗಳಲ್ಲಿ ರಿಷಭ್ ಪಂತ್ 27 ಕೋಟಿಗೆ ಹರಾಜಾಗುವ ಮೂಲಕ ಈ ದಾಖಲೆಯನ್ನು ಮುರಿದುಹಾಕಿದ್ದಾರೆ. ಎಲ್ಲಾ ತಂಡಗಳು ಬಿಡ್ ಮಾಡಿದ ನಂತರ ಅಂತಿಮವಾಗಿ 21.50 ಕೋಟಿಗೆ ಪಂತ್ ಅವರನ್ನು ಲಕ್ನೋ ಸೂಪರ್ ಜೈಂಟ್ಸ್ ತಂಡ ಖರೀದಿಸಿತು. ಆರ್‌ಟಿಎಂ ಲಭ್ಯವಿದ್ದ ಕಾರಣ ಡೆಲ್ಲಿ ಕ್ಯಾಪಿಟಲ್ಸ್ ರಿಷಭ್ ಪಂತ್ ಅವರನ್ನು ಆರ್‌ಟಿಎಂ ಬಳಸಿ ಮರಳಿ ತಂಡಕ್ಕೆ ಕರೆತರಲು ಯತ್ನಿಸಿತು.
ಈ ಸಂದರ್ಭದಲ್ಲಿ ಲಕ್ನೋ ಸೂಪರ್ ಜೈಂಟ್ಸ್ 27 ಕೋಟಿ ತಮ್ಮ ಅಂತಿಮ ಬಿಡ್ ಎಂದು ತಿಳಿಸಿತು. ಈ ಮೊತ್ತವನ್ನು ಡೆಲ್ಲಿ ಕ್ಯಾಪಿಟಲ್ಸ್ ನೀಡಲು ಮುಂದಾಗದ ಕಾರಣ 27 ಕೋಟಿಗೆ ರಿಷಭ್ ಪಂತ್ ಲಕ್ನೋ ಸೂಪರ್ ಜೈಂಟ್ಸ್ ಪಾಲಾದರು.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


