Thursday, September 3, 2026
spot_img
More
    spot_img
    HomeLatest newsಸ್ಥಳೀಯ ಭಾಷೆ ಮಾತನಾಡದೇ ಹಿಂದಿ ಮಾತನಾಡಿದ್ದಕ್ಕೆ ಹಿಗ್ಗಾಮುಗ್ಗಾ ಹಲ್ಲೆ; ಮನನೊಂದ 19 ವರ್ಷದ ವಿದ್ಯಾರ್ಥಿ ಆತ್ಮಹತ್ಯೆ!

    ಸ್ಥಳೀಯ ಭಾಷೆ ಮಾತನಾಡದೇ ಹಿಂದಿ ಮಾತನಾಡಿದ್ದಕ್ಕೆ ಹಿಗ್ಗಾಮುಗ್ಗಾ ಹಲ್ಲೆ; ಮನನೊಂದ 19 ವರ್ಷದ ವಿದ್ಯಾರ್ಥಿ ಆತ್ಮಹತ್ಯೆ!

    ಅತಿಯಾದರೆ ಅಮೃತವೂ ಸಹ ವಿಷ ಎನ್ನುವ ಮಾತಿದೆ. ಅದರಂತೆ ಯಾವುದೇ ವಿಷಯದ ಮೇಲಿನ ಪ್ರೀತಿ ಅತಿಯಾದರೆ ಅದೂ ಸಹ ಒಳ್ಳೆಯದಲ್ಲ. ಅದಕ್ಕೆ ತಾಜಾ ಉದಾಹರಣೆ ಭಾಷೆ ವಿಷಯವಾಗಿ ನಡೆದ ಜಗಳ ಕೊನೆಯಲ್ಲಿ ಆತ್ಮಹತ್ಯೆಯಲ್ಲಿ ಕೊನೆಯಾಗಿರುವುದು.

    Advertisement

    ಹೌದು, ಮಹಾರಾಷ್ಟ್ರದ ಥಾಣೆಯಲ್ಲಿ ಸ್ಥಳೀಯರು 19 ವರ್ಷದ ವಿದ್ಯಾರ್ಥಿಯೋರ್ವ ಮರಾಠಿ ಮಾತನಾಡದೇ ಹಿಂದಿ ಮಾತನಾಡಿದ್ದಕ್ಕೆ ಹಲ್ಲೆ ನಡೆಸಿದ್ದು, ಇದರಿಂದ ಮನನೊಂದ ವಿದ್ಯಾರ್ಥಿ ತನ್ನ ಅಪಾರ್ಟ್‌ಮೆಂಟ್‌ನಲ್ಲಿ ಆತ್ಮಹತ್ಯೆಗೆ ಶರಣನಾಗಿದ್ದಾನೆ.

    ಆರ್ನವ್‌ ಲಕ್ಷ್ಮಣ್‌ ಖೈರೆ ಎಂಬ ಮೊದಲ ವರ್ಷದ ವಿಜ್ಞಾನ ಪದವಿ ವಿದ್ಯಾರ್ಥಿ ಆತ್ಮಹತ್ಯೆಗೆ ಶರಣಾಗಿರುವ ದುರ್ದೈವಿ. ಇನ್ನು ಕಲ್ಯಾಣ್‌ನಿಂದ ಥಾಣೆಯಲ್ಲಿರುವ ತನ್ನ ಕಾಲೇಜಿಗೆ ಸ್ಥಳೀಯ ರೈಲು ಬಳಸಿ ಪ್ರಯಾಣ ಮಾಡುತ್ತಿದ್ದ ಆರ್ನವ್‌ಗೆ ಸ್ಥಳೀಯರೊಬ್ಬರು ರಶ್‌ ಇದ್ದ ಕಾರಣ ತುಸು ಪಕ್ಕಕ್ಕೆ ಸರಿಯುವಂತೆ ಹೇಳಿದ್ದಾರೆ. ಈ ವೇಳೆ ಆತ ಹಿಂದಿಯಲ್ಲಿ ಮಾತನಾಡಿದ ಕಾರಣ ಸ್ಥಳೀಯರು ಮರಾಠಿ ಬರುವುದಿಲ್ಲವೇ ಎಂದು ಪ್ರಶ್ನಿಸಿ ಬಳಿಕ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಇದನ್ನು ಸ್ವತಃ ಆರ್ನವ್‌ ತನಗೆ ಕರೆ ಮಾಡಿದಾಗ ಹೇಳಿಕೊಂಡ ಎಂದು ಮೃತನ ತಂದೆ ತಿಳಿಸಿದ್ದಾರೆ.

    ಘಟನೆ ಬಗ್ಗೆ ಕರೆ ಮಾಡಿ ದುಃಖದಿಂದ ಹೇಳಿಕೊಂಡ ಆರ್ನವ್‌ ಆತನ ತಂದೆ ಕೆಲಸ ಮುಗಿಸಿ ಮನೆಗೆ ಬಂದಾಗ ಬಾಗಿಲು ಲಾಕ್‌ ಮಾಡಿಕೊಂಡಿದ್ದ. ಸ್ಥಳೀಯರ ಸಹಾಯ ಪಡೆದು ಬಾಗಿಲು ತೆರೆದ ತಂದೆಗೆ ಆತ ನೇಣು ಬಿಗಿದುಕೊಂಡಿರುವ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ.

    Disclaimer: ಯಾವುದೇ ಸಮಸ್ಯೆಗೂ ಸಾವೊಂದೇ ಪರಿಹಾರವಲ್ಲ. ಆತ್ಮಹತ್ಯೆಯ ಯೋಚನೆ ಬಂದರೆ ನಿಮ್ಮ ನೆಚ್ಚಿನ ವ್ಯಕ್ತಿ ಜೊತೆ ಮಾತನಾಡಿ ಪರಿಹಾರ ಕಂಡುಕೊಳ್ಳಿ. ಇಲ್ಲವೇ ಈ ಸಹಾಯವಾಣಿಗೆ ಕರೆಮಾಡಿ: 9152987821

    ರಕ್ಷಿತಾ ಕಂಡು ಪಿತ್ತ ನೆತ್ತಿಗೇರಿಸಿಕೊಂಡ ಸುದೀಪ್‌, ಅಶ್ವಿನಿ ಗೌಡ ಹಾಗೂ ರಿಷಾ ವಿರುದ್ಧ ಮಹಿಳಾ ಆಯೋಗಕ್ಕೆ ದೂರು; ವಿಡಿಯೊ


    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe to get the latest posts sent to your email.

    Leave a Reply

    Related News

    ಎಸ್‌ಐಆರ್ ಅಕ್ರಮ: ಎನ್‌ಡಿಎ ನಿಯೋಗ ಮುಖ್ಯ ಚುನಾವಣಾ ಆಯುಕ್ತರಿಗೆ ದೂರು

    ಕರ್ನಾಟಕದಲ್ಲಿ ಎಸ್‌ಐಆರ್ ಪ್ರಕ್ರಿಯೆ ದುರುಪಯೋಗದ ಆರೋಪದೊಂದಿಗೆ ಕುಮಾರಸ್ವಾಮಿ ಮತ್ತು ಪ್ರಲ್ಹಾದ ಜೋಶಿ ನೇತೃತ್ವದ ಎನ್‌ಡಿಎ ನಿಯೋಗ ನವದೆಹಲಿಯಲ್ಲಿ ಮುಖ್ಯ ಚುನಾವಣಾ ಆಯುಕ್ತರಿಗೆ ದಾಖಲೆ ಸಮೇತ ದೂರು ಸಲ್ಲಿಸಿತು.

    ಮಾದಪಟ್ಟಣ ಕ್ವಾರಿ ದುರಂತ: ಅಶೋಕ ತಲಾ ₹50 ಲಕ್ಷ ಪರಿಹಾರ ಆಗ್ರಹ

    ಬೆಂಗಳೂರು ಮಾದಪಟ್ಟಣ ಕ್ವಾರಿಯಲ್ಲಿ ಬಂಡೆ ಬಿದ್ದು 7 ಕಾರ್ಮಿಕರು ಮೃತಪಟ್ಟ ಘಟನೆಗೆ ಪ್ರತಿಪಕ್ಷ ನಾಯಕ ಆರ್.ಅಶೋಕ ರಾಜ್ಯ ಸರ್ಕಾರದ ನಿರ್ಲಕ್ಷ್ಯವೇ ಕಾರಣ ಎಂದು ದೂರಿ ತಲಾ ₹50 ಲಕ್ಷ ಪರಿಹಾರ ಒತ್ತಾಯಿಸಿದ್ದಾರೆ.

    Most Popular

    Recent Comments

    Home
    Play
    Notification
    Search

    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe now to keep reading and get access to the full archive.

    Continue reading