Thursday, November 5, 2026
spot_img
More
    spot_img
    HomeLatest newsManaswini Scheme: ಮಹಿಳೆಯರ ಸಬಲೀಕರಣಕ್ಕೆ ಮನಸ್ವಿನಿ ಯೋಜನೆಯಿಂದ ಆರ್ಥಿಕ ಸಹಾಯ

    Manaswini Scheme: ಮಹಿಳೆಯರ ಸಬಲೀಕರಣಕ್ಕೆ ಮನಸ್ವಿನಿ ಯೋಜನೆಯಿಂದ ಆರ್ಥಿಕ ಸಹಾಯ

    ಮಹಿಳಾ ಸಬಲೀಕರಣವನ್ನು ಉತ್ತೇಜಿಸುವ ನಿಟ್ಟಿನಲ್ಲಿ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ವಿವಿಧ ಯೋಜನೆಗಳನ್ನು ಜಾರಿಗೆ ತಂದಿವೆ. ಇದರ ಭಾಗವಾಗಿ, ಕರ್ನಾಟಕ ಸರ್ಕಾರ ಗ್ರಾಮೀಣ ಪ್ರದೇಶಗಳಲ್ಲಿ ವಾಸಿಸುವ ಬಡತನ ರೇಖೆಗಿಂತ ಕೆಳಗಿನ ಅವಿವಾಹಿತ, ವಿಚ್ಛೇದಿತ ಮತ್ತು ವಿಧವೆಯಾದ ಮಹಿಳೆಯರ ಸಾಮಾಜಿಕ ಹಾಗೂ ಆರ್ಥಿಕ ಸ್ಥಿತಿಯನ್ನು ಬಲಪಡಿಸುವ ಉದ್ದೇಶದಿಂದ ಮನಸ್ವಿನಿ ಯೋಜನೆಯನ್ನು 2013ರಲ್ಲಿ ಆರಂಭಿಸಿತು. ಈ ಯೋಜನೆಯಡಿ 40ರಿಂದ 64 ವರ್ಷ ವಯಸ್ಸಿನ ಮಹಿಳೆಯರಿಗೆ ಪ್ರತಿ ತಿಂಗಳು ₹800 ಮಾಸಾಶನ ನೀಡಲಾಗುತ್ತದೆ. ಈ ನೆರವು ಮಹಿಳೆಯರು ಸ್ವಾವಲಂಬಿ ಜೀವನ ನಡೆಸಲು ಹಾಗೂ ಸಮಾಜದ ಮುಖ್ಯವಾಹಿನಿಗೆ ಸೇರುವಂತಾಗಲು ಸಹಕಾರಿಯಾಗುತ್ತದೆ.65 ವರ್ಷಕ್ಕಿಂತ ಹೆಚ್ಚು ವಯಸ್ಸು ಹೊಂದಿದ ಅವಿವಾಹಿತ ಹಾಗೂ ವಿಚ್ಛೇದಿತ ಮಹಿಳೆಯರಿಗೆ ರಾಷ್ಟ್ರೀಯ ವೃದ್ಧಾಪ್ಯ ಪಿಂಚಣಿ ಯೋಜನೆಯಡಿ ನೆರವು ಲಭ್ಯವಿದೆ. ಮನಸ್ವಿನಿ ಯೋಜನೆಯಡಿ ಹಣವನ್ನು ಫಲಾನುಭವಿಯ ಬ್ಯಾಂಕ್ ಖಾತೆಗೆ ಅಥವಾ ಅಂಚೆ ಕಚೇರಿಯ ಖಾತೆಗೆ ನೇರ ನಗದು ವರ್ಗಾವಣೆ ಮೂಲಕ ಜಮೆ ಮಾಡಲಾಗುತ್ತದೆ. ಇದು ಮಹಿಳೆಯರ ಜೀವನದಲ್ಲಿ ಆರ್ಥಿಕ ಸ್ಥಿರತೆ ಹಾಗೂ ಗೌರವಯುತ ಬದುಕು ನಿರ್ಮಿಸುವತ್ತ ಒಂದು ಮಹತ್ವದ ಹೆಜ್ಜೆಯಾಗಿದೆ.

    ಅರ್ಹತಾ ಮಾನದಂಡಗಳು:

    ಅರ್ಹ ಮಹಿಳೆಯ ವಯಸ್ಸು 40 ರಿಂದ 64 ವರ್ಷಗಳ ನಡುವೆ ಇರಬೇಕು.

    ಮಹಿಳೆ ಅವಿವಾಹಿತ, ವಿಚ್ಛೇದಿತ (divorced) ಅಥವಾ ಬೇರ್ಪಟ್ಟ (separated) ಆಗಿರಬೇಕು.

    ವಿಧವೆ (widow) ಯರು ಕೂಡ ಕೆಲವು ಸಂದರ್ಭದಲ್ಲಿ ಈ ಯೋಜನೆಯ ಲಾಭ ಪಡೆಯಬಹುದು, ಆದರೆ ಅವರಿಗಾಗಿ ಇತರೆ ಯೋಜನೆಗಳು ಪ್ರತ್ಯೇಕವಾಗಿ ಲಭ್ಯವಿರುವ ಸಾಧ್ಯತೆ ಇದೆ.

    ಮಹಿಳೆ ಬಡತನ ರೇಖೆಗಿಂತ ಕೆಳಗೆ (BPL) ಆಗಿರಬೇಕು. BPL ಕಾರ್ಡ್ ಹೊಂದಿದ್ದು, ಸಮ್ಮತಿತ ಪ್ರಮಾಣಪತ್ರ ಇರಬೇಕು.

    ಅರ್ಜಿದಾರ್ತಿ ಕರ್ನಾಟಕ ರಾಜ್ಯದ ನೆರೆವಾಸಿ ಆಗಿರಬೇಕು ಮತ್ತು ಸ್ಥಳೀಯ ಪ್ರಾಧಿಕಾರದ ದಾಖಲೆಗಳಲ್ಲಿ ಹೆಸರು ಇರಬೇಕು.

    ಫಲಾನುಭವಿಯು ವಿವಾಹ ಅಥವಾ ಮರುವಿವಾಹ ಮಾಡಿಕೊಂಡರೆ,ಉದ್ಯೋಗ ನಿಗದಿತ ಆದಾಯ ಮಿತಿಗಿಂತ ಹೆಚ್ಚು ಸಂಪಾದನೆ ಮಾಡಿದರೆ,ಯೋಜನೆಯ ಅಡಿಯಲ್ಲಿ ಲಭಿಸುತ್ತಿರುವ ಮಾಸಾಶನ ರದ್ದಾಗುತ್ತದೆ.

    ಅಗತ್ಯ ದಾಖಲೆಗಳು

    ಗುರುತಿನ ಚೀಟಿ (ಆಧಾರ್, ರೇಶನ್ ಕಾರ್ಡ್)

    BPL ಕಾರ್ಡ್

    ವಯಸ್ಸಿನ ಪ್ರಮಾಣ ಪತ್ರ

    ವಿಚ್ಛೇದನಾ ಪ್ರಮಾಣ ಪತ್ರ ಅಥವಾ ಸಂಬಂಧಿತ ದಾಖಲೆಗಳು

    ಬ್ಯಾಂಕ್ ಖಾತೆಯ ವಿವರಗಳು

    ಅರ್ಜಿಯನ್ನು ಎಲ್ಲಿ ಮತ್ತು ಹೇಗೆ ಸಲ್ಲಿಸಬೇಕು?

    ಮನಸ್ವಿನಿ ಯೋಜನೆಯ ಫಲಾನುಭವಿಗಳಾಗಲು ಆಸಕ್ತರಾದ ಮಹಿಳೆಯರು, ತಮ್ಮ ವಸತಿ ಪ್ರದೇಶದ ವ್ಯಾಪ್ತಿಗೆ ಒಳಪಡುವ ಅಟಲ್‌ಜೀ ಜನಸ್ನೇಹಿ ಕೇಂದ್ರಗಳಲ್ಲಿ ಅರ್ಜಿ ಸಲ್ಲಿಸಬೇಕು. ಅರ್ಜಿ ಸಲ್ಲಿಸುವಾಗ, ನಿಗದಿತ ನಮೂನೆಯಲ್ಲಿ ಭರ್ತಿ ಮಾಡಿದ ಅರ್ಜಿ ಹಾಗೂ ಅಗತ್ಯ ದಾಖಲೆಗಳನ್ನು ಜೋಡಿಸಬೇಕು.ಒಬ್ಬ ವ್ಯಕ್ತಿಯಿಂದ ಒಂದಕ್ಕಿಂತ ಹೆಚ್ಚು ಅರ್ಜಿಗಳನ್ನು ಸಲ್ಲಿಸಲು ಅವಕಾಶವಿಲ್ಲ, ಹಾಗಾಗಿ ಅರ್ಜಿ ಸಲ್ಲಿಸುವಾಗ ಸಂಪೂರ್ಣ ಮಾಹಿತಿಯನ್ನು ಸರಿಯಾಗಿ ಪೂರೈಸುವುದು ಅತ್ಯಗತ್ಯ. ತಪ್ಪು ಮಾಹಿತಿಯನ್ನು ನೀಡಿದರೆ ಅಥವಾ ಅರ್ಹತೆ ಪೂರೈಸದವರ ಅರ್ಜಿಗಳನ್ನು ನಿರಾಕರಿಸಲಾಗುತ್ತದೆ.

    ಮನಸ್ವಿನಿ ಯೋಜನೆಗೆ ಅರ್ಜಿ ಸಲ್ಲಿಸುವ ವಿಧಾನ

    ಹಂತ 1:

    ಮೊದಲು, ನಿಗದಿತ ಅರ್ಜಿ ನಮೂನೆಯನ್ನು ಭರ್ತಿ ಮಾಡಿ, ಅಗತ್ಯವಿರುವ ಎಲ್ಲಾ ದಾಖಲೆಗಳನ್ನು ಲಗತ್ತಿಸಿ.

    ಹಂತ 2:

    ಭರ್ತಿಯಾದ ಅರ್ಜಿ ಹಾಗೂ ದಾಖಲೆಗಳನ್ನು ನಿಮ್ಮ ವಸತಿ ಪ್ರದೇಶದ ಕನ್ನಡಕದ ಕಂದಾಯ ಇಲಾಖೆಯ ಅಟಲ್‌ಜೀ ಜನಸ್ನೇಹಿ ಕೇಂದ್ರ ಅಥವಾ ನಾಡಕಚೇರಿಗೆ ಸಲ್ಲಿಸಿ.

    ಗಮನಿಸಿ: ಒಬ್ಬ ಅರ್ಜಿದಾರರಿಂದ ಒಂದಕ್ಕಿಂತ ಹೆಚ್ಚು ಅರ್ಜಿಗಳನ್ನು ಸ್ವೀಕರಿಸಲಾಗುವುದಿಲ್ಲ.ಅರ್ಜಿ ನಮೂನೆಯನ್ನು ಡೌನ್‌ಲೋಡ್ ಮಾಡಲು ಇಲ್ಲಿ ಕ್ಲಿಕ್‌ ಮಾಡಿ


    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe to get the latest posts sent to your email.

    LEAVE A REPLY

    Related News

    ಮಹಾಲಯ ಅಮಾವಾಸ್ಯೆ 2026: ಅಕ್ಟೋಬರ್ 10ರಂದು ಆಚರಣೆ; ಪಿತೃಪೂಜೆಯ ಮಹತ್ವವೇನು?

    ಹಿಂದೂ ಧರ್ಮದಲ್ಲಿ ಮಹಾಲಯ ಅಮಾವಾಸ್ಯೆಗೆ ವಿಶೇಷ ಸ್ಥಾನವಿದೆ. ಪಿತೃಪಕ್ಷದ ಕೊನೆಯ ದಿನವಾದ ಈ ಸಂದರ್ಭದಲ್ಲಿ ಪೂರ್ವಜರನ್ನು ಸ್ಮರಿಸಿ, ಅವರ ಆತ್ಮಕ್ಕೆ ಶಾಂತಿ ಕೋರಿ ವಿವಿಧ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಲಾಗುತ್ತದೆ. ಈ ದಿನ ಶ್ರಾದ್ಧ,...

    ಕರ್ನಾಟಕಕ್ಕೆ ಗುಡ್‌ನ್ಯೂಸ್: ಯುಬಿಯಿಂದ ₹4,500 ಕೋಟಿ ಕೊಡುಗೆ, 36 ಸಾವಿರಕ್ಕೂ ಹೆಚ್ಚು ಉದ್ಯೋಗ

    ಬೆಂಗಳೂರು: ದೇಶದ ಅತಿದೊಡ್ಡ ಬಿಯರ್ ಉತ್ಪಾದನಾ ಸಂಸ್ಥೆ ಹಾಗೂ ಹೈನೆಕನ್‌ ಕಂಪನಿಯ ಭಾಗವಾಗಿರುವ ಬೆಂಗಳೂರು ಮೂಲದ 'ಯುನೈಟೆಡ್ ಬ್ರೂವರೀಸ್ ಲಿಮಿಟೆಡ್' (ಯುಬಿಎಲ್‌), ಕರ್ನಾಟಕದ ಆರ್ಥಿಕತೆ ಮತ್ತು ಉದ್ಯೋಗ ಸೃಷ್ಟಿಯಲ್ಲಿ ಮಹತ್ವದ ಪಾತ್ರ ವಹಿಸುತ್ತಿದೆ...

    Most Popular

    Recent Comments

    Home
    Play
    Notification
    Search