Monday, November 2, 2026
spot_img
More
    spot_img
    HomeLatest news10ನೇ ಬಾರಿಗೆ ಬಿಹಾರ ಸಿಎಂ: ನಿತೀಶ್ ಕುಮಾರ್ ಕೈಯಲ್ಲಿರುವ ಹಣ 21,000, 13 ದನ, 1...

    10ನೇ ಬಾರಿಗೆ ಬಿಹಾರ ಸಿಎಂ: ನಿತೀಶ್ ಕುಮಾರ್ ಕೈಯಲ್ಲಿರುವ ಹಣ 21,000, 13 ದನ, 1 ಕಾರು!

    ಬಿಹಾರ ವಿಧಾನಸಭೆ ಚುನಾವಣೆಯಲ್ಲಿ ಎನ್‌ಡಿಎ ಮೈತ್ರಿಕೂಟ 202 ಸೀಟುಗಳಲ್ಲಿ ಜಯಗಳಿಸಿದೆ. ರಾಜ್ಯದಲ್ಲಿ ಹೊಸ ಸರ್ಕಾರ ಅಸ್ತಿತ್ವಕ್ಕೆ ಬಂದಿದ್ದು, ಜೆಡಿಯು ವರಿಷ್ಠ ನಿತೀಶ್ ಕುಮಾರ್ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕಾರ ಮಾಡಿದ್ದಾರೆ. 10ನೇ ಬಾರಿಗೆ ರಾಜ್ಯದ ಮುಖ್ಯಮಂತ್ರಿಯಾಗುವ ಮೂಲಕ ದಾಖಲೆಯನ್ನು ಬರೆದಿದ್ದಾರೆ.

    74 ವರ್ಷದ ನಿತೀಶ್ ಕುಮಾರ್ ಶಾಸಕರಲ್ಲ. ಅವರು ವಿಧಾನ ಪರಿಷತ್ ಸದಸ್ಯರು. 10ನೇ ಬಾರಿಗೆ ಮುಖ್ಯಮಂತ್ರಿಯಾಗಿ ಅಧಿಕಾರವಹಿಸಿಕೊಂಡ ಅವರ ಆಸ್ತಿ ಎಷ್ಟಿರಬಹುದು? ಎಂಬುದು ಎಲ್ಲರ ಕುತೂಹಲವಾಗಿತ್ತು. ಆದರೆ ನಿತೀಶ್ ಕುಮಾರ್ ಬೇರೆ ರಾಜ್ಯದ ಸಿಎಂಗಳಿಗೆ ಹೋಲಿಕೆ ಮಾಡಿದರೆ ಶ್ರೀಮಂತರಲ್ಲ.

    ನಿತೀಶ್ ಕುಮಾರ್ ಒಟ್ಟಾರೆ ಆಸ್ತಿ ಮೌಲ್ಯ 1.64 ಕೋಟಿ ರೂ.ಗಳು. ಚುನಾವಣಾ ಆಯೋಗಕ್ಕೆ ಅವರು ಸಲ್ಲಿಕೆ ಮಾಡಿರುವ ಪ್ರಮಾಣ ಪತ್ರದ ಪ್ರಕಾರ ಅವರ ಕೈಯಲ್ಲಿರುವ ಹಣ ಕೇವಲ 21,052 ರೂ.ಗಳು. ಇಷ್ಟು ವರ್ಷಗಳ ಕಾಲ ಬಿಹಾರವನ್ನು ಆಳ್ವಿಕೆ ಮಾಡಿದರೂ ಸಹ ಅವರು ಸರಳ ಜೀವನ ನಡೆಸುತ್ತಿದ್ದಾರೆ. ಅವರ ಬಳಿ ಇರುವುದು ಕೇವಲ ಒಂದು ಕಾರು ಮಾತ್ರ.

    ನಿತೀಶ್ ಕುಮಾರ್ ಆಸ್ತಿ ವಿವರ: ಸಿಎಂ ನಿತೀಶ್ ಕುಮಾರ್ ತಮ್ಮ ಚರ/ ಸ್ಥಿರ ಆಸ್ತಿ ಮೌಲ್ಯ 1.64 ಕೋಟಿ ರೂ.ಗಳು ಎಂದು ಘೋಷಣೆ ಮಾಡಿಕೊಂಡಿದ್ದಾರೆ. ಒಟ್ಟಾರೆ ಚರ ಆಸ್ತಿ ಮೌಲ್ಯ 16.97 ಲಕ್ಷ ರೂ.ಗಳು.

    • ಕೈಯಲ್ಲಿರುವ ಹಣ 21,052 ರೂ.ಗಳು
    • ಬ್ಯಾಂಕ್ ಠೇವಣಿ 60,811 ರೂ.ಗಳು
    • ಎಫ್‌ಡಿ, ಇನ್‌ವೆಸ್ಟ್‌ಮೆಂಟ್‌ ಎಲ್ಲಾ ಸೇರಿ 16.97 ಲಕ್ಷ ರೂ.ಗಳು

    ನಿತೀಶ್ ಕುಮಾರ್ ಸ್ಥಿರ ಆಸ್ತಿ ಮೌಲ್ಯ 1.48 ಕೋಟಿ ರೂ.ಗಳು. ಇದರಲ್ಲಿ ದೆಹಲಿಯ ದ್ವಾರಕಾ ನಗರದಲ್ಲಿ ಸಹಕಾರಿ ಕೋ ಆಪರೇಟಿವ್ ಸೊಸೈಟಿಯಲ್ಲಿ ಪಡೆದ ಫ್ಲಾಟ್ ಸೇರಿದೆ. 13 ದನ, 10 ಕರುಗಳು, ಒಂದು ಫೋರ್ಡ್ ಕಾರು. ಇವೆಲ್ಲವೂ 2023ರಲ್ಲಿ ಘೋಷಣೆ ಮಾಡಿಕೊಂಡ ಆಸ್ತಿಗಳು. ವರ್ಷದಿಂದ ವರ್ಷಕ್ಕೆ ಸ್ವಲ್ಪ ಮಟ್ಟಿಗೆ ಅವರ ಆಸ್ತಿ ಮೌಲ್ಯ ಹೆಚ್ಚಾಗುತ್ತಿದೆ.

    ಎಡಿಆರ್ 2025ರ ಆಗಸ್ಟ್‌ನಲ್ಲಿ ಬಿಡುಗಡೆ ಮಾಡಿದ ಪಟ್ಟಿ ಪ್ರಕಾರ ದೇಶದ ಶ್ರೀಮಂತ ಮುಖ್ಯಮಂತ್ರಿಗಳ ಪಟ್ಟಿಯಲ್ಲಿ ಆಂಧ್ರ ಪ್ರದೇಶದ ಚಂದ್ರಬಾಬು ನಾಯ್ಡು 931 ಕೋಟಿ ರೂ. ಆಸ್ತಿ, ಅರುಣಾಚಲ ಪ್ರದೇಶ ಸಿಎಂ ಪೇಮ ಖಂಡು 332 ಕೋಟಿ ರೂ. ಆಸ್ತಿ, ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ 51 ಕೋಟಿ ರೂ. ಆಸ್ತಿಯನ್ನು ಹೊಂದಿದ್ದಾರೆ. ಶ್ರೀಮಂತ ಮುಖ್ಯಮಂತ್ರಿಗಳ ಪಟ್ಟಿಯಲ್ಲಿ 10 ಬಾರಿ ಸಿಎಂ ಆದ ನಿತೀಶ್ ಕುಮಾರ್ ಇಲ್ಲ ಎಂಬುದು ಅಚ್ಚರಿಯ ಸಂಗತಿ ಆಗಿದೆ.

    ಉಪ ಮುಖ್ಯಮಂತ್ರಿಗಳ ಆಸ್ತಿ: ಬಿಹಾರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ 243 ಸೀಟುಗಳ ಪೈಕಿ 89 ಸೀಟು ಗೆದ್ದು ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಜೆಡಿಯು 85 ಸೀಟುಗಳಲ್ಲಿ ಗೆಲುವು ಸಾಧಿಸಿದೆ. ಬಿಜೆಪಿಯ ಇಬ್ಬರು ನಾಯಕರು ಉಪಮುಖ್ಯಮಂತ್ರಿಗಳಾಗಿದ್ದಾರೆ.

    ಬಿಜೆಪಿ ನಾಯಕ, ಡಿಸಿಎಂ ಸಾಮ್ರಾಟ್ ಚೌಧರಿ 6.7 ಲಕ್ಷ ರೂ. ನಗದು ಹೊಂದಿದ್ದಾರೆ. ಅವರ ಪತ್ನಿ ಕುಮಾರಿ ಮಾತಾ ಬಳಿ 5.7 ಲಕ್ಷ ರೂ. ನಗದು ಇದೆ. ಚೌಧರಿ 4 ಲಕ್ಷ ರೈಫಲ್ ಹೊಂದಿದ್ದಾರೆ. ಅವರ ಸ್ಥಿರಾಸ್ತಿ ಮೌಲ್ಯ 8.28 ಕೋಟಿ ರೂ.ಗಳು.

    ಬಿಜೆಪಿ ನಾಯಕ, ಡಿಸಿಎಂ ವಿಜಯ್ ಕುಮಾರ್ ಸಿನ್ಹಾ ಬಳಿ ಇರುವ ಚರಾಸ್ತಿ 2.42 ಕೋಟಿ ರೂ.ಗಳು. ಅವರ ಪತ್ನಿ ಹೆಸರಿನಲ್ಲಿರುವ ಆಸ್ತಿ 3.32 ಕೋಟಿ ರೂ.ಗಳು. ಅವರ ಬಳಿ 77,181 ರೂ.ಗಳ ರಿವಾಲ್ವಾರ್ ಇದೆ.


    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe to get the latest posts sent to your email.

    LEAVE A REPLY

    Related News

    ಮಹಾಲಯ ಅಮಾವಾಸ್ಯೆ 2026: ಅಕ್ಟೋಬರ್ 10ರಂದು ಆಚರಣೆ; ಪಿತೃಪೂಜೆಯ ಮಹತ್ವವೇನು?

    ಹಿಂದೂ ಧರ್ಮದಲ್ಲಿ ಮಹಾಲಯ ಅಮಾವಾಸ್ಯೆಗೆ ವಿಶೇಷ ಸ್ಥಾನವಿದೆ. ಪಿತೃಪಕ್ಷದ ಕೊನೆಯ ದಿನವಾದ ಈ ಸಂದರ್ಭದಲ್ಲಿ ಪೂರ್ವಜರನ್ನು ಸ್ಮರಿಸಿ, ಅವರ ಆತ್ಮಕ್ಕೆ ಶಾಂತಿ ಕೋರಿ ವಿವಿಧ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಲಾಗುತ್ತದೆ. ಈ ದಿನ ಶ್ರಾದ್ಧ,...

    ಕರ್ನಾಟಕಕ್ಕೆ ಗುಡ್‌ನ್ಯೂಸ್: ಯುಬಿಯಿಂದ ₹4,500 ಕೋಟಿ ಕೊಡುಗೆ, 36 ಸಾವಿರಕ್ಕೂ ಹೆಚ್ಚು ಉದ್ಯೋಗ

    ಬೆಂಗಳೂರು: ದೇಶದ ಅತಿದೊಡ್ಡ ಬಿಯರ್ ಉತ್ಪಾದನಾ ಸಂಸ್ಥೆ ಹಾಗೂ ಹೈನೆಕನ್‌ ಕಂಪನಿಯ ಭಾಗವಾಗಿರುವ ಬೆಂಗಳೂರು ಮೂಲದ 'ಯುನೈಟೆಡ್ ಬ್ರೂವರೀಸ್ ಲಿಮಿಟೆಡ್' (ಯುಬಿಎಲ್‌), ಕರ್ನಾಟಕದ ಆರ್ಥಿಕತೆ ಮತ್ತು ಉದ್ಯೋಗ ಸೃಷ್ಟಿಯಲ್ಲಿ ಮಹತ್ವದ ಪಾತ್ರ ವಹಿಸುತ್ತಿದೆ...

    Most Popular

    Recent Comments

    Home
    Play
    Notification
    Search