ರಾವಲ್ಪಿಂಡಿ: ಇಲ್ಲಿನ ರಾವಲ್ಪಿಂಡಿ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಐಸಿಸಿ ಚಾಂಪಿಯನ್ಸ್ ಟ್ರೋಫಿಯ ಏಳನೇ ಪಂದ್ಯದಲ್ಲಿ ಆಸ್ಟ್ರೇಲಿಯಾ ಹಾಗೂ ದಕ್ಷಿಣ ಆಫ್ರಿಕಾ ಪಂದ್ಯಕ್ಕೆ ಮಳೆ ಅಡ್ಡಿಪಡಿಸಿದೆ.
ಪಂದ್ಯದ ಟಾಸ್ಗೂ ಮುನ್ನವೇ ಶುರುವಾದ ಮಳೆ ಒಮ್ಮೆಯೂ ವಿಶ್ರಾಂತಿ ತೆಗೆದುಕೊಂಡಿಲ್ಲ. ಹೀಗಾಗಿ ಸತತ ಸುರಿಯುತ್ತಿರುವ ಭಾರೀ ಮಳೆಗೆ ಟಾಸ್ ಸಹ ವಿಳಂಭವಾಗಿದೆ.
ಮಧ್ಯಾಹ್ನದಿಂದಲೂ ಮಳೆ ಸುರಿಯುತ್ತಿದ್ದು ಓವರ್ ಕಡಿತಗೊಳಿಸಿ ಪಂದ್ಯ ನಡೆಸಲು ಐಸಿಸಿ ಕಾಯುತ್ತಿದೆ. ಇನ್ನು ಸದ್ಯ ಪಂದ್ಯದ ಮೊದಲ ಇನ್ನಿಂಗ್ಸ್ನ ಮುಕ್ಕಾಲು ಭಾಗ ಆಟ ಮುಗಿಯುವ ಸಮಯ ಬಂದಿದ್ದು ಇನ್ನೂ ಸಹ ಮಳೆ ನಿಂತಿಲ್ಲ. ಹೀಗಾಗಿ ಸದ್ಯ ಪಾಕಿಸ್ತಾನದ ಕಾಲಮಾನದ ಪ್ರಕಾರ ಸಂಜೆ 7.32ರ ಒಳಗೆ ಮಳೆ ನಿಂತರೆ ( ಭಾರತೀಯ ಕಾಲಮಾನದ ಪ್ರಕಾರ ಸಂಜೆ 7.02) 20 ಓವರ್ಗಳ ಪಂದ್ಯ ನಡೆಸಲು ತೀರ್ಮಾನಿಸಲಾಗಿದೆ.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


