ಬಿಎಂಟಿಸಿ ಮತ್ತು ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (ಬಿಎಂಆರ್‌ಸಿಎಲ್) ಪ್ರಯಾಣಿಕರ ಅನುಕೂಲಕ್ಕಾಗಿ ಹೊಸ ಮಾರ್ಗದಲ್ಲಿ ಬಿಎಂಟಿಸಿ ಮೆಟ್ರೋ ಫೀಡರ್ ಬಸ್ ಸೇವೆಯನ್ನು ಆರಂಭಿಸಿದೆ.
ನಮ್ಮ ಮೆಟ್ರೋ ಪಯಾಣಿಕರು ಈ ಮೆಟ್ರೋ ಫೀಡರ್ ಬಸ್ ಸೇವೆಗಳನ್ನು ಉಪಯೋಗಿಸಿಕೊಂಡು ಸುಲಭ, ಸುರಕ್ಷಿತವಾಗಿ ಪ್ರಯಾಣ ಮಾಡಬೇಕು ಎಂದು ಬಿಎಂಆರ್‌ಸಿಎಲ್ ಮನವಿ ಮಾಡಿದೆ.
ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ, ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಪರಸ್ಪರ ಸಹಕಾರದೊಂದಿಗೆ ಮೆಟ್ರೋ ಪಯಾಣಿಕರಿಗೆ ಸುಗಮ ಮತ್ತು ಪರಿಣಾಮಕಾರಿ ಕೊನೆಯ ಮೈಲಿ ಸಂಪರ್ಕವನ್ನು ಒದಗಿಸುವ ಉದ್ದೇಶದಿಂದ ಮೆಟ್ರೋ ಫೀಡರ್ ಬಸ್ ಸೇವೆಗಳನ್ನು ಪ್ರಾರಂಭಿಸಿವೆ ಎಂದು ಹೇಳಿದೆ.
ಈ ಬಸ್ ಸೇವೆಗಳು ಮೆಟ್ರೋ ನಿಲ್ದಾಣಗಳಿಂದ ಸುತ್ತಮುತ್ತಲಿನ ಪ್ರದೇಶಗಳಿಗೆ ಸಾರ್ವಜನಿಕ ಸಾರಿಗೆ ಸಂಪರ್ಕವನ್ನು ಮತ್ತಷ್ಟು ಬಲಪಡಿಸಲಿವೆ ಎಂದು ತಿಳಿಸಿದ್ದು, ಬಿಎಂಟಿಸಿ ವತಿಯಿಂದ ಆರಂಭಿಸಲಾದ ಮೆಟ್ರೋ ಫೀಡರ್ ಬಸ್ ಸೇವೆಗಳ ವಿವರಗಳನ್ನು ನೀಡಿದೆ.
ಹೊಸ ಮೆಟ್ರೋ ಫೀಡರ್ ಮಾರ್ಗಗಳು
- ಜ್ಞಾನಭಾರತಿ ಮೆಟ್ರೋ ನಿಲ್ದಾಣ – ಭಾರತ್ ನಗರ 2ನೇ ಹಂತ: ಈ ಮಾರ್ಗದ ಬಸ್‌ಗಳು ವಿದ್ಯಾನಿಕೇತನ ಪಬ್ಲಿಕ್ ಸ್ಕೂಲ್, ಮುದ್ದೈಯನಪಾಳ್ಯ ಜಂಕ್ಷನ್, ಭಾರತ್ ನಗರ 1ನೇ ಹಂತ, ಬ್ಯಾಡರಹಳ್ಳಿ ಮೂಲಕ ಸಂಚಾರವನ್ನು ನಡೆಸುತ್ತದೆ. ಈ ಬಸ್ ಜ್ಞಾನಭಾರತಿ ಮೆಟ್ರೋ ನಿಲ್ದಾಣದಿಂದ 06.25, 07.40, 08.50, 10.30, 14.05, 15.05, 16.20, 18.10, 19.35, 20.55ಕ್ಕೆ ಹೊರಡಲಿವೆ. ಭಾರತ್ ನಗರ 2ನೇ ಹಂತದಿಂದ ಹೊರಡುವ ಸಮಯ 05.50, 07.00, 08.15, 09.30, 11.10, 14.30, 15.40, 17.15, 18.50, 20.15 ಆಗಿದೆ.
- ಕೆ.ಆರ್. ಪುರ ಮೆಟ್ರೋ ನಿಲ್ದಾಣ – ಸರ್ಜಾಪುರ: ಈ ಮಾರ್ಗದ ಬಸ್‌ಗಳು ಮಹಾದೇವಪುರ ಜಂಕ್ಷನ್, ದೊಡನೆಕ್ಕುಂದಿ ರೈಲು ನಿಲ್ದಾಣ, ಮಾರತ್ತಹಳ್ಳಿ ಸೇತುವೆ ಜಂಕ್ಷನ್, ಕಾಡುಬೀಸನಹಳ್ಳಿ, ದೇವರಬೀಸನಹಳ್ಳಿ, ದೊಡ್ಡಕನ್ನಳ್ಳಿ, ಕೊಡತಿ ಗೇಟ್, ಮುತ್ತನಲ್ಲೂರು ಕ್ರಾಸ್, ದೊಮ್ಮಸಂದ್ರ, ಯಮರೆ, ಸೋಂಪುರ ಗೇಟ್ ಮೂಲಕ ಸಂಚಾರ ನಡೆಸಲಿವೆ. ಈ ಬಸ್ ಕೆ.ಆರ್. ಪುರ ಮೆಟ್ರೋ ನಿಲ್ದಾಣದಿಂದ ಹೊರಡುವ ಸಮಯ 05.30, 06.50, 08.00, 08.40, 09.25, 10.10, 11.20, 11.35, 13.15, 14.45, 15.25, 16.05, 16.50, 17.45, 19.10, 20.40 ಮತ್ತು ಸರ್ಜಾಪುರದಿಂದ ಹೊರಡುವ ಸಮಯ 05.30, 06.50, 07.55, 08.40, 09.30, 10.10, 11.20, 13.40, 14.25, 15.10, 16.00, 16.40, 17.40, 19.10, 20.40 ಆಗಿದೆ.
- ಟಿನ್ ಫ್ಯಾಕ್ಟರಿ (ಬೆನ್ನಿಗಾನಹಳ್ಳಿ ಮೆಟ್ರೋ ನಿಲ್ದಾಣ) – ಬಿದರಹಳ್ಳಿ. ಈ ಮಾರ್ಗದ ಬಸ್‌ಗಳು ಟಿ ಟಿ.ಸಿ. ಪಾಳ್ಯ ಕ್ರಾಸ್, ಕಿತ್ತಗನೂರು, ಈಸ್ಟ್ ಪಾಯಿಂಟ್ ಕಾಲೇಜ್ ಬ್ಯಾಕ್ ಗೇಟ್ ಮೂಲ ಸಂಚಾರವನ್ನು ನಡೆಸಲಿವೆ. ಟಿನ್ ಫ್ಯಾಕ್ಟರಿಯಿಂದ (ಬೆನ್ನಿಗಾನಹಳ್ಳಿ ಮೆಟ್ರೋ ನಿಲ್ದಾಣ) ಹೊರಡುವ ಸಮಯ 08.50, 10.50, 12.25, 14.00, 16.00, 17.35 ಮತ್ತು ಬಿದರಹಳ್ಳಿಯಿಂದ ಹೊರಡುವ ಸಮಯ 08.00, 10.00, 11.35, 13.10, 15.15, 16.45 ಆಗಿದೆ.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


