Friday, November 6, 2026
spot_img
More
    spot_img
    HomeLatest newsವಿಡಿಯೋ: ದಕ್ಷಿಣ ಭಾರತದಲ್ಲಿ ಹುಟ್ಟಿ ಉತ್ತರ ಭಾರತದಲ್ಲಿ ಸತ್ತ ಇಡ್ಲಿ!

    ವಿಡಿಯೋ: ದಕ್ಷಿಣ ಭಾರತದಲ್ಲಿ ಹುಟ್ಟಿ ಉತ್ತರ ಭಾರತದಲ್ಲಿ ಸತ್ತ ಇಡ್ಲಿ!

    ‘ಇಡ್ಲಿ’ ದಕ್ಷಿಣ ಭಾರತದ ಪ್ರಸಿದ್ಧ ಆಹಾರವಾಗಿದೆ. ಎಷ್ಟರ ಮಟ್ಟಿಗೆ ‘ಇಡ್ಲಿ’ ಜನಪ್ರತಿಯತೆ ಇದೆ ಎಂದರೆ ವಿಶ್ವ ಇಡ್ಲಿ ದಿನವನ್ನು ಪ್ರತಿ ವರ್ಷ ಮಾರ್ಚ್ 30ರಂದು ಆಚರಿಸಲಾಗುತ್ತದೆ. ತನ್ನದೇ ಆದ ಅಪಾರ ಅಭಿಮಾನಿಬಳಗವನ್ನು ಹೊಂದಿರುವ ಖಾದ್ಯ ‘ಇಡ್ಲಿ’.

    ಬೆಳಗಿನ ಉಪಹಾರಕ್ಕೆ ‘ಇಡ್ಲಿ’ ಹೇಳಿ ಮಾಡಿಸಿದ ಖಾದ್ಯವಾಗಿದೆ. ತೆಂಗಿನಕಾಯಿ ಚಟ್ನಿ, ಬಿಸಿ ಬಿಸಿ ಸಾಂಬಾರ್ ಜೊತೆ ಇಡ್ಲಿಯನ್ನು ಅನೇಕರು ಸವಿಯುತ್ತಾರೆ. ಹಲವಾರು ಸಮೀಕ್ಷೆಗಳು ಸಹ ಬೆಳಗಿನ ಉಪಹಾರಕ್ಕೆ ಇಡ್ಲಿ ಅತ್ಯುತ್ತಮ ಆಹಾರ ಎಂದು ಹೇಳಿವೆ. ದಕ್ಷಿಣ ಭಾರತದಲ್ಲಿ ಎಲ್ಲಿಗೆ ಹೋದರೂ ‘ಇಡ್ಲಿ’ ಹಾಯ್ ಎನ್ನುತ್ತದೆ. ಅಷ್ಟರ ಮಟ್ಟಿದೆ ಅದು ಫೇಮಸ್.

    ‘ಇಡ್ಲಿ’ ದಕ್ಷಿಣ ಭಾರತದ ಪ್ರಸಿದ್ಧ ಖಾದ್ಯ. ಇತ್ತೀಚಿಗೆ ‘ಇಡ್ಲಿ’ ಕುರಿತು Idli Kadai ಎಂಬ ಸಿನಿಮಾ ಸಹ ಬಂದಿದೆ. ಆದರೆ ಇಡ್ಲಿ ಮೇಲೆ ಈಗ ಬೇರೆ ಬೇರೆ ರೀತಿಯ ಪ್ರಯೋಗ ಆಗುತ್ತಿದೆ. ಗೀ ಇಡ್ಲಿ, ಗೀ ಪುಡಿ ಇಡ್ಲಿ ಹೀಗೆ ಹಲವಾರು ಪ್ರಯೋಗಕ್ಕೆ ಇಡ್ಲಿ ಮೈವೊಡ್ಡಿದೆ.

    ಆದರೆ ಈಗ ವೈರಲ್ ಆಗಿರುವ ವಿಡಿಯೋವೊಂದು ದಕ್ಷಿಣ ಭಾರತದ ಜನರನ್ನು ರೊಚ್ಚಿಗೆಬ್ಬಿಸಿದೆ. ಉತ್ತರ ಭಾರತದಲ್ಲಿ ಇಡ್ಲಿಯಿಂದ ತಯಾರು ಮಾಡುವ ಖಾದ್ಯ ನೋಡಿದ ಜನರು ‘ಇಡ್ಲಿ ದಕ್ಷಿಣ ಭಾರತದಲ್ಲಿ ಹುಟ್ಟಿ ಉತ್ತರ ಭಾರತದಲ್ಲಿ ಸತ್ತು ಹೋಗಿದೆ’ ಎಂದು ಕಮೆಂಟ್‌ಗಳನ್ನು ಮಾಡುತ್ತಿದ್ದಾರೆ.

    ಇಡ್ಲಿ ಬೋಂಡಾ: ಸಾಮಾಜಿಕ ಜಾಲತಾಣದಲ್ಲಿ ‘ಇಡ್ಲಿ’ ಬೋಂಡಾದ ಮಾದರಿ ವಿಡಿಯೋ ವೈರಲ್ ಆಗಿದೆ. ಜನರು ಇದನ್ನು ನೋಡಿ ದಕ್ಷಿಣದಲ್ಲಿ ಹುಟ್ಟಿ ಉತ್ತರದಲ್ಲಿ ಇಡ್ಲಿ ಸತ್ತು ಹೋಗಿದೆ. ಈ ದುರಂತದ ವಿಡಿಯೋ ನೋಡಿ ಎಂದು ವಿಡಿಯೋ ವೈರಲ್ ಮಾಡುತ್ತಿದ್ದಾರೆ.

    ವಿಡಿಯೋದಲ್ಲಿ ವ್ಯಕ್ತಿಯೊಬ್ಬ ಹಬೆಯಲ್ಲಿ ಚೆನ್ನಾಗಿ ಬೆಂದ ಇಡ್ಲಿಗಳನ್ನು ಇಳಿಸಿಕೊಳ್ಳುತ್ತಾನೆ. ಅದನ್ನು ಒಂದು ಬಾಕ್ಸ್‌ಗೆ ಹಾಕಿಕೊಳ್ಳುತ್ತಾನೆ. ಹೋ ಜನರಿಗೆ ತಿನ್ನಲು ಕೊಡುತ್ತಾನೆ ಅಂದುಕೊಂಡಿದ್ದರೆ ನಿಮ್ಮ ಊಹೆ ತಪ್ಪಾಗುತ್ತದೆ.

    ಚೆನ್ನಾಗಿ ಬೆಂದಿರುವ ಬೆಳ್ಳಗಿನ, ಮೆತ್ತನೆಯ ಇಡ್ಲಿ ನೇರವಾಗಿ ಜನರ ಕೈ ಸೇರುವುದಿಲ್ಲ. ಬಾಕ್ಸ್‌ಗೆ ಹಾಕಿಕೊಂಡ ಇಡ್ಲಿಯನ್ನು ಆತ ಇನ್ನೊಬ್ಬನಿಗೆ ಕೊಡುತ್ತಾನೆ. ಆತನ ಮುಂದೆ ಬಿಸಿಯಾಗಿ ಕುದಿಯುತ್ತಿರುವ ಎಣ್ಣೆಯ ಬಾಣಲೆ ಇದೆ.

    ಆತ ಕುದಿಯುವ ಎಣ್ಣೆಗೆ ಇಡ್ಲಿಗಳನ್ನು ಬಿಡುತ್ತಾನೆ. ಇದ್ಯಾವ ಖಾದ್ಯ ಎಂದು ನೀವು ಪ್ರಶ್ನೆ ಮಾಡುವಂತಿಲ್ಲ. ಖಾದ್ಯದ ಹೆಸರು ಹೇಳಿಲ್ಲ. ಆದರೆ ಇದನ್ನು ತಿನ್ನಲು ಜನರು ಸಾಲುಗಟ್ಟಿ ನಿಂತಿರುವುದನ್ನು ನೀವು ನೋಡಬಹುದು. ರಸ್ತೆ ಬದಿಯ ಕಾರ್ಟ್ ಒಂದರ ವಿಡಿಯೋ ಇದಾಗಿದೆ.

    ಇಡ್ಲಿಯನ್ನು ಬಾಣಲೆಗೆ ಹಾಕಿ ಕೆಂಪಾಗುವ ತನಕ ಅದನ್ನು ಕರಿಯುತ್ತಾರೆ. ಬಳಿಕ ಅದನ್ನು ಪ್ಲೇಟ್‌ಗೆ ಹಾಕಿ ಚಿಕ್ಕ ಪೀಸ್ ಪೀಸ್ ಮಾಡಿ, ಅದಕ್ಕೆ ಸಾಂಬಾರ್ ಮತ್ತು ಚಟ್ನಿ ಹಾಕಿ ತಿನ್ನಲು ಕೊಡುತ್ತಾರೆ. ಹಾಗೆ ಇಡ್ಲಿ, ಸಾಂಬಾರ್ ತಿನ್ನಬಹುದಲ್ಲ? ಎಂಬ ದಕ್ಷಿಣ ಭಾರತದ ಜನರ ಪ್ರಶ್ನೆಗೆ ಇಡ್ಲಿ ಕರಿದವರೇ ಉತ್ತರ ಕೊಡಬೇಕಿದೆ.

    ಇಡ್ಲಿ ಜೊತೆ ಬಿಸಿಬಿಸಿಯಾದ ಗರಿ ಗರಿ ವಡೆ ತಿನ್ನುವುದು ನಾವು ನೋಡಿದ್ದೇವೆ. ದಕ್ಷಿಣ ಭಾರತದಲ್ಲಿ ಇಡ್ಲಿಯಷ್ಟೇ ಪ್ರಸಿದ್ಧಿಪಡೆದಿರುವುದು ಉದ್ದಿನ ವಡೆ. ಆದರೆ ಇಡ್ಲಿಯನ್ನು ಕೆಂಪಾಗಿ ಕರಿದು ತಿನ್ನುವುದು ಯಾವ ಖಾದ್ಯ? ಎಂಬುದು ಜನರ ಪ್ರಶ್ನೆಯಾಗಿದೆ.

    ಇಂದು ಬೆಳಗ್ಗೆ 8 ಗಂಟೆಗೆ ಎಕ್ಸ್‌ ಖಾತೆಯಲ್ಲಿ ಹಾಕಿದ ಇಡ್ಲಿಯ ಈ ವಿಡಿಯೋ ಇದುವರೆಗೂ 142.6ಕೆ ವೀಕ್ಷಣೆ ಕಂಡಿದೆ. 117 ಜನರು ಇದನ್ನು ಹಂಚಿಕೊಂಡಿದ್ದಾರೆ. 112 ಜನರು ಕಮೆಂಟ್‌ಗಳನ್ನು ಹಾಕಿದ್ದಾರೆ.

    ಬಹುತೇಕ ಎಲ್ಲರೂ ಇಡ್ಲಿಯ ಪರವಾಗಿಯೇ ಇದ್ದಾರೆ. ಬಿಸಿಬಿಸಿ ಇಡ್ಲಿಯನ್ನು ಹಾಗೆ ಸವಿಯಬಹುದಿತ್ತು. ಅದನ್ನು ಕೆಂಪಗೆ ಕರಿದು, ಮತ್ತೆ ಪೀಸ್ ಪೀಸ್ ಮಾಡುವ ಮೂಲಕ ಇಡ್ಲಿ ಹತ್ಯೆ ಮಾಡಲಾಗಿದೆ ಎಂದು ಕಮೆಂಟ್‌ಗಳನ್ನು ಮಾಡುತ್ತಿದ್ದಾರೆ.


    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe to get the latest posts sent to your email.

    LEAVE A REPLY

    Related News

    ಮಹಾಲಯ ಅಮಾವಾಸ್ಯೆ 2026: ಅಕ್ಟೋಬರ್ 10ರಂದು ಆಚರಣೆ; ಪಿತೃಪೂಜೆಯ ಮಹತ್ವವೇನು?

    ಹಿಂದೂ ಧರ್ಮದಲ್ಲಿ ಮಹಾಲಯ ಅಮಾವಾಸ್ಯೆಗೆ ವಿಶೇಷ ಸ್ಥಾನವಿದೆ. ಪಿತೃಪಕ್ಷದ ಕೊನೆಯ ದಿನವಾದ ಈ ಸಂದರ್ಭದಲ್ಲಿ ಪೂರ್ವಜರನ್ನು ಸ್ಮರಿಸಿ, ಅವರ ಆತ್ಮಕ್ಕೆ ಶಾಂತಿ ಕೋರಿ ವಿವಿಧ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಲಾಗುತ್ತದೆ. ಈ ದಿನ ಶ್ರಾದ್ಧ,...

    ಕರ್ನಾಟಕಕ್ಕೆ ಗುಡ್‌ನ್ಯೂಸ್: ಯುಬಿಯಿಂದ ₹4,500 ಕೋಟಿ ಕೊಡುಗೆ, 36 ಸಾವಿರಕ್ಕೂ ಹೆಚ್ಚು ಉದ್ಯೋಗ

    ಬೆಂಗಳೂರು: ದೇಶದ ಅತಿದೊಡ್ಡ ಬಿಯರ್ ಉತ್ಪಾದನಾ ಸಂಸ್ಥೆ ಹಾಗೂ ಹೈನೆಕನ್‌ ಕಂಪನಿಯ ಭಾಗವಾಗಿರುವ ಬೆಂಗಳೂರು ಮೂಲದ 'ಯುನೈಟೆಡ್ ಬ್ರೂವರೀಸ್ ಲಿಮಿಟೆಡ್' (ಯುಬಿಎಲ್‌), ಕರ್ನಾಟಕದ ಆರ್ಥಿಕತೆ ಮತ್ತು ಉದ್ಯೋಗ ಸೃಷ್ಟಿಯಲ್ಲಿ ಮಹತ್ವದ ಪಾತ್ರ ವಹಿಸುತ್ತಿದೆ...

    Most Popular

    Recent Comments

    Home
    Play
    Notification
    Search