ರಾವಲ್ಪಿಂಡಿ: ಇಲ್ಲಿನ ರಾವಲ್ಪಿಂಡಿ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಐಸಿಸಿ ಚಾಂಪಿಯನ್ಸ್ ಟ್ರೋಫಿಯ ಏಳನೇ ಪಂದ್ಯದಲ್ಲಿ ಆಸ್ಟ್ರೇಲಿಯಾ ಹಾಗೂ ದಕ್ಷಿಣ ಆಫ್ರಿಕಾ ಮುಖಾಮುಖಿಯಾಗಿದ್ದು, ಮಳೆಯ ಆರ್ಭಟಕ್ಕೆ ಪಂದ್ಯ ಸಹ ಆಗದೇ ರದ್ದಾಗಿದೆ.
ಪರಿಣಾಮ ಆಸ್ಟ್ರೇಲಿಯಾ ಹಾಗೂ ದಕ್ಷಿಣ ಆಫ್ರಿಕಾ ತಂಡಗಳಿಗೆ ತಲಾ ಒಂದೊಂದು ಅಂಕ ಸಿಕ್ಕಿದೆ. ಮಧ್ಯಾಹ್ನದಿಂದಲೂ ಸುರಿದ ಮಳೆ ಎಲ್ಲಿಯೂ ನಿಲ್ಲುವ ಸುಳಿವನ್ನೂ ನೀಡಲಿಲ್ಲ. ಕೊನೆಗೆ ಇಪ್ಪತ್ತು ಓವರ್ಗಳ ಪಂದ್ಯವನ್ನು ನಡೆಸಲು ತೀರ್ಮಾನಿಸಲಾಯಿತಾದರೂ ಅದಕ್ಕೂ ಮಳೆ ದಾರಿ ಮಾಡಿಕೊಡಲಿಲ್ಲ.
ಇನ್ನು ಟೂರ್ನಿಯ ತಮ್ಮ ಮೊದಲ ಪಂದ್ಯಗಳಲ್ಲಿ ಆಸ್ಟ್ರೇಲಿಯಾ ಹಾಗೂ ದಕ್ಷಿಣ ಆಫ್ರಿಕಾ ತಂಡಗಳು ಜಯ ಸಾಧಿಸಿದ್ದ ಕಾರಣ ಈ ಪಂದ್ಯದ ಒಂದು ಅಂಕ ಸೇರಿ ತಲಾ ಮೂರು ಅಂಕಗಳನ್ನು ಪಡೆದಿವೆ. ಅತ್ತ ಬಿ ಗುಂಪಿನ ಮತ್ತೆರಡು ತಂಡಗಳಾದ ಇಂಗ್ಲೆಂಡ್ ಮತ್ತು ಅಫ್ಘಾನಿಸ್ತಾನ ತಲಾ ಒಂದು ಪಂದ್ಯವನ್ನಾಡಿ ಸೋತಿವೆ.
ಹೀಗಾಗಿ ಈ ಪಂದ್ಯದಲ್ಲಿ ಎರಡೂ ತಂಡಗಳಿಗೂ ತಲಾ ಒಂದು ಅಂಕ ಸಿಕ್ಕಿರುವುದು ಇಂಗ್ಲೆಂಡ್ ಹಾಗೂ ಅಫ್ಘಾನಿಸ್ತಾನ ತಂಡಗಳಿಗೆ ಭಾರೀ ಹಿನ್ನಡೆಯನ್ನುಂಟುಮಾಡಿದೆ. ನಾಳಿನ ಪಂದ್ಯದಲ್ಲಿ ಇಂಗ್ಲೆಂಡ್ ಹಾಗೂ ಅಫ್ಘಾನಿಸ್ತಾನ ಮುಖಾಮುಖಿಯಾಗಲಿದ್ದು, ಸೋಲುವ ತಂಡ ನೇರವಾಗಿ ಟೂರ್ನಿಯಿಂದ ಹೊರಬೀಳಲಿದೆ. ಪಾಕ್, ಬಾಂಗ್ಲಾದೇಶ ಬಳಿಕ ಎಲಿಮಿನೇಟ್ ಆದ ಮೂರನೇ ತಂಡ ಎನಿಸಿಕೊಳ್ಳಲಿದೆ.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


