Wednesday, September 23, 2026
spot_img
More
    spot_img
    HomeLatest newsಪ್ರಾಯಶ್ಚಿತಕ್ಕಾಗಿ ಸಂವಿಧಾನ ಕೈಯಲ್ಲಿಡಿದ ಕಾಂಗ್ರೆಸ್:‌ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಟೀಕೆ

    ಪ್ರಾಯಶ್ಚಿತಕ್ಕಾಗಿ ಸಂವಿಧಾನ ಕೈಯಲ್ಲಿಡಿದ ಕಾಂಗ್ರೆಸ್:‌ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಟೀಕೆ

    ಗದಗ: ಕಾಂಗ್ರೆಸ್‌ನವರು ಡಾ.ಬಿ.ಆರ್.ಅಂಬೇಡ್ಕರ್‌ ಅವರಿಗೆ ಮಾಡಿರುವ ಅನ್ಯಾಯ, ಅಪಚಾರಕ್ಕೆ ಪ್ರಾಯಶ್ಚಿತ ಮಾಡಿಕೊಳ್ಳಲು ಕೈಯಲ್ಲಿ ಸಂವಿಧಾನ ಹಿಡಿದುಕೊಂಡು ತಿರುಗಾಡುತ್ತಿದ್ದಾರೆ ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಟೀಕೆ ಮಾಡಿದ್ದಾರೆ.

    ಈ ಬಗ್ಗೆ ಗದಗದಲ್ಲಿಂದು ಮಾತನಾಡಿದ ಅವರು, ಸಂವಿಧಾನ ರಚನೆಯಾಗಿ 75 ವರ್ಷಗಳು ಕಳೆದಿವೆ. ಆದರೆ, ಈಗಳು ಅದರ ಪರ ಮತ್ತು ವಿರೋಧ ಯಾರಿದ್ದಾರೆ ಎಂಬ ಚರ್ಚೆ ನಡೆಯುತ್ತಿದೆ. ಸಂವಿಧಾನ ರಚನೆಯ ನಂತರ ಕಾಂಗ್ರೆಸ್‌ನವರು ಆಡಳಿತ ಶುರು ಮಾಡಿ ಸಂವಿಧಾನಕ್ಕೆ ಅಪಚಾರ ಮಾಡಿರುವುದು ಚರ್ಚಾ ವಿಷಯವಾಗಿದೆ ಎಂದರು.

    ಇಡೀ ಜಗತ್ತಿನಲ್ಲಿ ಶ್ರೇಷ್ಠವಾಗಿರುವ ಸಂವಿಧಾನ, ಜೀವಂತವಾಗಿರುವ, ಜನರಿಗೆ ಸ್ಪಂದಿಸುವ ಸಂವಿಧಾನ ಯಾವುದಾದರೂ ಇದ್ದರೆ ಅದು ಭಾರತದ ಸಂವಿಧಾನ. ಜಗತ್ತಿನಲ್ಲಿ ಹಲವಾರು ವಿಧಾನದ ಪ್ರಜಾಪ್ರಭುತ್ವ ಇವೆ. 1947ರಲ್ಲಿ ಭಾರತದೊಂದಿಗೆ ಬ್ರಿಟಿಷ್‌ ವಸಾಹತು ದೇಶಗಳಲ್ಲಿ 19 ದೇಶಗಳು ಸ್ವಾತಂತ್ರ್ಯ ಪಡೆದವು. ಆದರೆ, ಭಾರತದಲ್ಲಿ ಮಾತ್ರ ಪ್ರಜಾಪ್ರಭುತ್ವ ಇದೆ. ಇಲ್ಲಿ ಮಾತ್ರ ವ್ಯಕ್ತಿ ಸ್ವಾತಂತ್ರ್ಯ, ವಾಕ್‌ ಸ್ವಾತಂತ್ರ್ಯ ಇದೆ. ಎಲ್ಲಾ ರೀತಿಯ ಮಾನವ ಹಕ್ಕುಗಳು, ಇಲ್ಲಿ ಸಮಾನತೆ ಇದೆ. ಅಂದರೆ ಅದಕ್ಕೆ ಬಾಬಾ ಸಾಹೇಬ್‌ ಅಂಬೇಡ್ಕರ್‌ ಅವರು ಕೊಟ್ಟಿರುವ ಸಂವಿಧಾನ ಕಾರಣ ಎಂದರು.

    ಕಾನೂನಿನಡಿ ಎಲ್ಲರೂ ಸಮಾನರು. ಭ್ರಾತೃತ್ವ, ಸೌಹಾರ್ದ, ಏಕತೆ, ಅಖಂಡತೆ ಇವೆಲ್ಲಾ ಸಂವಿಧಾನದಲ್ಲಿವೆ. ಆದರೆ, ಇದರ ವಿರುದ್ಧ ಕಾಂಗ್ರೆಸ್‌ ಇದೆ. ಸ್ವಾತಂತ್ರ್ಯ ಬಂದ ಕೂಡಲೇ ಕಾಂಗ್ರೆಸ್‌ ದೇಶವನ್ನು ಇಬ್ಭಾಗ ಮಾಡಿತು. ಸಮಾನತೆ ಎಂದರೆ ಸಾಮಾಜಿಕ, ಆರ್ಥಿಕ ಸಮಾನತೆ ಇರಬೇಕೆಂದು ಸಂವಿಧಾನದಲ್ಲಿ ಹೇಳಿದೆ. ಕಾಂಗ್ರೆಸ್‌ನವರು ಆರ್ಥಿಕ ಅಸಮಾನತೆ ಉಂಟು ಮಾಡಿದರು. ಗರೀಬಿ ಹಠಾವೋ ಅಂದರು, ಗರೀಬರನ್ನೇ ಹಠಾವೋ ಮಾಡುತ್ತಿದ್ದಾರೆ ಎಂದು ಹರಿಹಾಯ್ದರು.


    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe to get the latest posts sent to your email.

    Leave a Reply

    Related News

    ಎಸ್‌ಐಆರ್ ಅಕ್ರಮ: ಎನ್‌ಡಿಎ ನಿಯೋಗ ಮುಖ್ಯ ಚುನಾವಣಾ ಆಯುಕ್ತರಿಗೆ ದೂರು

    ಕರ್ನಾಟಕದಲ್ಲಿ ಎಸ್‌ಐಆರ್ ಪ್ರಕ್ರಿಯೆ ದುರುಪಯೋಗದ ಆರೋಪದೊಂದಿಗೆ ಕುಮಾರಸ್ವಾಮಿ ಮತ್ತು ಪ್ರಲ್ಹಾದ ಜೋಶಿ ನೇತೃತ್ವದ ಎನ್‌ಡಿಎ ನಿಯೋಗ ನವದೆಹಲಿಯಲ್ಲಿ ಮುಖ್ಯ ಚುನಾವಣಾ ಆಯುಕ್ತರಿಗೆ ದಾಖಲೆ ಸಮೇತ ದೂರು ಸಲ್ಲಿಸಿತು.

    ಮಾದಪಟ್ಟಣ ಕ್ವಾರಿ ದುರಂತ: ಅಶೋಕ ತಲಾ ₹50 ಲಕ್ಷ ಪರಿಹಾರ ಆಗ್ರಹ

    ಬೆಂಗಳೂರು ಮಾದಪಟ್ಟಣ ಕ್ವಾರಿಯಲ್ಲಿ ಬಂಡೆ ಬಿದ್ದು 7 ಕಾರ್ಮಿಕರು ಮೃತಪಟ್ಟ ಘಟನೆಗೆ ಪ್ರತಿಪಕ್ಷ ನಾಯಕ ಆರ್.ಅಶೋಕ ರಾಜ್ಯ ಸರ್ಕಾರದ ನಿರ್ಲಕ್ಷ್ಯವೇ ಕಾರಣ ಎಂದು ದೂರಿ ತಲಾ ₹50 ಲಕ್ಷ ಪರಿಹಾರ ಒತ್ತಾಯಿಸಿದ್ದಾರೆ.

    Most Popular

    Recent Comments

    Home
    Play
    Notification
    Search

    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe now to keep reading and get access to the full archive.

    Continue reading