ಸೂರಿ ನಿರ್ದೇಶನದ ಪಾಪ್ಕಾರ್ನ್ ಮಂಕಿ ಟೈಗರ್ ಸಿನಿಮಾದ ಮೂಲಕ ಬಣ್ಣದ ಲೋಕಕ್ಕ ಕಾಲಿಟ್ಟ ನಟಿ ಸಪ್ತಮಿ ಗೌಡ ನಟನೆಯ ಐದನೇ ಸಿನಿಮಾ ಘೋಷಣೆಯಾಗಿದೆ.
ನೀನಾಸಂ ಸತೀಶ್ ನಾಯಕನಾಗಿ ಅಭಿನಯಿಸುತ್ತಿರುವ ದ ರೈಸ್ ಆಫ್ ಅಶೋಕ ಚಿತ್ರದಲ್ಲಿ ಸಪ್ತಮಿ ಗೌಡ ನಾಯಕಿಯಾಗಿ ನಟಿಸುತ್ತಿದ್ದಾರೆ. ಚಿತ್ರದಲ್ಲಿ ಅಂಬಿಕಾ ಎಂಬ ಹಳ್ಳಿ ಹುಡುಗಿ ಪಾತ್ರದಲ್ಲಿ ಸಪ್ತಮಿ ಗೌಡ ಕಾಣಿಸಿಕೊಳ್ಳುತ್ತಿದ್ದು, ಸೈಕಲ್ ಏರಿ ಹಿಂದೆ ಹೂ ಬುಟ್ಟಿ ಇಟ್ಟುಕೊಂಡು ಫಸ್ಟ್ಲುಕ್ನಲ್ಲಿ ಮಿಂಚಿದ್ದಾರೆ.
ತಮ್ಮ ಪಾತ್ರ ಪರಿಚಯದ ಪೋಸ್ಟರ್ ಅನ್ನು ಸಪ್ತಮಿ ಗೌಡ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಸಪ್ತಮಿ ಗೌಡಗೆ ಸ್ನೇಹಿತರು ಹಾಗೂ ಅಭಿಮಾನಿಗಳು ಹೊಸ ಚಿತ್ರದ ಸಲುವಾಗಿ ಶುಭ ಕೋರಿದ್ದಾರೆ.
ಪಾಪ್ಕಾರ್ನ್ ಮಂಕಿ ಟೈಗರ್ನಲ್ಲಿನ ತನ್ನ ಖಡಕ್ ಡೈಲಾಗ್ಗಳ ಮೂಲಕ ಮನಗೆದ್ದಿದ್ದ ಸಪ್ತಮಿ ಗೌಡ ಬಳಿಕ ಕಾಂತಾರ ಮೂಲಕ ಪ್ಯಾನ್ ಇಂಡಿಯಾ ಮಟ್ಟ ತಲುಪಿ ಬಾಲಿವುಡ್ಗೂ ಸಹ ಕಾಲಿಟ್ಟಿದ್ದರು. ವಿವೇಕ್ ಅಗ್ನಿಹೋತ್ರಿ ನಿರ್ದೇಶನದ ವಾಕ್ಸಿನ್ ವಾರ್ ಎಂಬ ಹಿಂದಿ ಚಿತ್ರದಲ್ಲಿ ಸಪ್ತಮಿ ನಟಿಸಿದ್ದರು. ಈ ಚಿತ್ರದ ಬಳಿಕ ಯುವ ಚಿತ್ರದಲ್ಲೂ ಸಹ ನಟಿಸಿದ ಸಪ್ತಮಿ ಸದ್ಯ ಅಶೋಕನಿಗೆ ನಾಯಕಿಯಾಗಿದ್ದಾರೆ.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


