ಬೆಂಗಳೂರಿನಲ್ಲಿ ಬಹುನಿರೀಕ್ಷಿತ ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ರಚನೆಯಾದ ನಂತರ, ಚುನಾವಣೆ ಸಿದ್ಧತೆಗಳು ಚುರುಕುಗೊಂಡಿವೆ. ಈ ಹಿಂದೆ ಇದ್ದ 368 ವಾರ್ಡ್‌ಗಳ ಸಂಖ್ಯೆಯನ್ನು ಇದೀಗ 369 ಕ್ಕೆ ಹೆಚ್ಚಿಸಲಾಗಿದೆ.ಬೆಂಗಳೂರು ಪಶ್ಚಿಮ ಪಾಲಿಕೆ ವ್ಯಾಪ್ತಿಗೆ ಒಂದು ಹೊಸ ವಾರ್ಡ್ ಸೇರ್ಪಡೆಯಾಗಿದೆ.
ಬೆಂಗಳೂರು ಪಶ್ಚಿಮ ಪಾಲಿಕೆ ವ್ಯಾಪ್ತಿಯಲ್ಲಿ ಒಂದು ಹೆಚ್ಚುವರಿ ವಾರ್ಡ್ ಸೇರ್ಪಡೆಯಾಗಿದ್ದು, ಒಟ್ಟು ವಾರ್ಡ್‌ಗಳ ಸಂಖ್ಯೆ 369 ಆಗಿದೆ.ವಾರ್ಡ್‌ಗಳ ಗಡಿರೇಖೆ ಮತ್ತು ರಸ್ತೆಗಳನ್ನು ಪರಿಷ್ಕರಿಸಿ ಈ ಅಂತಿಮ ಪಟ್ಟಿ ಬಿಡುಗಡೆ ಮಾಡಲಾಗಿದೆ.ವಾರ್ಡ್ ಮೀಸಲಾತಿ ಪಟ್ಟಿಗೆ ಸಾರ್ವಜನಿಕರು ಅಕ್ಟೋಬರ್ 15 ರೊಳಗೆ ಆಕ್ಷೇಪಣೆ ಸಲ್ಲಿಸಲು ಅವಕಾಶ ನೀಡಲಾಗಿತ್ತು.
ಐದು ನಗರ ಪಾಲಿಕೆಗಳು ಮತ್ತು ವಾರ್ಡ್ ವಿವರ:
ಇತ್ತೀಚಿನ ವಾರ್ಡ್ ಮರುಪರಿಷ್ಕರಣೆ ವೇಳೆ, ಹಿಂದಿನ ವಾರ್ಡ್‌ಗಳಿಗೆ ನೀಡಲಾಗಿದ್ದ ನಾಡಪ್ರಭು ಕೆಂಪೇಗೌಡರು, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕವಿ ಕುವೆಂಪು, ಕರ್ನಾಟಕ ರತ್ನ ನಟ ಪುನೀತ್ ರಾಜಕುಮಾರ್, ಮಾಜಿ ಮುಖ್ಯಮಂತ್ರಿಗಳು ಬಂಗಾರಪ್ಪ, ಕೆಂಗಲ್ ಹನುಮಂತಯ್ಯ ಮೊದಲಾದ ಗಣ್ಯರ ಹೆಸರುಗಳಲ್ಲಿ ಕೆಲವು ಕೈಬಿಡಲಾಗಿದೆ.
ಪ್ರಸ್ತುತ, ವಿವಿಧ ಪಾಲಿಕೆಗಳಿಗೆ ಎಷ್ಟು ವಾರ್ಡ್ಗಳನ್ನು ಹಂಚಿಕೆ ಮಾಡಲಾಗಿದೆ ಎಂಬ ವಿವರವನ್ನು ಕೆಳಗಡೆ ನೀಡಲಾಗಿದೆ.ಬಿಬಿಎಂಪಿಯನ್ನು ವಿಸರ್ಜಿಸಿ ಸೃಷ್ಟಿಸಲಾಗಿರುವ ಈ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಅಡಿಯಲ್ಲಿ ಐದು ನಗರ ಪಾಲಿಕೆಗಳನ್ನು ರಚಿಸಲಾಗಿದೆ. ಈ ಪಾಲಿಕೆಗಳಿಗೆ ವಾರ್ಡ್‌ಗಳನ್ನು ವಿಂಗಡಿಸಲಾಗಿದ್ದು, ಅದರ ವಿವರ ಇಲ್ಲಿದೆ:
ಬೆಂಗಳೂರು ದಕ್ಷಿಣ ನಗರ ಪಾಲಿಕೆ – 72 ವಾರ್ಡ್.
ಬೆಂಗಳೂರು ಉತ್ತರ ನಗರ ಪಾಲಿಕೆ – 72 ವಾರ್ಡ್
ಬೆಂಗಳೂರು ಪಶ್ಚಿಮ ನಗರ ಪಾಲಿಕೆ – 112 ವಾರ್ಡ್
ಬೆಂಗಳೂರು ಪೂರ್ವ ನಗರ ಪಾಲಿಕೆ – 50 ವಾರ್ಡ್
ಬೆಂಗಳೂರು ಕೇಂದ್ರ ನಗರ ಪಾಲಿಕೆ – 63 ವಾರ್ಡ್
ಒಟ್ಟು ವಾರ್ಡ್‌ಗಳ ಸಂಖ್ಯೆ 369
ಬೆಂಗಳೂರಿನ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆದು ಬರೋಬ್ಬರಿ 10 ವರ್ಷಗಳಾಗಿದೆ (ಕಡೆಯ ಚುನಾವಣೆ 2015 ರಲ್ಲಿ ನಡೆದಿತ್ತು).ಈಗ ವಾರ್ಡ್ ವಿಂಗಡಣೆ ಅಂತಿಮಗೊಂಡಿದ್ದು, ಇನ್ನು ಕೇವಲ ವಾರ್ಡ್‌ಗಳಿಗೆ ಮೀಸಲಾತಿ ನಿಗದಿಪಡಿಸಿ ಚುನಾವಣೆ ಅಧಿಸೂಚನೆ ಹೊರಡಿಸುವುದು ಮಾತ್ರ ಬಾಕಿ ಇದೆ.ಅಂದಾಜಿನ ಪ್ರಕಾರ, ಫೆಬ್ರವರಿ ಅಂತ್ಯದೊಳಗೆ ಗ್ರೇಟರ್ ಬೆಂಗಳೂರು ಪ್ರಾಧಿಕಾರಕ್ಕೆ ಚುನಾವಣೆ ನಡೆಯುವ ನಿರೀಕ್ಷೆ ಇದೆ.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


