ಹೊಸದಿಲ್ಲಿ: ಇತ್ತೀಚೆಗಿನ ದಿನಗಳಲ್ಲಿ ಬ್ಯಾಂಕ್ ಹಾಗೂ ಹಣಕಾಸು ಸಂಸ್ಥೆಗಳಿಂದ ಕರೆ ಮಾಡಿದ್ದಕ್ಕಾಗಿ ಒಟಿಪಿ ನೀಡಿದೆ, ಹಣ ಪಾವತಿ ಮಾಡಿದೆ ಹಣ ಕಳೆದುಕೊಂಡೆ ಎಂಬ ಪ್ರಕರಣಗಳ ಸಂಖ್ಯೆ ದೊಡ್ಡ ಮಟ್ಟದಲ್ಲಿ ಕೇಳಿಬರುತ್ತಿದ್ದು, ಇದನ್ನು ತಡೆಗಟ್ಟಲು ಕೇಂದ್ರ ಹೊಸ ಕ್ರಮಕ್ಕೆ ಮುಂದಾಗಿದೆ.
ಹೌದು, ಸರ್ಕಾರಿ ಸ್ವಾಯತ್ತದ ಬ್ಯಾಂಕ್‌ಗಳಾಗಲಿ ಹಾಗೂ ಸಂಸ್ಥೆಗಳಾಗಲಿ, ಮ್ಯೂಚ್ಯುವಲ್ ಕಂಪನಿಗಳು ಹಾಗೂ ಪಿಂಚಣಿ ಕಂಪನಿಗಳೆಲ್ಲವೂ ಒಂದೇ ಸಂಖ್ಯೆಯಿಂದ ಗ್ರಾಹಕರಿಗೆ ಕರೆ ಮಾಡಬೇಕು ಎಂದು ಟೆಲಿಕಾಂ ನಿಯಂತ್ರಣ ಪ್ರಾಧಿಕಾರವು ಆದೇಶ ಹೊರಡಿಸಿದೆ. ಈ ಆದೇಶದ ಪ್ರಕಾರ 1600 ಸರಣಿ ಸಂಖ್ಯೆಯಿಂದಲೇ ಕರೆ ಮಾಡಬೇಕಿದೆ.
ಇನ್ನು ಸರ್ಕಾರಿ ಸ್ವಾಮ್ಯದ ಎಲ್ಲ ಸಂಸ್ಥೆಗಳು 1600ರಿಂದ ಆರಂಭವಾಗುವ ನಂಬರ್‌ಗಳಿಂದಲೇ ಕರೆ ಮಾಡುವ ಕಾರಣ ಈ ನಂಬರ್‌ನಿಂದ ಕರೆ ಮಾಡಿದರೆ ಗ್ರಾಹಕರಿಗೆ ಅಧಿಕೃತ ಕರೆ ಎಂಬುದು ಸುಲಭವಾಗಿ ತಿಳಿಯಲಿದೆ ಹಾಗೂ ವಂಚನೆಯ ಕರೆಗಳನ್ನು ಪತ್ತೆಹಚ್ಚಲು ಅವರಿಗೆ ಅನುಕೂಲವಾಗಲಿದೆ ಎಂಬ ಕಾರಣಕ್ಕೆ ಈ ಸಂಖ್ಯೆಯನ್ನೇ ಆರಿಸಲಾಗಿದೆ.
ಇನ್ನು ಎಲ್ಲ ಸಂಸ್ಥೆಗಳು ಇದನ್ನು 2026ರ ಫೆಬ್ರವರಿ 15ರೊಳಗೆ ಅಳವಡಿಸಿಕೊಳ್ಳಬೇಕು ಎಂದೂ ಸಹ ಆದೇಶ ಹೊರಡಿಸಲಾಗಿದೆ.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


