Saturday, September 19, 2026
spot_img
More
    spot_img
    HomeTop Storyನನ್ನ ಕಂಪನಿಯನ್ನು ಬೆಂಗಳೂರಿನಿಂದ ಪುಣೆಗೆ ಶಿಫ್ಟ್‌ ಮಾಡುತ್ತೇನೆ ಎಂದಿದ್ದ ಮಾಲೀಕನ ಕಂಪನಿ ಕಂಡು ನಕ್ಕ ಕನ್ನಡಿಗರು!

    ನನ್ನ ಕಂಪನಿಯನ್ನು ಬೆಂಗಳೂರಿನಿಂದ ಪುಣೆಗೆ ಶಿಫ್ಟ್‌ ಮಾಡುತ್ತೇನೆ ಎಂದಿದ್ದ ಮಾಲೀಕನ ಕಂಪನಿ ಕಂಡು ನಕ್ಕ ಕನ್ನಡಿಗರು!

    ಬೆಂಗಳೂರು: ಇತ್ತೀಚೆಗಷ್ಟೆ ಚಂದಾಪುರದಲ್ಲಿ ಎಸ್‌ಬಿಐ ಮ್ಯಾನೇಜರ್‌ ಕನ್ನಡ ಮಾತನಾಡಲ್ಲ ಎಂದು ಗ್ರಾಹಕನ ಮೇಲೆ ಕಿರುಚಾಡಿದ್ದ ಘಟನೆ ವಿವಾದ ಹುಟ್ಟುಹಾಕಿದ ಬೆನ್ನಲ್ಲೇ ಮ್ಯಾನೇಜರ್‌ ಕ್ಷಮೆ ಯಾಚಿಸಿದ್ದರು. ಅಲ್ಲದೇ ಎಸ್‌ಬಿಐ ಆಕೆಯನ್ನು ರಾಜ್ಯದಿಂದ ಬೇರೆಡೆಗೆ ಎತ್ತಂಗಡಿ ಮಾಡಿತ್ತು.

    Advertisement

    ಎಸ್‌ಬಿಐ ಮ್ಯಾನೇಜರ್‌ ಹಿಂದಿ ಹೇರಿಕೆ ವಿರುದ್ಧ ಕನ್ನಡಿಗರು ದೊಡ್ಡ ಮಟ್ಟದಲ್ಲಿ ಕಿಡಿಕಾರಿ ರಾಜಕೀಯ ನಾಯಕರೂ ಸಹ ದೊಡ್ಡ ಸಂಖ್ಯೆಯಲ್ಲಿಯೇ ಹಿಂದಿ ಹೇರಿಕೆಯನ್ನು ಖಂಡಿಸಿದ್ದರು.

    ಅದರಲ್ಲಿಯೂ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಘಟನೆಯನ್ನು ಖಂಡಿಸಿ ಟ್ವೀಟ್‌ ಹಂಚಿಕೊಂಡು ಕ ಪರ ಮಾತನಾಡಿದ್ದರು. ಈ ಟ್ವೀಟ್‌ಗೆ ಐಟಿ ಕಂಪನಿಯೊಂದರ ಸಂಸ್ಥಾಪಕ ಪ್ರತಿಕ್ರಿಯಿಸಿ ಕನ್ನಡಕ್ಕಾಗಿ ಪದೇಪದೇ ಇಂತಹ ನಾನ್‌ಸೆನ್ಸ್‌ ಘಟನೆಗಳು ನಡೆಯುತ್ತಿದ್ದರೆ ತನ್ನ ಕಂಪನಿಯನ್ನು ಪುಣೆಗೆ ಸ್ಥಳಾಂತರಿಸುವುದಾಗಿ ತಿಳಿಸಿದ್ದರು.

    ವ್ಯವಸ್ಥಾಪಕ ಕೌಶಿಕ್ ಮುಖರ್ಜಿ ಅವರು ಕರ್ನಾಟಕದಲ್ಲಿನ ಭಾಷಾ ವಿವಾದಗಳಿಂದಾಗಿ ತಮ್ಮ ಬೆಂಗಳೂರು ಕಚೇರಿಯನ್ನು ಮುಂದಿನ ಆರು ತಿಂಗಳ ಒಳಗೆ ಪುಣೆಗೆ ಸ್ಥಳಾಂತರಿಸಲು ನಿರ್ಧರಿಸಿರುವುದಾಗಿ ತಿಳಿಸಿದ್ದರು. ಕನ್ನಡವ ಬರದ ತಮ್ಮ ಸಿಬ್ಬಂದಿಗಳು ಮುಂದೆ ಬಲಿಯಾಗುವುದನ್ನು ತಪ್ಪಿಸಲು ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ಎಕ್ಸ್‌ ಖಾತೆಯಲ್ಲಿ ಬರೆದುಕೊಂಡಿದ್ದರು.

    ಹೀಗೆ ಸಾಮಾಜಿಕ ಜಾಲತಾಣದಲ್ಲಿ ತನ್ನ ಬಗ್ಗೆ ತಾನು ಮೋದಿ ಭಕ್ತ ಎಂದು ಬರೆದುಕೊಂಡಿರುವ‍ ಕೌಶಿಕ್‌ ಮುಖರ್ಜಿ ಈಕ್ವಲೈಫ್.ಇನ್‌ ಎಂಬ ಸಂಸ್ಥೆಯ ಸಂಸ್ಥಾಪಕ ಪರಿಚಯಿಸಿಕೊಂಡಿದ್ದಾರೆ. ಹೀಗೆ ಬೆದರಿಕೆ ಒಡ್ಡಿದ ಈ ವ್ಯವಸ್ಥಾಪಕ ಕಂಪನಿ ಎಷ್ಟು ದೊಡ್ಡ ಕಂಪನಿ ಎಂದು ಕನ್ನಡಿಗರು ಹುಡುಕಾಡಲು ಮುಂದಾದಾಗ ಆತನದ್ದು, ಸಣ್ಣ ಪ್ರಮಾಣದ ಟಿ ಶರ್ಟ್‌, ಟೋಪಿ, ಮೊಬೈಲ್‌ ಬ್ಯಾಗ್‌ಗಳನ್ನು ಮಾರಾಟ ಮಾಡುವ ಕಂಪನಿ ಎಂದು ತಿಳಿದುಬಂದಿದೆ.

    ಈ ಮಾಹಿತಿಯನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಕನ್ನಡಿಗರು ಇಷ್ಟು ಸಣ್ಣ ಶಾಪ್‌ ಇಟ್ಟುಕೊಂಡು ದೊಡ್ಡ ವಹಿವಾಟು ನಡೆಯುವ ಸಂಸ್ಥೆಯ ಮಟ್ಟಕ್ಕೆ ಬಿಲ್ಡಪ್‌ ತೆಗೆದುಕೊಳ್ಳುವ ಅಗತ್ಯವಿದೆಯಾ ಎಂದು ಕಾಲೆಳೆದಿದ್ದಾರೆ.


    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe to get the latest posts sent to your email.

    Leave a Reply

    Related News

    ಎಸ್‌ಐಆರ್ ಅಕ್ರಮ: ಎನ್‌ಡಿಎ ನಿಯೋಗ ಮುಖ್ಯ ಚುನಾವಣಾ ಆಯುಕ್ತರಿಗೆ ದೂರು

    ಕರ್ನಾಟಕದಲ್ಲಿ ಎಸ್‌ಐಆರ್ ಪ್ರಕ್ರಿಯೆ ದುರುಪಯೋಗದ ಆರೋಪದೊಂದಿಗೆ ಕುಮಾರಸ್ವಾಮಿ ಮತ್ತು ಪ್ರಲ್ಹಾದ ಜೋಶಿ ನೇತೃತ್ವದ ಎನ್‌ಡಿಎ ನಿಯೋಗ ನವದೆಹಲಿಯಲ್ಲಿ ಮುಖ್ಯ ಚುನಾವಣಾ ಆಯುಕ್ತರಿಗೆ ದಾಖಲೆ ಸಮೇತ ದೂರು ಸಲ್ಲಿಸಿತು.

    ಮಾದಪಟ್ಟಣ ಕ್ವಾರಿ ದುರಂತ: ಅಶೋಕ ತಲಾ ₹50 ಲಕ್ಷ ಪರಿಹಾರ ಆಗ್ರಹ

    ಬೆಂಗಳೂರು ಮಾದಪಟ್ಟಣ ಕ್ವಾರಿಯಲ್ಲಿ ಬಂಡೆ ಬಿದ್ದು 7 ಕಾರ್ಮಿಕರು ಮೃತಪಟ್ಟ ಘಟನೆಗೆ ಪ್ರತಿಪಕ್ಷ ನಾಯಕ ಆರ್.ಅಶೋಕ ರಾಜ್ಯ ಸರ್ಕಾರದ ನಿರ್ಲಕ್ಷ್ಯವೇ ಕಾರಣ ಎಂದು ದೂರಿ ತಲಾ ₹50 ಲಕ್ಷ ಪರಿಹಾರ ಒತ್ತಾಯಿಸಿದ್ದಾರೆ.

    Most Popular

    Recent Comments

    Home
    Play
    Notification
    Search

    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe now to keep reading and get access to the full archive.

    Continue reading