Monday, November 2, 2026
spot_img
More
    spot_img
    HomeLatest newsಚಿನ್ನದ ಬೆಲೆಯಲ್ಲಿ ₹710 ಇಳಿಕೆ ;22 ಮತ್ತು 24 ಕ್ಯಾರೆಟ್ ನಿಖರ ದರ ಈಗಲೇ ತಿಳಿಯಿರಿ.

    ಚಿನ್ನದ ಬೆಲೆಯಲ್ಲಿ ₹710 ಇಳಿಕೆ ;22 ಮತ್ತು 24 ಕ್ಯಾರೆಟ್ ನಿಖರ ದರ ಈಗಲೇ ತಿಳಿಯಿರಿ.

    ಚಿನ್ನದ ಮಾರುಕಟ್ಟೆಯಲ್ಲಿ ಹೂಡಿಕೆದಾರರ ಪಾಲಿಗೆ ಈಗ ನಿಜಕ್ಕೂ ‘ಹಾವು-ಏಣಿಯಾಟ’ ನಡೆಯುತ್ತಿದೆ! ಕಳೆದ ವಾರದ ಅಂತ್ಯದಲ್ಲಿ ಭಾರಿ ಏರಿಕೆ ಕಂಡಿದ್ದ ಹಳದಿ ಲೋಹದ ಬೆಲೆ, ಈ ವಾರದ ಆರಂಭವಾದ ಸೋಮವಾರದಂದೂ ಇಳಿಕೆ ಕಂಡಿದೆ. ಕಳೆದ 10 ದಿನಗಳಲ್ಲಿ ಇದು 5ನೇ ಬಾರಿ 22 ಮತ್ತು 24 ಕ್ಯಾರೆಟ್ ಚಿನ್ನದ ಬೆಲೆಯಲ್ಲಿ ಕುಸಿತ ಕಂಡಿದೆ.

    ಇದೇ ಕುಸಿತದ ಭಾಗವಾಗಿ, ಇಂದು ಒಂದೇ ದಿನ 24 ಕ್ಯಾರೆಟ್‌ನ 100 ಗ್ರಾಂ ಚಿನ್ನದ ದರದಲ್ಲಿ ಬರೋಬ್ಬರಿ ₹7,000 ರೂ.ಗಳಿಗೂ ಅಧಿಕ ಪ್ರಮಾಣದಲ್ಲಿ ಇಳಿಕೆಯಾಗಿದೆ! ಮಾರುಕಟ್ಟೆಗಳಲ್ಲಿ 24 ಕ್ಯಾರೆಟ್ ಚಿನ್ನದ ಬೆಲೆ ಗ್ರಾಂ ಒಂದಕ್ಕೆ 12,513 ರೂಪಾಯಿ ಇದ್ದು, ಇಂದು 71 ರೂಪಾಯಿ ಇಳಿಕೆ ಆಗಿದೆ. 10 ಗ್ರಾಂ ಶುದ್ಧ ಚಿನ್ನಕ್ಕೆ 1,25,130 ರೂಪಾಯಿ ಇದೆ. 24 ಕ್ಯಾರೆಟ್ 10 ಗ್ರಾಂ ಬೆಲೆಯಲ್ಲಿ ಇಂದು 710 ರೂ ಇಳಿಕೆ ಆಗಿದೆ.

    ದೇಶದಲ್ಲಿಂದು 22 ಕ್ಯಾರಟ್ ಚಿನ್ನದ ಬೆಲೆ

    1 ಗ್ರಾಂ: 11,470 ರೂಪಾಯಿ

    8 ಗ್ರಾಂ: 91,760 ರೂಪಾಯಿ

    10 ಗ್ರಾಂ: 1,14,700 ರೂಪಾಯಿ

    100 ಗ್ರಾಂ: 11,47,000 ರೂಪಾಯಿ

    ದೇಶದ ಪ್ರಮುಖ ನಗರಗಳಲ್ಲಿ ಇಂದು 22 ಕ್ಯಾರೆಟ್ ಚಿನ್ನದ ಬೆಲೆ (10 ಗ್ರಾಂಗೆ)

    ಚೆನ್ನೈ1,14,500

    ಮುಂಬೈ1,14,700

    ದೆಹಲಿ1,14,850

    ಕೋಲ್ಕತ್ತಾ1,14,700

    ಹೈದರಾಬಾದ್1,14,700

    ಪುಣೆ1,14,700

    ಬೆಂಗಳೂರು1,14,700

    ಇಂದು ಬೆಳ್ಳಿ ಬೆಲೆ (India Silver Price Today)

    1 ಕೆಜಿ ಬೆಳ್ಳಿ: ₹1,000ರವರೆಗೆ ಕುಸಿತ

    10 ಗ್ರಾಂ: ₹1,630

    100 ಗ್ರಾಂ: ₹16,300

    1000 ಗ್ರಾಂ (1 ಕೆಜಿ): ₹1,63,000

    ಭಾರತಕ್ಕೆ 53ನೇ CJI ಆಗಿ ನ್ಯಾಯಮೂರ್ತಿ ಸೂರ್ಯಕಾಂತ್: ರಾಷ್ಟ್ರಪತಿಗಳಿಂದ ಪ್ರಮಾಣ ವಚನ.


    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe to get the latest posts sent to your email.

    LEAVE A REPLY

    Related News

    ಮಹಾಲಯ ಅಮಾವಾಸ್ಯೆ 2026: ಅಕ್ಟೋಬರ್ 10ರಂದು ಆಚರಣೆ; ಪಿತೃಪೂಜೆಯ ಮಹತ್ವವೇನು?

    ಹಿಂದೂ ಧರ್ಮದಲ್ಲಿ ಮಹಾಲಯ ಅಮಾವಾಸ್ಯೆಗೆ ವಿಶೇಷ ಸ್ಥಾನವಿದೆ. ಪಿತೃಪಕ್ಷದ ಕೊನೆಯ ದಿನವಾದ ಈ ಸಂದರ್ಭದಲ್ಲಿ ಪೂರ್ವಜರನ್ನು ಸ್ಮರಿಸಿ, ಅವರ ಆತ್ಮಕ್ಕೆ ಶಾಂತಿ ಕೋರಿ ವಿವಿಧ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಲಾಗುತ್ತದೆ. ಈ ದಿನ ಶ್ರಾದ್ಧ,...

    ಕರ್ನಾಟಕಕ್ಕೆ ಗುಡ್‌ನ್ಯೂಸ್: ಯುಬಿಯಿಂದ ₹4,500 ಕೋಟಿ ಕೊಡುಗೆ, 36 ಸಾವಿರಕ್ಕೂ ಹೆಚ್ಚು ಉದ್ಯೋಗ

    ಬೆಂಗಳೂರು: ದೇಶದ ಅತಿದೊಡ್ಡ ಬಿಯರ್ ಉತ್ಪಾದನಾ ಸಂಸ್ಥೆ ಹಾಗೂ ಹೈನೆಕನ್‌ ಕಂಪನಿಯ ಭಾಗವಾಗಿರುವ ಬೆಂಗಳೂರು ಮೂಲದ 'ಯುನೈಟೆಡ್ ಬ್ರೂವರೀಸ್ ಲಿಮಿಟೆಡ್' (ಯುಬಿಎಲ್‌), ಕರ್ನಾಟಕದ ಆರ್ಥಿಕತೆ ಮತ್ತು ಉದ್ಯೋಗ ಸೃಷ್ಟಿಯಲ್ಲಿ ಮಹತ್ವದ ಪಾತ್ರ ವಹಿಸುತ್ತಿದೆ...

    Most Popular

    Recent Comments

    Home
    Play
    Notification
    Search