ಚಿಕ್ಕಬಳ್ಳಾಪುರ: ರಾಜ್ಯ ಕಾಂಗ್ರೆಸ್‌ನಲ್ಲಿ ಬದಲಾವಣೆ ಗಾಳಿ ಜೋರಾಗಿ ಬೀಸುತ್ತಿದ್ದು, ಸಿದ್ದರಾಮಯ್ಯ ಬಳಿಕ ಹೊಸ ಮುಖ್ಯಮಂತ್ರಿಯ ಆಗಮನವಾಗಲಿದೆ ಎಂಬ ಮಾತುಗಳು ಕೇಳಿಬರುತ್ತಿವೆ.
ಡಿಕೆ ಶಿವಕುಮಾರ್ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರನ್ನು ಭೇಟಿ ಮಾಡಿದ್ದು ಅಧಿಕಾರ ಹಂಚಿಕೆ ಬಗ್ಗೆ ಚರ್ಚೆ ನಡೆಸಿದ್ದಾರೆ ಎನ್ನಲಾಗುತ್ತಿದೆ. ಇದರ ಬೆನ್ನಲ್ಲೇ ಸಿದ್ದರಾಮಯ್ಯ ಪರ ಶಾಸಕರು ಸಿಎಂ ನಿವಾಸಕ್ಕೆ ಭೇಟಿ ನೀಡಲಾರಂಭಿಸಿದ್ದಾರೆ.
ಈ ಎಲ್ಲ ಬೆಳವಣಿಗೆಗಳು ಸಿಎಂ ಬದಲಾವಣೆ ಚರ್ಚೆ ಸುಳ್ಳಲ್ಲ ಎಂಬುದನ್ನು ತಿಳಿಸುತ್ತಿವೆ. ಇನ್ನು ಈ ಕುರಿತು ಸ್ವತಃ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದು, ಹೈಕಮಾಂಡ್ ತೀರ್ಮಾನವೇ ಅಂತಿಮ ತೀರ್ಮಾನ ಎಂದು ಮತ್ತೊಮ್ಮೆ ಹೇಳಿದ್ದಾರೆ.
ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ಹನುಮಂತಪುರ ಗ್ರಾಮದಲ್ಲಿ ಈ ಕುರಿತು ಮಾತನಾಡಿದ ಸಿದ್ದರಾಮಯ್ಯ ನಮ್ಮಲ್ಲಿ ಹೈಕಮಾಂಡ್ ಇದೆ, ಅವರ ತೀರ್ಮಾನವೇ ಅಂತಿಮ ಎಂದರು. ಹೈಕಮಾಂಡ್‌ನವರು ನಾನೇ ಮುಂದುವರಿಯಲಿ ಎಂದರೆ ನಾನೇ ಸಿಎಂ ಆಗಿ ಮುಂದುವರಿಯುತ್ತೇನೆ, ಹೈಕಮಾಂಡ್ ಹೇಳಿದ್ದನ್ನು ನಾನೂ ಕೇಳಬೇಕು, ಡಿಕೆ ಸಹ ಕೇಳಬೇಕು ಎಂದು ತಿಳಿಸಿದರು.
ಈ ಮೂಲಕ ಸಿದ್ದರಾಮಯ್ಯ ಮೊನ್ನೆಯಷ್ಟೇ ತಾವು ನೀಡಿದ ಹೇಳಿಕೆಯ ದೃಷ್ಟಿಕೋನದಲ್ಲಿ ಉಲ್ಟಾ ಹೊಡೆದಿದ್ದಾರೆ. 5 ವರ್ಷ ನಾನೇ ಸಿಎಂ, ಎರಡು ವರ್ಷ ನಾನೇ ಬಜೆಟ್ ಮಂಡಿಸಲಿದ್ದೇನೆ ಎಂದಿದ್ದ ಸಿದ್ದರಾಮಯ್ಯ ಇದೀಗ ಹೈಕಮಾಂಡ್ ತೀರ್ಮಾನಕ್ಕೆ ಬದ್ಧ ಎಂದು ಹೇಳಿಕೆ ನೀಡಿದ್ದು, ಬದಲಾವಣೆಯ ಕುರಿತು ಕುತೂಹಲ ಮೂಡಿಸಿದ್ದಾರೆ.
ಚನ್ನಪಟ್ಟಣ: ತಂದೆಯಿಂದಲೇ ಮಗಳ ಮೇಲೆ ಅತ್ಯಾಚಾರ; ರೆಡ್‌ಹ್ಯಾಂಡ್ ಆಗಿ ಪತ್ನಿಗೆ ಸಿಕ್ಕಿಬಿದ್ದ ಪಾಪಿ!
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


