ಈ ಬಾರಿಯ ಬಿಗ್ಬಾಸ್ ಕನ್ನಡ ಕಾರ್ಯಕ್ರಮ ಕಳೆದ ಆವೃತ್ತಿಗಳಿಗಿಂತ ಹೆಚ್ಚಿನ ವಿವಾದ ಹಾಗೂ ದೂರುಗಳನ್ನು ಪಡೆದುಕೊಳ್ಳುವತ್ತ ಹೆಜ್ಜೆ ಹಾಕಿದೆ. ಪರಿಸರ ನಿಯಮ ಪಾಲನೆ ಮಾಡದ ಕಾರಣ ಒಂದು ದಿನ ಸ್ಪರ್ಧಿಗಳನ್ನು ಹೊರಗಿಡುವ ಮಟ್ಟಕ್ಕೆ ತಲುಪಿದ್ದ ರಿಯಾಲಿಟಿ ಶೋನಲ್ಲಿ ಬಳಿಕ ಗಿಲ್ಲಿ ನಟ ಮಹಿಳಾ ಸ್ಪರ್ಧಿ ಬಟ್ಟೆ ಬಿಸಾಕಿದ್ದಕ್ಕೆ ದೂರು ಮಹಿಳಾ ಆಯೋಗಕ್ಕೆ ದೂರು ಬಂದಿತ್ತು.
ಇದೀಗ ಸಾಮಾಜಿಕ ಕಾರ್ಯಕರ್ತೆ ಸಂಧ್ಯಾ ಪವಿತ್ರಾ ಎಂಬುವರು ಬಿಗ್ಬಾಸ್ ಕುರಿತಾಗಿ ಮತ್ತೊಂದು ದೂರನ್ನು ಮಹಿಳಾ ಆಯೋಗಕ್ಕೆ ನೀಡಿದ್ದಾರೆ. ಕಾರ್ಯಕ್ರಮದ ನಿರೂಪಕ ಸುದೀಪ್, ಸ್ಪರ್ಧಿಗಳಾದ ಅಶ್ವಿನಿ ಗೌಡ, ರಿಷಾ ವಿರುದ್ಧ ಸಂಧ್ಯಾ ದೂರನ್ನು ನೀಡಿದ್ದಾರೆ.
ಈ ಮೂವರೂ ಸಹ ಮತ್ತೋರ್ವ ಸ್ಪರ್ಧಿ ರಕ್ಷಿತಾ ಶೆಟ್ಟಿಯ ವಿರುದ್ಧ ದಬ್ಬಾಳಿಕೆ ಮಾಡುತ್ತಿದ್ದಾರೆ ಎಂದು ಆರೋಪಿಸಿ ದೂರನ್ನು ದಾಖಲು ಮಾಡಲಾಗಿದೆ. ದೂರು ದಾಖಲಿಸಿದ ಬಳಿಕ ಸಂಧ್ಯಾ ಮಹಿಳಾ ಆಯೋಗದ ಕಚೇರಿ ಮುಂದೆ ನಿಂತು ದೂರಿನ ಕುರಿತು ಮಾತನಾಡಿದ್ದು, ಕಿಚ್ಚ ಸುದೀಪ್ ಅವರಿಗೆ ಮಾನವೀಯತೆ ಮರೆತು ಹೋಯಿತಾ ಎಂದು ಪ್ರಶ್ನಿಸಿದ್ದಾರೆ. ರಕ್ಷಿತಾಗೆ ಪಿತ್ತ ನೆತ್ತಿಗೇರಿತು ಎನ್ನುವ ತಾವು ಅದೇ ಅಶ್ವಿನಿ ಗೌಡ ಏನಾದರೂ ತಪ್ಪು ಮಾಡಿದಾಗ ಏಕೆ ಸೈಲೆಂಟ್ ಆಗಿ ಇರುತ್ತೀರಿ ಎಂದು ಪ್ರಶ್ನಿಸಿದ್ದಾರೆ.
ಅಶ್ವಿನಿ ಗೌಡ ಎಲ್ಲ ಸ್ಪರ್ಧಿಗಳಿಗೂ ಏಯ್ ಎಂದು ಏಕವಚನದಲ್ಲಿ ಬಾಯಿಗೆ ಬಂದ ಹಾಗೆ ಮಾತನಾಡುತ್ತಾರೆ, ಅದಕ್ಕೆ ಸುದೀಪ್ ಏನನ್ನೂ ಹೇಳುವುದಿಲ್ಲ. ಈ ರೀತಿ ಶ್ರೀಮಂತರು ಹಾಗೂ ಬಡವರೆಂದು ಬೇಧ ಮಾಡುವುದಾದರೆ ಬಡವರ ಮಕ್ಕಳ ಹೆಣ್ಣು ಮಕ್ಕಳನ್ನು ಕರೆಸಿ ಏಕೆ ಅವಮಾನ ಮಾಡುತ್ತೀರ? ಅವರಿಗೂ ಆಚೆ ಒಂದು ಕುಟುಂಬವಿದೆ, ಅವರಿಗೂ ಮುಂದೆ ಜೀವನವಿದೆ, ನಿಮ್ಮ ಅನುಕೂಲಕ್ಕಾಗಿ ಅವರನ್ನು ಕರೆಸಿ ಅವಮಾನಿಸುವುದು ಎಷ್ಟು ಸರಿ ಎಂದು ಸಂಧ್ಯಾ ಆಕ್ರೋಶ ಹೊರಹಾಕಿದ್ದಾರೆ.
ಇನ್ನು ಪುರುಷನಿಂದ ಮಹಿಳೆಗೆ ದೌರ್ಜನ್ಯ ನಡೆದಾಗ ಮಾತ್ರ ಮಹಿಳಾ ಆಯೋಗಕ್ಕೆ ಬರುವುದಲ್ಲ, ಮಹಿಳೆಯಿಂದ ಪುರುಷನ ಮೇಲೆ ದೌರ್ಜನ್ಯವಾದಾಗಲೂ ಸಹ ಮಹಿಳಾ ಆಯೋಗಕ್ಕೆ ಬರಬಹುದು ಎಂದ ಸಂಧ್ಯಾ ಗಿಲ್ಲಿ ಬಟ್ಟೆ ಎಸೆದದ್ದಕ್ಕೆ ದೂರು ದಾಖಲಾಗಿತ್ತು, ಆದರೆ ಗಿಲ್ಲಿ ಮೇಲೆ ಅದೇ ಮಹಿಳಾ ಸ್ಪರ್ಧಿ ಹಲ್ಲೆ ಮಾಡಿದ್ದಕ್ಕೆ ನಾನು ದೂರು ದಾಖಲು ಮಾಡಿದ್ದೇನೆ ಎಂದು ಕಿಡಿಕಾರಿದ್ದಾರೆ.
ಸಾರ್ವಜನಿಕ ಹಣ ದೋಚುವವರನ್ನು ಗುಂಡಿಕ್ಕಿ ಕೊಲ್ಲಬೇಕು; ಸರ್ಕಾರಕ್ಕೆ ಯತ್ನಾಳ್ ಆಗ್ರಹ
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


