ಗುವಾಹಟಿಯ ಬರ್ಸಾಪರ ಕ್ರಿಕೆಟ್ ಕ್ರೀಡಾಂಗಣದಲ್ಲಿ ಭಾರತ ಹಾಗೂ ದಕ್ಷಿಣ ಆಫ್ರಿಕಾ ತಂಡಗಳು ಎರಡನೇ ಟೆಸ್ಟ್ ಪಂದ್ಯದಲ್ಲಿ ಸೆಣಸಾಟ ನಡೆಸುತ್ತಿವೆ. ಮೊದಲ ಪಂದ್ಯ ಗೆದ್ದು ಸರಣಿಯಲ್ಲಿ ಮುನ್ನಡೆ ಸಾಧಿಸಿದ್ದ ದಕ್ಷಿಣ ಆಫ್ರಿಕಾ ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದು, ಮೊದಲ ಇನ್ನಿಂಗ್ಸ್‌ನಲ್ಲಿ ಬರೋಬ್ಬರಿ 489 ರನ್ ಕಲೆಹಾಕಿ ಆಲ್‌ಔಟ್ ಆಗಿದೆ.
ಮೊದಲ ದಿನದಾಟದಂತ್ಯಕ್ಕೆ 6 ವಿಕೆಟ್ ನಷ್ಟಕ್ಕೆ 247 ರನ್ ಬಾರಿಸಿದ್ದ ದಕ್ಷಿಣ ಆಫ್ರಿಕಾ ಕೆಳ ಕ್ರಮಾಂಕದ ಆಟಗಾರರಿಂದಲೂ ಉತ್ತಮ ಕೊಡುಗೆ ಬಂದ ಕಾರಣ ಇಷ್ಟು ಮೊತ್ತ ಕಲೆಹಾಕಿತು. ಮೊದಲ ದಿನ ಬೌಲಿಂಗ್‌ನಲ್ಲಿ ಹಿಡಿತ ಹೊಂದಿದ್ದ ಭಾರತ ಎರಡನೇ ದಿನ ಸಾಲು ಸಾಲು ರನ್‌ಗಳನ್ನು ಬಿಟ್ಟುಕೊಟ್ಟು ಪಂದ್ಯದಲ್ಲಿ ಒತ್ತಡಕ್ಕೆ ಸಿಲುಕಿಕೊಂಡಿದೆ.
ಭಾರತದ ಈ ಸ್ಥಿತಿಯ ಕುರಿತು ಜಿಯೊ ಹಾಟ್‌ಸ್ಟಾರ್ ಕಾಮೆಂಟರಿ ಸಮಯದಲ್ಲಿ ದಕ್ಷಿಣ ಆಫ್ರಿಕಾದ ಮಾಜಿ ಕ್ರಿಕೆಟಿಗ ಡೇಲ್ ಸ್ಟೈನ್ ಮಾತನಾಡಿದ್ದು, ಮೊದಲ ದಿನ ಹಿಡಿತ ಹೊಂದಿದ್ದ ಭಾರತ ಎರಡನೇ ದಿನ ಆಕ್ರಮಣಕಾರಿ ಆಟವನ್ನಾಡಿ ಬ್ಯಾಟ್ಸ್‌ಮನ್‌ಗಳನ್ನು ಕಟ್ಟಿಹಾಕಲಿಲ್ಲ ಎಂದಿದ್ದಾರೆ.
ಮೊದಲ ದಿನ ಚೆನ್ನಾಗಿ ವಿಕೆಟ್ ಪಡೆದ ಭಾರತ ತದನಂತರ ತಮ್ಮ ಮೂಲ ಯೋಜನೆಯನ್ನು ಬಿಟ್ಟು ಹೊರಬರದೇ ಆಟವನ್ನಾಡಿದರು. ಪ್ಲಾನ್ ಎ ವಿಫಲವಾದಾಗ ಪ್ಲಾನ್ ಬಿ ಅಥವಾ ಸಿ ಬಗ್ಗೆ ಚಿಂತಿಸಲೇ ಇಲ್ಲ. ಹೊಸ ಬ್ಯಾಟ್ಸ್‌ಮನ್ ಬಂದಾಗ ಲಾಂಗ್ ಆನ್, ಲಾಂಗ್ ಆಫ್ ಹಾಗೂ ಡೀಪ್ ಸ್ಕ್ವೇರ್‌ನಲ್ಲಿ ಬೌಂಡರಿಗೆ ಹೆದರಿಕೊಂಡು ಫೀಲ್ಡ್ ಸೆಟ್ ಮಾಡಲಾಗಿತ್ತು. ಇದು ಬ್ಯಾಟ್ಸ್‌ಮನ್‌ಗೆ ನೆಲಕಚ್ಚಿ ನಿಂತು ಆಟವನ್ನಾಡಲು ಅನುವುಮಾಡಿಕೊಟ್ಟಿತು ಎಂದು ಸ್ಟೈನ್ ತಿಳಿಸಿದ್ದಾರೆ.
ಚನ್ನಪಟ್ಟಣ: ತಂದೆಯಿಂದಲೇ ಮಗಳ ಮೇಲೆ ಅತ್ಯಾಚಾರ; ರೆಡ್‌ಹ್ಯಾಂಡ್ ಆಗಿ ಪತ್ನಿಗೆ ಸಿಕ್ಕಿಬಿದ್ದ ಪಾಪಿ!
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


