ಮಧ್ಯಪ್ರದೇಶದಲ್ಲಿ ನಡೆದ ಒಂದು ಭಯಾನಕ ಘಟನೆಯಲ್ಲಿ ತಾಯಿ ತನ್ನ ಮಗನನ್ನು ಕೊಲೆ ಮಾಡಿದ್ದು,, ಆರೋಪಿ ತಾಯಿ ಆಲ್ಕಾ ಜೈನ್ ಇಂದು ( ಜೂನ್ 25 ) ಕೇವಲ 100 ದಿನಗಳಲ್ಲಿ ಜಾಮೀನಿನಲ್ಲಿ ಬಿಡುಗಡೆಯಾಗಿದ್ದು, ಇದು ಜನರಲ್ಲಿ ಆಕ್ರೋಶ ಮತ್ತು ಚರ್ಚೆಗೆ ಕಾರಣವಾಗಿದೆ.
ಎಕ್ಸ್ ವೇದಿಕೆಯಲ್ಲಿ ಈ ಬಗ್ಗೆ ಭಾರೀ ಚರ್ಚೆಯಾಗುತ್ತಿದ್ದು, ಬಳಕೆದಾರರೊಬ್ಬರು ಆಲ್ಕಾ ಜೈನ್‌ನ ಚಿತ್ರವನ್ನು ಹಂಚಿಕೊಂಡಿದ್ದು, ಅವರ ಮುಖದಲ್ಲಿ ಯಾವುದೇ ಪಶ್ಚಾತ್ತಾಪ ಇಲ್ಲದೆ ನಗುವಿಕೆ ಕಂಡುಬಂದಿದೆ ಎಂದು ಆರೋಪಿಸಿ ಬರೆದುಕೊಂಡಿದ್ದಾರೆ.
ಈ ಪ್ರಕರಣದಲ್ಲಿ ಆಲ್ಕಾ ಜೈನ್ ಅವರ 15 ವರ್ಷದ ಮಗನಾದ ಅಭ್ಯುದಯ ಜೈನ್ ಅವರನ್ನು ತಾಯಿ ತಾನೇ ಕೊಲೆ ಮಾಡಿದ್ದು, ಮಗನ ತನ್ನ ಬಟ್ಟೆ ಮತ್ತು ಬಿಂದಿ ಬಗ್ಗೆ ಪ್ರಶ್ನೆ ಕೇಳಿದ್ದಕ್ಕೆ ಹತ್ಯೆ ನಡೆದಿದೆ.
ಅಲ್ಲದೇ ಆಕೆ ಇದನ್ನು ಆತ್ಮಹತ್ಯೆ ಎಂದು ಬಿಂಬಿಸಿದ್ದಳು. ಆದರೆ ಪೋಸ್ಟ್‌ಮಾರ್ಟಂ ವರದಿಯಲ್ಲಿ ಕೊಲೆ ಮಾಡಿದ್ದು ದೃಢಪಟ್ಟಿತ್ತು. ಈ ಪ್ರಕರಣದಲ್ಲಿ ಆರೋಪಿ ತಾಯಿ ಈ ಪ್ರಕರಣದಲ್ಲಿ ತನ್ನ ತಪ್ಪೇ ಇಲ್ಲ ಎಂದು ವಾದಿಸಿದ್ದಳು.
ಈ ಬಿಡುಗಡೆಯ ಬೆನ್ನಲ್ಲೇ ಭಾರತೀಯ ನ್ಯಾಯಾಂಗ ವ್ಯವಸ್ಥೆಯ ಕುರಿತು ಗಂಭೀರ ಪ್ರಶ್ನೆಗಳು ಎದುರಾಗಿವೆ. ಕೇವಲ 100 ದಿನಗಳ ಬಳಿಕ ಜಾಮೀನು ಪಡೆದಿರುವುದು ಹಾಗೂ ಆರೋಪಿ ತಾಯಿಯ ಮುಖದಲ್ಲಿ ಪಶ್ಚಾತ್ತಾಪ ಇಲ್ಲದೆ ನಗು ಕಂಡುಬರುವುದು ಜನರಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ. ಇದೇ ದೋಷದಲ್ಲಿ ಪುರುಷರಿಗೆ ಜೀವಾವಧಿ ಶಿಕ್ಷೆಯಾಗುತ್ತದೆ ಎಂಬ ಆರೋಪಗಳು ಕೇಳಿಬರುತ್ತಿವೆ.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


