ಲಾಯರ್ ಜಗದೀಶ್ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಸುದ್ದಿಯಲ್ಲಿದ್ದು, ಹೆಚ್ಚಾಗಿ ವಿವಾದಗಳಿಂದಲೇ ಚರ್ಚೆಗೀಡಾಗಿರುವ ಜಗದೀಶ್ ಇದೀಗ ಮತ್ತೊಮ್ಮೆ ಅದೇ ಕಾರಣಕ್ಕೆ ಸುದ್ದಿಗೀಡಾಗಿದ್ದಾರೆ.
ಮೊನ್ನೆಯಷ್ಟೇ ಕೊಡಿಗೇಹಳ್ಳಿಯಲ್ಲಿ ರಸ್ತೆ ಮೇಲೆ ಅಣ್ಣಮ್ಮ ಕೂರಿಸಿದ ಕಾರಣಕ್ಕೆ ಸ್ಥಳೀಯರ ಜೊತೆ ಜಗಳಕ್ಕಿಳಿದಿದ್ದ ಜಗದೀಶ್ ಮೇಲೆ ರಸ್ತೆಯಲ್ಲೇ ಹಲ್ಲೆ ನಡೆದಿತ್ತು. ಇದೀಗ ಮತ್ತೊಮ್ಮೆ ಜಗದೀಶ್ ಮೇಲೆ ಹಲ್ಲೆ ನಡೆದಿದ್ದು, ಈ ಬಾರಿ ಜಗದೀಶ್ ಮೂಗಿನಿಂದ ರಕ್ತ ಸೋರುವ ಮಟ್ಟಕ್ಕೆ ಹಲ್ಲೆ ನಡೆದಿದ್ದು ಕಾರಿನ ಮೇಲೂ ಸಹ ಕಲ್ಲು ಹಾಗೂ ದೊಣ್ಣೆಗಳನ್ನು ಕಿಡಿಗೇಡಿಗಳು ಬಿಸಾಡಿದ್ದಾರೆ.
ಇನ್ನು ಜಗದೀಶ್ ಮನೆ ಸಮೀಪವೇ ಈ ಘಟನೆ ನಡೆದಿದ್ದು, ಹಲ್ಲೆ ಸಮಯದಲ್ಲಿ ಮೊಬೈಲ್‌ನಲ್ಲಿ ಚಿತ್ರೀಕರಿಸಿದ ವಿಡಿಯೊಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ. ಈ ಪೈಕಿ ಒಂದು ವಿಡಿಯೊದಲ್ಲಿ ಹಲ್ಲೆಗೊಳಗಾದ ಜಗದೀಶ್ ಅವರನ್ನು ಪೊಲೀಸರು ಕರೆದೊಯ್ಯುತ್ತಿದ್ದು, ವಿಡಿಯೊ ಚಿತ್ರೀಕರಿಸಿದಾತ ʼಮುಖ ಮೂತಿ ಎಲ್ಲಾ ಕಿತ್ತೋಗಿದೆ ಜಗದೀಶ್ ಸರ್‌ದು, ಪೂರ್ತಿ ಹೊಡೆದು ಹೋಗಿದೆ. ಮೂತಿ ಎಲ್ಲಾ ಕಿತ್ತೋಗಿದೆ ಪಾಪ. ಯಾಕ್ ಬೇಕು ಗಲಾಟೆ? ಬೇಡ ಬೇಡ ಅಂದ್ರೂ ಕೇಳಲ್ಲʼ ಎಂದು ಹೇಳಿರುವುದು ವಿಡಿಯೊದಲ್ಲಿ ಸೆರೆಯಾಗಿದೆ.
ಇನ್ನು ಮತ್ತೊಂದು ವಿಡಿಯೊದಲ್ಲಿ ಲಾಯರ್ ಜಗದೀಶ್ ಕಾರಿನ ಮೇಲೆ ಕಲ್ಲು ಹಾಗೂ ದೊಣ್ಣೆ ಬಿಸಾಡುತ್ತಿರುವ ದೃಶ್ಯವೂ ಸಹ ಸೆರೆಯಾಗಿದೆ. ಪೊಲೀಸರು ಸ್ಥಳದಲ್ಲಿಯೇ ಇದ್ದರೂ ಇಷ್ಟು ದೊಡ್ಡ ಗಲಾಟೆ ನಡೆದಿದೆ.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


