Friday, November 6, 2026
spot_img
More
    spot_img
    HomeEntertainmentರೀಲ್ಸ್‌ನಲ್ಲಿ ಮಚ್ಚು, ಪೊಲೀಸರಿಗೇ ಚಳ್ಳೆಹಣ್ಣು; ವಿಚಾರಣೆಗೆ ಬರುತ್ತಿದ್ದಂತೆ ರಜತ್, ವಿನಯ್ ಮತ್ತೆ ಲಾಕ್!

    ರೀಲ್ಸ್‌ನಲ್ಲಿ ಮಚ್ಚು, ಪೊಲೀಸರಿಗೇ ಚಳ್ಳೆಹಣ್ಣು; ವಿಚಾರಣೆಗೆ ಬರುತ್ತಿದ್ದಂತೆ ರಜತ್, ವಿನಯ್ ಮತ್ತೆ ಲಾಕ್!

    ಬಿಗ್‌ಬಾಸ್‌ನ ಮಾಜಿ ಸ್ಪರ್ಧಿಗಳು ಹಾಗೂ ಕುಚಿಕು ಸ್ನೇಹಿತರೂ ಆಗಿರುವ ರಜತ್ ಮತ್ತು ವಿನಯ್ ಸದ್ಯ ಗರ್ಲ್ಸ್ ವರ್ಸಸ್ ಬಾಯ್ಸ್ ರಿಯಾಲಿಟಿ ಶೋನಲ್ಲಿ ಭಾಗವಹಿಸಿದ್ದರು. ಇದೇ ಕಾರ್ಯಕ್ರಮದ ಪ್ರದರ್ಶನವೊಂದಕ್ಕಾಗಿ ವಿನಯ್ ಪುಷ್ಪರಾಜ್ ಅವತಾರದಲ್ಲಿ, ರಜತ್ ದರ್ಶನ್ ಚಿತ್ರಗಳ ಹೆಸರುಳ್ಳ ಪ್ಯಾಂಟ್ ಧರಿಸಿ ಸಜ್ಜಾಗಿದ್ದರು.

    ಪ್ರದರ್ಶನ ನೀಡಿದ್ವಾ ಹೋದ್ವಾ ಎನ್ನುವುದನ್ನು ಬಿಟ್ಟು ಇಬ್ಬರೂ ರೀಲ್ಸ್ ಹುಚ್ಚಿಗೆ ಒಳಗಾಗಿ ಇದೀಗ ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ. ಹೌದು, ಲಾಂಗ್ ಹಿಡಿದು ರೀಲ್ಸ್ ಮಾಡಿದ್ದ ಈ ಇಬ್ಬರು ವಿಡಿಯೊ ವೈರಲ್ ಆದ ನಂತರ ಪೊಲೀಸರ ಅತಿಥಿಯಾಗಿದ್ದರು. ಶಸ್ತ್ರಾಸ್ತ್ರ ಪ್ರಕರಣದಡಿಯಲ್ಲಿ ಇಬ್ಬರನ್ನು ಬಂಧಿಸಲಾಗಿತ್ತು. ಬಳಿಕ ತಡರಾತ್ರಿ ಬಿಡುಗಡೆ ಮಾಡಲಾಗಿತ್ತು.

    ಇನ್ನೇನು ವಿಚಾರಣೆ ಮುಗಿಯಿತು, ಬಿಡುಗಡೆ ಆಯಿತು ಎಂದು ಖುಷಿಯಲ್ಲಿದ್ದ ಇಬ್ಬರಿಗೆ ಖಾಕಿ ಮತ್ತೆ ಶಾಕ್ ಕೊಟ್ಟಿದೆ. ನಿನ್ನೆ ವಿಚಾರಣೆ ವೇಳೆ ಆ ಇಬ್ಬರು ತಂದಿದ್ದ ಮಚ್ಚಿಗೂ ರೀಲ್ಸ್‌ನಲ್ಲಿ ಇರುವ ಮಚ್ಚಿಗೂ ವ್ಯತ್ಯಾಸ ಕಂಡುಬಂದಿದೆ.

    ಹೀಗಾಗಿ ಪೊಲೀಸರು ಇಂದು ಮತ್ತೆ ಇಬ್ಬರನ್ನು ವಿಚಾರಣೆಗೆ ಆಹ್ವಾನಿಸಿದ್ದಾರೆ. ತಡವಾಗಿ ಠಾಣೆಗೆ ಬಂದ ಇಬ್ಬರ ವಿಚಾರಣೆ ಮುಗಿಯುತ್ತಿದ್ದಂತೆ ಪೊಲೀಸರು ಅಲ್ಲಿಯೇ ಇಬ್ಬರನ್ನು ವಶಕ್ಕೆ ಪಡೆದಿದ್ದಾರೆ. ಇಬ್ಬರು ಲಾಂಗ್ ಹಿಡಿದು ರೀಲ್ಸ್ ಮಾಡಿದ್ದ ಅಕ್ಷಯ್ ಸ್ಟುಡಿಯೊಗೆ ಪೊಲೀಸರು ಕರೆದೊಯ್ಯಲಿದ್ದು ಸ್ಥಳ ಮಹಜರು ನಡೆಸಲಿದ್ದಾರೆ.


    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe to get the latest posts sent to your email.

    LEAVE A REPLY

    Related News

    ಮಹಾಲಯ ಅಮಾವಾಸ್ಯೆ 2026: ಅಕ್ಟೋಬರ್ 10ರಂದು ಆಚರಣೆ; ಪಿತೃಪೂಜೆಯ ಮಹತ್ವವೇನು?

    ಹಿಂದೂ ಧರ್ಮದಲ್ಲಿ ಮಹಾಲಯ ಅಮಾವಾಸ್ಯೆಗೆ ವಿಶೇಷ ಸ್ಥಾನವಿದೆ. ಪಿತೃಪಕ್ಷದ ಕೊನೆಯ ದಿನವಾದ ಈ ಸಂದರ್ಭದಲ್ಲಿ ಪೂರ್ವಜರನ್ನು ಸ್ಮರಿಸಿ, ಅವರ ಆತ್ಮಕ್ಕೆ ಶಾಂತಿ ಕೋರಿ ವಿವಿಧ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಲಾಗುತ್ತದೆ. ಈ ದಿನ ಶ್ರಾದ್ಧ,...

    ಕರ್ನಾಟಕಕ್ಕೆ ಗುಡ್‌ನ್ಯೂಸ್: ಯುಬಿಯಿಂದ ₹4,500 ಕೋಟಿ ಕೊಡುಗೆ, 36 ಸಾವಿರಕ್ಕೂ ಹೆಚ್ಚು ಉದ್ಯೋಗ

    ಬೆಂಗಳೂರು: ದೇಶದ ಅತಿದೊಡ್ಡ ಬಿಯರ್ ಉತ್ಪಾದನಾ ಸಂಸ್ಥೆ ಹಾಗೂ ಹೈನೆಕನ್‌ ಕಂಪನಿಯ ಭಾಗವಾಗಿರುವ ಬೆಂಗಳೂರು ಮೂಲದ 'ಯುನೈಟೆಡ್ ಬ್ರೂವರೀಸ್ ಲಿಮಿಟೆಡ್' (ಯುಬಿಎಲ್‌), ಕರ್ನಾಟಕದ ಆರ್ಥಿಕತೆ ಮತ್ತು ಉದ್ಯೋಗ ಸೃಷ್ಟಿಯಲ್ಲಿ ಮಹತ್ವದ ಪಾತ್ರ ವಹಿಸುತ್ತಿದೆ...

    Most Popular

    Recent Comments

    Home
    Play
    Notification
    Search