ಸಸ್ಯಗಳ ಸಂರಕ್ಷಣೆ ಹಾಗೂ ಉತ್ತಮ ಪರಿಸರ ಹಾಗೂ ವಾತಾವರಣ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಸಸ್ಯಕಾಶಿ ಲಾಲ್‌ಬಾಗ್‌ನಲ್ಲಿ ಕಠಿಣ ನಿಯಮಗಳನ್ನು ಜಾರಿಗೊಳಿಸಿ ತೋಟಗಾರಿಕಾ ಇಲಾಖೆ ಆದೇಶ ಹೊರಡಿಸಿದೆ.
ಇನ್ನು ಲಾಲ್‌ಬಾಗ್‌ನಲ್ಲಿ ಇತ್ತೀಚೆಗೆ ಯುವಕರ ಗುಂಪು ಕಿತ್ತಾಟದಲ್ಲಿ ನಿರತರಾಗಿದ್ದ ವಿಡಿಯೊ ವೈರಲ್ ಆದ ಬಳಿಕ ಇಲ್ಲಿ ಕಠಿಣವಾದ ನಿಯಮವನ್ನು ಜಾರಿಗೊಳಿಸಬೇಕು ಎಂದು ಸಾರ್ವಜನಿಕರಿಂದ ದೊಡ್ಡ ಮಟ್ಟದಲ್ಲಿ ಮನವಿ ಕೇಳಿಬಂದ ಬಳಿಕ ಈ ನಿಯಮ ಜಾರಿಗೆ ತಂದಿರುವುದು ಒಳ್ಳೆಯ ನಡೆ ಎಂದು ಮೆಚ್ಚುಗೆ ವ್ಯಕ್ತವಾಗಿದೆ.
ಇನ್ನು ಲಾಲ್‌ಬಾಗ್‌ನಲ್ಲಿ ಇನ್ನುಮುಂದೆ ಹೊರಗಿನವರು ಗಿಡಗಳನ್ನು ನೆಡಲು ಅವಕಾಶವಿರುವುದಿಲ್ಲ ಎಂದು ನಿಯಮ ಹೊರಡಿಸಿರುವ ತೋಟಗಾರಿಕಾ ಇಲಾಖೆ ಸ್ಲೈಕ್ಲಿಂಗ್ ಹಾಗೂ ಸ್ಕೇಟಿಂಗ್‌ಗಳ ಮೇಲೆ ನಿರ್ಬಂಧ ಹೇರಿದೆ. ಬೆಳಗ್ಗೆ 5.30ರಿಂದ 9 ಗಂಟೆಯವರಗೆ ಹಾಗೂ ಸಂಜೆ 4.30ರಿಂದ 7 ಗಂಟೆಯವರೆಗೆ ಮಾತ್ರ ಜಾಗಿಂಗ್ ಹಾಗೂ ವಾಕಿಂಗ್‌ಗೆ ಅವಕಾಶವಿರಲಿದೆ.
15 ಚಟುವಟಿಕೆಗಳಿಗೆ ನಿರ್ಬಂಧ:
- ಅಸಭ್ಯ ವರ್ತನೆ
- ಏಕಬಳಕೆ ಪ್ಲಾಸ್ಟಿಕ್ ವಸ್ತುಗಳ ಬಳಕೆ
- ಮಾದಕ ದ್ರವ್ಯಗಳ ಸೇವನೆ
- ಪ್ರಿ-ಪೋಸ್ಟ್ ವೆಡ್ಡಿಂಗ್ ಫೋಟೋಶೂಟ್, ರೀಲ್ಸ್, ಟಿ.ವಿ. ಧಾರಾವಾಹಿ, ಸಿನಿಮಾ, ಮಾಡೆಲಿಂಗ್, ಬೇಬಿ ಶವರ್ ಅಥವಾ ಡ್ರೋನ್ ಛಾಯಾಗ್ರಹಣ
- ಮ್ಯಾರಥಾನ್, ವಾಕಥಾನ್, ಸೈಟಿಂಗ್, ಸೈಕ್ಲಿಂಗ್
- ಸಾಮೂಹಿಕ ಯೋಗ ಚಟುವಟಿಕೆಗಳು
- ಮೊಬೈಲ್‌ನಲ್ಲಿ ವ್ಯಾಪಾರ
- ಬ್ಯಾನರ್‌ಗಳು, ಹೋರ್ಡಿಂಗ್‌ಗಳನ್ನು ಪ್ರದರ್ಶಿಸುವುದು
- ಸ್ಫೋಟಕಗಳು, ಶಸ್ತ್ರಾಸ್ತ್ರಗಳು ಅಥವಾ ಸರ್ಕಾರದಿಂದ ನಿಷೇಧಿಸಲಾದ ಯಾವುದೇ ವಸ್ತು
- ಖಾಸಗಿ ವಾಹನಗಳು
- ಸೌಂಡ್ ಸಿಸ್ಟಮ್‌ಗಳು, ಪಟಾಕಿಗಳು, ಗಾಳಿಪಟಗಳು ಮತ್ತು ಸಂಗೀತ ವಾದ್ಯಗಳು ಯಾವುದೇ ಸರ್ಕಾರೇತರ ಸಾರ್ವಜನಿಕ ಕಾರ್ಯಕ್ರಮಗಳು
- ಮರ ಹತ್ತುವುದು, ರೆಂಬೆಗಳೊಂದಿಗೆ ಆಟವಾಡುವುದು, ಹಣ್ಣು, ಹೂವುಗಳನ್ನು ಕಿತ್ತುಕೊಳ್ಳುವುದು
- ಪಕ್ಷಿಗಳು ಮತ್ತು ಮೀನುಗಳಿಗೆ ಆಹಾರ ನೀಡುವುದು ಹಾಗೂ ಸಾಕುಪ್ರಾಣಿಗಳನ್ನು ಕರೆತರುವುದು
- ಹುಲ್ಲುಗಾವಲುಗಳಲ್ಲಿ ಆಟವಾಡುವುದು
- ಹೊರಗಿನಿಂದ ಆಹಾರ, ಆಟಿಕೆಗಳು ಮತ್ತು ಬಲೂನ್‌ಗಳನ್ನು ತರುವುದು
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


