ಇತ್ತೀಚೆಗಷ್ಟೆ ಐಸಿಸಿ ವನಿತೆಯರ ಏಕದಿನ ವಿಶ್ವಕಪ್ ಟ್ರೋಫಿಯನ್ನು ಎತ್ತಿಹಿಡಿದ ಆಟಗಾರ್ತಿ ಸ್ಮೃತಿ ಮಂಧಾನ ಇತ್ತೀಚೆಗಷ್ಟೆ ಟ್ರೋಫಿ ಗೆದ್ದ ಡಿವೈ ಪಾಟೀಲ್ ಕ್ರೀಡಾಂಗಣದಲ್ಲೇ ತಮ್ಮ ನಿಶ್ಚಿತಾರ್ಥದ ವಿಷಯವನ್ನು ಅವಾವರಣಗೊಳಿಸಿದ್ದರು.
ಸಂಗೀತ ನಿರ್ದೇಶಕ ಪಲಾಶ್ ಮುಚ್ಚಲ್ ಜತೆ ವೈವಾಹಿಕ ಜೀವನಕ್ಕೆ ಸ್ಮೃತಿ ಮಂಧಾನ ಕಾಲಿಡುತ್ತಿದ್ದು, ನಿನ್ನೆ ( ನವೆಂಬರ್ 23 ) ವಿವಾಹ ಕಾರ್ಯಕ್ರಮ ನಡೆಯಬೇಕಿತ್ತು. ಆದರೆ ಸ್ಮೃತಿ ಮಂಧಾನ ಅವರ ತಂದೆ ಶ್ರೀನಿವಾಸ್ ಮಂಧಾನ ಮದುವೆಗೆ ಇನ್ನೇನು ಕೆಲವು ಗಂಟೆಗಳು ಬಾಕಿ ಇರುವಾಗ ತೀವ್ರ ಅಸ್ವಸ್ಥರಾಗಿದ್ದು, ವಿವಾಹವನ್ನು ಅನಿರ್ದಿಷ್ಟಾವಧಿಗೆ ಮುಂದೂಡಲಾಗಿದೆ.
ಸ್ಯಾಮ್ಡೋಲ್‌ನಲ್ಲಿರುವ ಸ್ಮೃತಿ ಮಂಧಾನ ಅವರ ಫಾರ್ಮ್‌ಹೌಸ್‌ನಲ್ಲಿ ವಿವಾಹದ ಕೆಲಸಗಳು ನಡೆಯುತ್ತಿರುವಾಗಲೇ ನಿನ್ನೆ ಬೆಳಗ್ಗೆ ಬೆಳಗಿನ ಉಪಹಾರ ಸೇವಿಸಿದ ಶ್ರೀನಿವಾಸ್ ಮಂಧಾನಗೆ ಎದೆ ನೋವು ಕಾಣಿಸಿಕೊಂಡಿದೆ. ಆ ಕೂಡಲೇ ತಡ ಮಾಡದೇ ಅವರನ್ನು ಖಾಸಗಿ ಆಸ್ಪತ್ರೆಗೆ ರವಾನಿಸಲಾಗಿದ್ದು, ಚಿಕಿತ್ಸೆ ಕೊಡಿಸಲಾಗುತ್ತಿದೆ ಎಂದು ಸ್ಮೃತಿ ಮಂಧಾನ ಮ್ಯಾನೇಜರ್ ತುಹಿನ್ ಶರ್ಮಾ ತಿಳಿಸಿದ್ದಾರೆ.
ಇನ್ನು ಸ್ಮೃತಿ ವೃತ್ತಿ ಜೀವನದಲ್ಲಿ ಅವರ ತಂದೆ ಶ್ರೀನಿವಾಸ್ ಮಂಧಾನ ಭಾರೀ ದೊಡ್ಡ ಕೊಡುಗೆ ನೀಡಿದ್ದು, ಬಾಲ್ಯದಿಂದಲೂ ಕ್ರಿಕೆಟ್ ವಿಚಾರವಾಗಿ ಬೆಂಬಲ ನೀಡಿದ್ದಾರೆ. ಹೀಗಾಗಿ ತಂದೆಯ ಕಡೆಗೆ ಅಪಾರವಾದ ಒಲವೊಂದಿರುವ ಸ್ಮೃತಿ ಮಂಧಾನ ತಂದೆಯ ಆರೋಗ್ಯ ಸರಿ ಹೋಗುವವರೆಗೆ ವಿವಾಹವನ್ನು ಮುಂದೂಡುವ ನಿರ್ಧಾರ ಮಾಡಿದ್ದಾರೆ.
ಚನ್ನಪಟ್ಟಣ: ತಂದೆಯಿಂದಲೇ ಮಗಳ ಮೇಲೆ ಅತ್ಯಾಚಾರ; ರೆಡ್‌ಹ್ಯಾಂಡ್ ಆಗಿ ಪತ್ನಿಗೆ ಸಿಕ್ಕಿಬಿದ್ದ ಪಾಪಿ!
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


