ಜಾಗತಿಕ ನಗರ ಶ್ರೇಯಾಂಕದ ಹೊಸ ಅಧ್ಯಾಯ ಪ್ರಾರಂಭ! ರೆಸೋನೆನ್ಸ್ ಕನ್ಸಲ್ಟೆನ್ಸಿಯ 2026ರ ‘ವಿಶ್ವದ ಅತ್ಯುತ್ತಮ ನಗರಗಳ ವರದಿ’ ಪ್ರಕಟವಾಗಿದ್ದು, ಜಗತ್ತಿನ ಗಮನ ಸೆಳೆದಿದೆ. ಈ ಪಟ್ಟಿಯಲ್ಲಿ ಲಂಡನ್ ನಗರವು ಸತತವಾಗಿ 11 ವರ್ಷ ನಂ.1 ಸ್ಥಾನವನ್ನು ಕಾಯ್ದುಕೊಳ್ಳುವ ಮೂಲಕ ಅಸಾಮಾನ್ಯ ಸಾಧನೆ ಮಾಡಿದೆ.
270ಕ್ಕೂ ಹೆಚ್ಚು ನಗರಗಳ ಆರ್ಥಿಕ ಶಕ್ತಿ, ಸಾಂಸ್ಕೃತಿಕ ಕಂಪನ ಮತ್ತು ಜೀವನ ಯೋಗ್ಯತೆಯನ್ನು ಕೂಲಂಕಷವಾಗಿ ಪರಿಶೀಲಿಸಿ ಬಿಡುಗಡೆ ಮಾಡಿದ ಈ ಟಾಪ್ 100 ಪಟ್ಟಿಯಲ್ಲಿ, ನಮ್ಮ ಬೆಂಗಳೂರು ಕೂಡ ಸ್ಥಾನ ಪಡೆದುಕೊಂಡಿದೆ.ಪ್ರವಾಸಿಗರು ಮತ್ತು ಹೂಡಿಕೆದಾರರ ಉತ್ಸಾಹ ಹೆಚ್ಚಿಸುವ ಈ ಪಟ್ಟಿಯಲ್ಲಿ, ಏಷ್ಯಾದ ಕೆಲವೇ ನಗರಗಳು ಅಗ್ರ ಸ್ಥಾನಗಳಲ್ಲಿ ಮೆರೆದಿವೆ!
ಅಗ್ರಸ್ಥಾನದಲ್ಲಿ ಯಾರು?
ಲಂಡನ್ (UK): ಸತತ 11ನೇ ಬಾರಿಗೆ ವಿಶ್ವದ ಅತ್ಯುತ್ತಮ ನಗರಗಳ ಪಟ್ಟಿಯಲ್ಲಿ ಪ್ರಥಮ ಸ್ಥಾನ ಪಡೆದು ದಾಖಲೆ ಮಾಡಿದೆ.
ನ್ಯೂಯಾರ್ಕ್ (USA): ಅಮೆರಿಕಾದ ಈ ಮಹಾನಗರಕ್ಕೆ ಎರಡನೇ ಸ್ಥಾನ ಲಭಿಸಿದೆ.
ಪ್ಯಾರಿಸ್ (ಫ್ರಾನ್ಸ್): ಫ್ರಾನ್ಸ್‌ನ ಪ್ಯಾರಿಸ್ ನಗರವು ಮೂರನೇ ಸ್ಥಾನ ಪಡೆದಿದೆ.ಟಾಪ್ 10ರಲ್ಲಿ: ಟೋಕಿಯೋ (4), ಮ್ಯಾಡ್ರಿಡ್ (5), ಸಿಂಗಾಪುರ (6), ರೋಮ್ (7), ದುಬೈ (8), ಬರ್ಲಿನ್ (9), ಮತ್ತು ಬಾರ್ಸಿಲೋನಾ (10) ಸ್ಥಾನಗಳನ್ನು ಪಡೆದಿವೆ.
ಭಾರತಕ್ಕೆ ಸಂಬಂಧಿಸಿದಂತೆ, ಟಾಪ್ 30 ಪಟ್ಟಿಯಲ್ಲಿ ಸ್ಥಾನ ಪಡೆದ ಏಕೈಕ ನಗರ ನಮ್ಮ ಬೆಂಗಳೂರು!
ಬೆಂಗಳೂರು: ಜಾಗತಿಕವಾಗಿ 29ನೇ ಸ್ಥಾನ ಗಳಿಸಿದೆ.ಹಸಿರು ವಾತಾವರಣ, ಕೂಲ್ ಕೂಲ್ ಹವಾಮಾನ, ಜೀವನ ಮಟ್ಟ, ಉತ್ತಮ ಆದಾಯದ ಅವಕಾಶಗಳು ಮತ್ತು ವೈವಿಧ್ಯಮಯ ಸಂಸ್ಕೃತಿ/ಆಹಾರಗಳಿಂದಾಗಿ ಬೆಂಗಳೂರು ಈ ಹೆಗ್ಗಳಿಕೆಗೆ ಪಾತ್ರವಾಗಿದೆ. ಇದು ಸಿಲಿಕಾನ್ ವ್ಯಾಲಿ ಎಂದೇ ಪ್ರಸಿದ್ಧವಾಗಿದೆ.
ಸ್ಥಾನ ಪಡೆದ ಭಾರತದ ಇತರೆ ನಗರಗಳು
ವಿಶ್ವದ ಟಾಪ್ 100 ಅತ್ಯುತ್ತಮ ನಗರಗಳ ಪಟ್ಟಿಯಲ್ಲಿ ಒಟ್ಟು ನಾಲ್ಕು ಭಾರತೀಯ ನಗರಗಳು ಸ್ಥಾನ ಗಳಿಸಿವೆ:
ಮುಂಬೈ: 40ನೇ ಸ್ಥಾನ
ದೆಹಲಿ: 54ನೇ ಸ್ಥಾನ
ಹೈದರಾಬಾದ್: 82ನೇ ಸ್ಥಾನ
ರೆಸೋನೆನ್ಸ್ ಕನ್ಸಲ್ಟೆನ್ಸಿ ಈ ಪಟ್ಟಿಯನ್ನು ತಯಾರಿಸಲು 270ಕ್ಕೂ ಹೆಚ್ಚು ನಗರಗಳನ್ನು ಅಧ್ಯಯನ ಮಾಡಿದೆ. ಒಂದು ಮಿಲಿಯನ್‌ಗಿಂತಲೂ ಹೆಚ್ಚು ಜನಸಂಖ್ಯೆ ಇರುವ ನಗರಗಳನ್ನು ಆಯ್ಕೆ ಮಾಡಲಾಗಿದೆ. ಶಿಕ್ಷಣ, ಸಂಪರ್ಕ, ಸಂಸ್ಕೃತಿ, ಸುರಕ್ಷತೆ, ರಾತ್ರಿ ಜೀವನ ಮತ್ತು ಜೀವನ ವೆಚ್ಚ ಸೇರಿದಂತೆ ಅನೇಕ ಅಂಶಗಳನ್ನು ಪರಿಗಣಿಸಿ, ವಾಸಯೋಗ್ಯತೆ ಮತ್ತು ಸಮೃದ್ಧಿಯ ಆಧಾರದ ಮೇಲೆ ಶ್ರೇಯಾಂಕ ನೀಡಲಾಗಿದೆ.
ಸ್ಟ್ರೋಕ್ ಬರುವ ಮುನ್ನವೇ ದೇಹ ನೀಡುವ ಲಕ್ಷಣಗಳು: ಈ ರೋಗಲಕ್ಷಣಗಳನ್ನು ನಿರ್ಲಕ್ಷಿಸಬೇಡಿ!
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


