ಚನ್ನಪಟ್ಟಣ: ತಾಲೂಕಿನ ಅಕ್ಕೂರು ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಅಮಾನವೀಯ ಘಟನೆಯೊಂದು ವರದಿಯಾಗಿದ್ದು, ತಂದೆಯೇ ತನ್ನ ಸ್ವಂತ ಮಗಳ ಮೇಲೆ ಅತ್ಯಾಚಾರ ಎಸಗಿರುವ ಘಟನೆ ಬೆಳಕಿಗೆ ಬಂದಿದೆ.
ಪತ್ನಿ ಪೊಲೀಸರಿಗೆ ನೀಡಿದ ದೂರಿನ ಆಧಾರದ ಮೇಲೆ ತಿಮ್ಮರಾಜು ಎಂಬಾತನನ್ನು ಬಂಧಿಸಲಾಗಿದೆ. ಬೆಂಗಳೂರಿನಲ್ಲಿ ಪೈಂಟಿಂಗ್ ಕೆಲಸ ಮಾಡುತ್ತಿದ್ದ ತಿಮ್ಮರಾಜು ಹದಿನೈದು ದಿನಕ್ಕೊಮ್ಮೆ ತಾಲೂಕಿನಲ್ಲಿರುವ ತನ್ನ ಸ್ವಗ್ರಾಮಕ್ಕೆ ಭೇಟಿ ನೀಡುತ್ತಿದ್ದ.
ತಿಮ್ಮರಾಜು ಹಾಗೂ ದಂಪತಿಗೆ ಮೂವರು ಹೆಣ್ಣುಮಕ್ಕಳಿದ್ದು, ಈ ಪೈಕಿ ಹಿರಿಯ ಪುತ್ರಿ ಬುದ್ದಿಮಾಂದ್ಯಳಗಾಗಿರುವ ಕಾರಣ ತಾಯಿಯ ಜತೆ ಊರಿನಲ್ಲಿಯೇ ವಾಸವಿರುತ್ತಾಳೆ. ಉಳಿದ ಇಬ್ಬರು ಮಕ್ಕಳು ಕೆಲಸ ಹಾಗೂ ವಿದ್ಯಾಭ್ಯಾಸಕ್ಕೆಂದು ಬೇರೆ ಊರುಗಳಲ್ಲಿ ವಾಸವಿದ್ದಾರೆ.
ಇನ್ನು ಬುದ್ದಿಮಾಂದ್ಯ ಮಗಳ ಜತೆ ಊರಿನಲ್ಲಿ ವಾಸವಿದ್ದ ತಾಯಿ ಕೂಲಿ ಕೆಲಸಕ್ಕೆಂದು ತೆರಳಿದ್ದರು. ಎಂದಿನಂತೆ ಹೊರಗಿನಿಂದ ಬಾಗಿಲು ಲಾಕ್ ಮಾಡಿಕೊಂಡು ತೆರಳಿದ್ದ ಆಕೆ ಸಂಜೆ 4 ಗಂಟೆಗೆ ವಾಪಸ್ ಬಂದು ನೋಡಿದಾಗ ಮಗಳು ಇರುತ್ತಿದ್ದ ಜಾಗದಲ್ಲಿ ಇರಲಿಲ್ಲ. ಕೂಡಲೇ ಕೋಣೆಯ ಕಡೆ ಪರಿಶೀಲಿಸಿದಾಗ ಪತಿ ತಿಮ್ಮರಾಜು ಮಗಳ ಮೇಲೆಯೇ ಅತ್ಯಾಚಾರ ಎಸಗುತ್ತಿದ್ದದ್ದು ಕಂಡುಬಂದಿದೆ.
ಹೀಗೆ ಪತ್ನಿಗೆ ರೆಡ್‌ಹ್ಯಾಂಡ್ ಆಗಿ ಸಿಕ್ಕಿಬಿದ್ದ ಕೂಡಲೇ ʼಯಾರಿಗೂ ಹೇಳಬೇಡ, ತನ್ನಿಂದ ತಪ್ಪಾಗಿದೆʼ ಎಂದು ಬೇಡಿಕೊಂಡಿದ್ದಾನೆ. ಬಳಿಕ ಪತ್ನಿ ತನ್ನ ಸಹೋದರನಿಗೆ ವಿಷಯ ತಿಳಿಸಿ ಅಕ್ಕೂರು ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಿದ್ದಾರೆ.
ಸಿದ್ದರಾಮಯ್ಯ ಕೊಟ್ಟ ಮಾತನ್ನು ತಪ್ಪುವುದಿಲ್ಲ, ಅದೃಷ್ಟ ಇದ್ದರೆ ನಮ್ಮ ಸಿಎಂ ಆಗ್ತಾರೆ ಎಂದ ಡಿಕೆ ಸುರೇಶ್
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


