Sunday, September 20, 2026
spot_img
More
    spot_img
    HomeTop StoryIPL 2025: ಆರ್‌ಸಿಬಿಗೆ ಮುಖ್ಯವಾದ ಪಂದ್ಯದಲ್ಲಿ ಅಬ್ಬರಿಸಿದ ಸಿಎಸ್‌ಕೆ; ಗುಜರಾತ್‌ಗೆ ಕಠಿಣ ಗುರಿ!

    IPL 2025: ಆರ್‌ಸಿಬಿಗೆ ಮುಖ್ಯವಾದ ಪಂದ್ಯದಲ್ಲಿ ಅಬ್ಬರಿಸಿದ ಸಿಎಸ್‌ಕೆ; ಗುಜರಾತ್‌ಗೆ ಕಠಿಣ ಗುರಿ!

    ಅಹ್ಮದಾಬಾದ್:‌ ನರೇಂದ್ರ ಮೋದಿ ಕ್ರಿಕೆಟ್‌ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಐಪಿಎಲ್‌ನ 67ನೇ ಪಂದ್ಯದಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್‌ ಹಾಗೂ ಗುಜರಾತ್‌ ಟೈಟನ್ಸ್‌ ತಂಡಗಳು ಮುಖಾಮುಖಿಯಾಗಿವೆ.

    Advertisement

    ಪಂದ್ಯದಲ್ಲಿ ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ಮಾಡಿದ ಚೆನ್ನೈ ಸೂಪರ್‌ ಕಿಂಗ್ಸ್‌ ಡಿವಾನ್‌ ಕಾನ್ವೆ ಹಾಗೂ ಡಿವಾಲ್ಡ್‌ ಬ್ರೆವಿಸ್‌ ಅಬ್ಬರದ ಅರ್ಧಶತಕಗಳ ನೆರವಿನಿಂದ 20 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 230 ರನ್‌ ಕಲೆಹಾಕಿ ಗುಜರಾತ್‌ ಟೈಟನ್ಸ್‌ ತಂಡಕ್ಕೆ 231 ರನ್‌ಗಳ ಗುರಿಯನ್ನು ನೀಡಿದೆ.

    ಚೆನ್ನೈ ಸೂಪರ್‌ ಕಿಂಗ್ಸ್‌ ಪರ ಆರಂಭಿಕರಾಗಿ ಕಣಕ್ಕಿಳಿದ ಆಯಷ್‌ ಮ್ಹಾತ್ರೆ ಹಾಗೂ ಡಿವಾನ್‌ ಕಾನ್ವೆ ಅಬ್ಬರಿಸಿ ಉತ್ತಮ ಆರಂಭ ನೀಡಿದರು. ಮ್ಹಾತ್ರೆ 34 (17) ರನ್‌ ಗಳಿಸಿದರೆ, ಡಿವಾನ್‌ ಕಾನ್ವೆ 52 (35), ಉರ್ವಿಲ್‌ ಪಟೇಲ್‌ 37 (19), ಶಿವಮ್‌ ದುಬೆ 17 (8), ರವೀಂದ್ರ ಜಡೇಜಾ ಅಜೇಯ 21 (18) ರನ್‌ ಹಾಗೂ ಅಂತಿಮ ಹಂತದಲ್ಲಿ ಅಬ್ಬರಿಸಿದ ಡಿವಾಲ್ಡ್‌ ಬ್ರೆವಿಸ್‌ 23 ಎಸೆತಗಳಲ್ಲಿ 4 ಬೌಂಡರಿ ಹಾಗೂ 5 ಸಿಕ್ಸರ್ ಸಹಿತ 57 ರನ್‌ ಚಚ್ಚಿದರು.

    ಗುಜರಾತ್‌ ಟೈಟನ್ಸ್‌ ಪರ ಎಲ್ಲ ಬೌಲರ್‌ಗಳೂ ಸಹ ದುಬಾರಿಯಾದರು. ಆದರೆ ಪ್ರಸಿದ್ಧ್‌ ಕೃಷ್ಣ 6ಕ್ಕಿಂತ ಕಡಿಮೆ ಎಕಾನಮಿಯಲ್ಲಿ ಎರಡು ವಿಕೆಟ್‌ ಪಡೆದರೆ, ಸಾಯಿ ಕಿಶೋರ್‌, ರಶೀದ್‌ ಖಾನ್‌ ಹಾಗೂ ಶಾರುಖ್‌ ಖಾನ್‌ ತಲಾ ಒಂದೊಂದು ವಿಕೆಟ್‌ ಪಡೆದರು.

    ಈ ಪಂದ್ಯದ ಫಲಿತಾಂಶ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಹಾಗೂ ಪಂಜಾಬ್‌ ಕಿಂಗ್ಸ್‌ ತಂಡಗಳ ಮೇಲೆ ಹೆಚ್ಚು ಪರಿಣಾಮ ಬೀರಲಿದೆ. ಹೌದು, ಇಂದಿನ ಪಂದ್ಯದಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್‌ ಗೆಲುವು ಸಾಧಿಸಿದರೆ ಗುಜರಾತ್‌ ಟೈಟನ್ಸ್‌ ಲೀಗ್‌ ಹಂತವನ್ನು 18 ಅಂಕಗಳೊಂದಿಗೆ ಮುಗಿಸಲಿದ್ದು, 17 ಅಂಕಗಳನ್ನು ಹೊಂದಿರುವ ಆರ್‌ಸಿಬಿ ಹಾಗೂ ಪಂಜಾಬ್‌ ಮುಂದಿನ ಪಂದ್ಯಗಳಲ್ಲಿ ಗೆದ್ದು 19 ಅಂಕಗಳನ್ನು ಪಡೆದುಕೊಂಡು ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಬಹುದಾಗಿದೆ.

    ಹೀಗಾಗಿ ಇಂದಿನ ಪಂದ್ಯದಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್‌ ಗೆದ್ದರೆ ಈ ಎರಡು ತಂಡಗಳಿಗೆ ಲಾಭವಾಗಲಿದೆ.


    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe to get the latest posts sent to your email.

    Leave a Reply

    Related News

    ಎಸ್‌ಐಆರ್ ಅಕ್ರಮ: ಎನ್‌ಡಿಎ ನಿಯೋಗ ಮುಖ್ಯ ಚುನಾವಣಾ ಆಯುಕ್ತರಿಗೆ ದೂರು

    ಕರ್ನಾಟಕದಲ್ಲಿ ಎಸ್‌ಐಆರ್ ಪ್ರಕ್ರಿಯೆ ದುರುಪಯೋಗದ ಆರೋಪದೊಂದಿಗೆ ಕುಮಾರಸ್ವಾಮಿ ಮತ್ತು ಪ್ರಲ್ಹಾದ ಜೋಶಿ ನೇತೃತ್ವದ ಎನ್‌ಡಿಎ ನಿಯೋಗ ನವದೆಹಲಿಯಲ್ಲಿ ಮುಖ್ಯ ಚುನಾವಣಾ ಆಯುಕ್ತರಿಗೆ ದಾಖಲೆ ಸಮೇತ ದೂರು ಸಲ್ಲಿಸಿತು.

    ಮಾದಪಟ್ಟಣ ಕ್ವಾರಿ ದುರಂತ: ಅಶೋಕ ತಲಾ ₹50 ಲಕ್ಷ ಪರಿಹಾರ ಆಗ್ರಹ

    ಬೆಂಗಳೂರು ಮಾದಪಟ್ಟಣ ಕ್ವಾರಿಯಲ್ಲಿ ಬಂಡೆ ಬಿದ್ದು 7 ಕಾರ್ಮಿಕರು ಮೃತಪಟ್ಟ ಘಟನೆಗೆ ಪ್ರತಿಪಕ್ಷ ನಾಯಕ ಆರ್.ಅಶೋಕ ರಾಜ್ಯ ಸರ್ಕಾರದ ನಿರ್ಲಕ್ಷ್ಯವೇ ಕಾರಣ ಎಂದು ದೂರಿ ತಲಾ ₹50 ಲಕ್ಷ ಪರಿಹಾರ ಒತ್ತಾಯಿಸಿದ್ದಾರೆ.

    Most Popular

    Recent Comments

    Home
    Play
    Notification
    Search

    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe now to keep reading and get access to the full archive.

    Continue reading