Tuesday, September 22, 2026
spot_img
More
    spot_img
    HomeLatest newsಆರೋಗ್ಯ ಸಂಜೀವಿನಿ ಯೋಜನೆ: ಪತಿ, ಪತ್ನಿ ಇಬ್ಬರೂ ಸರ್ಕಾರಿ ನೌಕರಿಯಲ್ಲಿದ್ದರೆ ವಿಶೇಷ ಮನವಿ

    ಆರೋಗ್ಯ ಸಂಜೀವಿನಿ ಯೋಜನೆ: ಪತಿ, ಪತ್ನಿ ಇಬ್ಬರೂ ಸರ್ಕಾರಿ ನೌಕರಿಯಲ್ಲಿದ್ದರೆ ವಿಶೇಷ ಮನವಿ

    ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆ (ಕೆಎಎಸ್ಎಸ್‌) ಅನ್ನು ರಾಜ್ಯ ಸರ್ಕಾರ ಅಕ್ಟೋಬರ್ 1ರಿಂದ ಜಾರಿಗೊಳಿಸಿದೆ. ಯೋಜನೆಗೆ ಸೇರ್ಪಡೆಯಾಗಿರುವ ಸರ್ಕಾರಿ ನೌಕರರ ವೇತನದಿಂದ ವಂತಿಗೆ ಕಡಿತವಾಗುತ್ತಿದೆ. ಆದರೆ ಸರ್ಕಾರಿ ನೌಕರಿಯಲ್ಲಿ ಪತಿ, ಪತ್ನಿ ಇಬ್ಬರು ಇದ್ದರೆ ಯಾರ ವೇತನ ಕಡಿತವಾಗಬೇಕು? ಎಂದು ನೌಕರರು ತೀರ್ಮಾನಿಸಬೇಕು.

    ಈಗ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಾಕ್ಷರಿ ಸರ್ಕಾರಕ್ಕೆ ಪತ್ರವೊಂದನ್ನು ಬರೆದಿದ್ದಾರೆ. ಈ ಪತ್ರವು ಕರ್ನಾಟಕ ರಾಜ್ಯ ಆರೋಗ್ಯ ಸಂಜೀವಿನಿ ಯೋಜನೆಯಡಿ ಪತಿ-ಪತ್ನಿ ಇಬ್ಬರು ಸರ್ಕಾರಿ ನೌಕರರಿದ್ದಲ್ಲಿ ಒಬ್ಬರಿಗೆ ಈ ಯೋಜನೆಯಿಂದ ಹೊರಗುಳಿಯಲು ಅವಕಾಶ ಕಲ್ಪಿಸುವ ಬಗ್ಗೆ ಎಂಬ ವಿಷಯವ ಒಳಗೊಂಡಿದೆ.

    ಸರ್ಕಾರದ ಕಾರ್ಯದರ್ಶಿಗಳು, ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ, ಕರ್ನಾಟಕ ಸರ್ಕಾರ ಇವರಿಗೆ ಪತ್ರವನ್ನು ಬರೆದಿದ್ದಾರೆ. ಪತ್ರದಲ್ಲಿ ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ, ಕರ್ನಾಟಕ ರಾಜ್ಯ ಆರೋಗ್ಯ ಸಂಜೀವಿನಿ ಯೋಜನೆಯನ್ನು (KASS) ಪಡೆಯಲಿಚ್ಛಿಸದ ರಾಜ್ಯ ಸರ್ಕಾರಿ ನೌಕರರು HRMS ತಂತ್ರಾಂಶದ ಮೂಲಕ ಹೊರಗುಳಿಯುವ (Optout) ಅವಧಿ ಮುಕ್ತಾಯವಾಗಿರುತ್ತದೆ ಎಂದು ಹೇಳಿದ್ದಾರೆ.

    ಆದರೆ, ತಂತ್ರಾಂಶದಲ್ಲಿನ ಕೆಲವೊಂದು ತಾಂತ್ರಿಕ ತೊಂದರೆಗಳಿಂದಾಗಿ ಈ ಯೋಜನೆಗೆ ನೋಂದಾಯಿಸಿಕೊಳ್ಳಲು ಹಾಗೂ ಈ ಯೋಜನೆಯಿಂದ ಹೊರಗುಳಿಯಲು ಸಾಧ್ಯವಾಗುತ್ತಿಲ್ಲವೆಂದು ನೌಕರರಿಂದ ಸಂಘಕ್ಕೆ ಈ ಕೆಳಕಂಡಂತೆ ಮನವಿಗಳು ಸಲ್ಲಿಕೆಯಾಗಿರುತ್ತವೆ.

    • ಪತಿ-ಪತ್ನಿ ಇಬ್ಬರೂ ಸರ್ಕಾರಿ ನೌಕರರಾಗಿರುವ ಪ್ರಕರಣಗಳಲ್ಲಿ ಸರ್ಕಾರಿ ಆದೇಶದಂತೆ ಒಬ್ಬರು ಮಾತ್ರ ವೇತನದಲ್ಲಿ KASS ವಂತಿಗೆ ನೀಡಬೇಕಾಗಿದ್ದು, ಆದರೆ HRMS ತಂತ್ರಾಂಶದಲ್ಲಿ Optout ಮಾಡಲು ಕೆಲವರಿಗೆ ಅವಕಾಶ ಸಿಕ್ಕಿರುವುದಿಲ್ಲ. ಆದ್ದರಿಂದ ಪತಿ-ಪತ್ನಿ ಇಬ್ಬರ ವೇತನದಲ್ಲಿಯೂ ಸಹ ವಂತಿಗೆ ಕಟಾವಣೆಯಾಗುತ್ತಿರುತ್ತದೆ.
    • KASS ಯೋಜನೆಗೆ ಒಳಪಡಲು ಇಚ್ಛಿಸದ ನೌಕರರು ಹೊರಗುಳಿಯಲು ನಿಗದಿತ ಕಾಲಮಿತಿಯಲ್ಲಿ, ನಿಗದಿತ ನಮೂನೆಯಲ್ಲಿಯೇ ಸಲ್ಲಿಸಿದ್ದರೂ ಸಹ D.D.O. ಗಳು ಮೊದಲು HRMS ಮೂಲಕ ಈ ಯೋಜನೆಗೆ ಕುಟುಂಬದ ಎಲ್ಲಾ ಸದಸ್ಯರನ್ನು ನೋಂದಾಯಿಸಿಕೊಂಡು ಆನಂತರ ಈ ಯೋಜನೆಯಿಂದ (Optout) ಹೊರಗುಳಿಯುವಂತೆ ಸೂಚಿಸುತ್ತಿರುವುದರಿಂದ ನೌಕರರು ಕಾಲಮಿತಿಯೊಳಗೆ ಯೋಜನೆಯಿಂದ Optout ಆಗಲು ಸಾಧ್ಯವಾಗಿರುವುದಿಲ್ಲ.
    • ಪತಿ-ಪತ್ನಿ ರಲ್ಲಿ ಒಬ್ಬರು ಪೋಲಿಸ್ ನೌಕರರಾಗಿದ್ದು, ಇಂತಹ ಪ್ರಕರಣದಲ್ಲಿ ಯೋಜನೆಯಿಂದ Optout ಆಗಲು ಬಯಸಿದ್ದು, Optout ಆಗಲು ಅವಕಾಶ ಸಿಕ್ಕಿರುವುದಿಲ್ಲ.
    • ಕೆಲವು ತಾಂತ್ರಿಕ ಕಾರಣಗಳಿಂದಾಗಿ ಯೋಜನೆಯಿಂದ Optout ಆಗಲು ಅವಕಾಶ ಸಿಕ್ಕಿರುವುದಿಲ್ಲ.

    ಈ ರೀತಿಯಾಗಿರುವ ಪತಿ-ಪತ್ನಿ ಪ್ರಕರಣದ ನೌಕರರು Optout ಆಗಲು ಇಚ್ಛಿಸಿದ್ದು, ಇಂತಹ ನೌಕರರ ಸಂಖ್ಯೆ ಕಡಿಮೆ ಇರುತ್ತದೆ. ಹಾಗೂ ಹಲವಾರು ಪತಿ-ಪತ್ನಿ ನೌಕರರಲ್ಲಿ ಒಬ್ಬರು ಈಗಾಗಲೇ Optout ಆಗಿರುತ್ತಾರೆ.

    ಆದ್ದರಿಂದ ದಿನಾಂಕ 25-11-2025ರೊಳಗೆ ಸಂಬಂಧಿಸಿದ ಅಧಿಕಾರಿಗಳಿಗೆ ಲಿಖಿತವಾಗಿ Optout ಆಗಲು ಮನವಿ ಸಲ್ಲಿಸಿರುವ ಪತಿ-ಪತ್ನಿ ಪ್ರಕರಣದ ನೌಕರರಿಗೆ ಒಂದು ಬಾರಿ ಮಾತ್ರ ಈ ಯೋಜನೆಯಿಂದ Optout ಆಗಲು ಅವಕಾಶ ಕಲ್ಪಿಸುವ ಸಂಬಂಧ ಮತ್ತೊಂದು ಅವಧಿಯ ಕಾಲಾವಕಾಶ ನೀಡುವಂತೆ ತಮ್ಮಲ್ಲಿ ಕೋರಿದೆ ಎಂದು ಪತ್ರದಲ್ಲಿ ಮನವಿ ಮಾಡಿದ್ದಾರೆ.

    ಯೋಜನೆ ಕುರಿತು: ಕರ್ನಾಟಕ ಸರ್ಕಾರ ರಾಜ್ಯ ಸರ್ಕಾರಿ ನೌಕರರ ಬೇಡಿಕೆಯಂತೆ ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆಯನ್ನು ರಾಜ್ಯ ಸರ್ಕಾರಿ ನೌಕರರು ಮತ್ತು ಅವರ ಕುಟುಂಬದ ಸದಸ್ಯರಿಗೆ ನಗದುರಹಿತ (Cashless) ವೈದ್ಯಕೀಯ ಚಿಕಿತ್ಸೆ ಒದಗಿಸಲು ಅಕ್ಟೋಬರ್ 1, 2025ರಿಂದ ಜಾರಿಗೆ ತಂದಿದೆ.

    ಇದೊಂದು ಮಹತ್ವಾಕಾಂಕ್ಷಿ ಯೋಜನೆಯಾಗಿದೆ. ಇದನ್ನು ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ಮೂಲಕ ಅನುಷ್ಠಾನಗೊಳಿಸಲಾಗಿದೆ. ಆದರೆ ಯೋಜನೆ ವಿಚಾರದಲ್ಲಿ ಕೆಲವು ಗೊಂದಲಗಳಿದ್ದು, ಅವುಗಳನ್ನು ಬಗೆಹರಿಸಲು ರಾಜ್ಯ ಸರ್ಕಾರಿ ನೌಕರರ ಸಂಘ ಪ್ರಯತ್ನವನ್ನು ನಡೆಸುತ್ತಿದೆ.


    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe to get the latest posts sent to your email.

    Leave a Reply

    Related News

    ಎಸ್‌ಐಆರ್ ಅಕ್ರಮ: ಎನ್‌ಡಿಎ ನಿಯೋಗ ಮುಖ್ಯ ಚುನಾವಣಾ ಆಯುಕ್ತರಿಗೆ ದೂರು

    ಕರ್ನಾಟಕದಲ್ಲಿ ಎಸ್‌ಐಆರ್ ಪ್ರಕ್ರಿಯೆ ದುರುಪಯೋಗದ ಆರೋಪದೊಂದಿಗೆ ಕುಮಾರಸ್ವಾಮಿ ಮತ್ತು ಪ್ರಲ್ಹಾದ ಜೋಶಿ ನೇತೃತ್ವದ ಎನ್‌ಡಿಎ ನಿಯೋಗ ನವದೆಹಲಿಯಲ್ಲಿ ಮುಖ್ಯ ಚುನಾವಣಾ ಆಯುಕ್ತರಿಗೆ ದಾಖಲೆ ಸಮೇತ ದೂರು ಸಲ್ಲಿಸಿತು.

    ಮಾದಪಟ್ಟಣ ಕ್ವಾರಿ ದುರಂತ: ಅಶೋಕ ತಲಾ ₹50 ಲಕ್ಷ ಪರಿಹಾರ ಆಗ್ರಹ

    ಬೆಂಗಳೂರು ಮಾದಪಟ್ಟಣ ಕ್ವಾರಿಯಲ್ಲಿ ಬಂಡೆ ಬಿದ್ದು 7 ಕಾರ್ಮಿಕರು ಮೃತಪಟ್ಟ ಘಟನೆಗೆ ಪ್ರತಿಪಕ್ಷ ನಾಯಕ ಆರ್.ಅಶೋಕ ರಾಜ್ಯ ಸರ್ಕಾರದ ನಿರ್ಲಕ್ಷ್ಯವೇ ಕಾರಣ ಎಂದು ದೂರಿ ತಲಾ ₹50 ಲಕ್ಷ ಪರಿಹಾರ ಒತ್ತಾಯಿಸಿದ್ದಾರೆ.

    Most Popular

    Recent Comments

    Home
    Play
    Notification
    Search

    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe now to keep reading and get access to the full archive.

    Continue reading