Saturday, September 5, 2026
spot_img
More
    spot_img
    HomeEntertainmentಮಂಗಳೂರು ಹಮೀದ್‌ ಕೊಲೆ ಆರೋಪಿ ಜತೆ ಥೈಲ್ಯಾಂಡ್‌ನಲ್ಲಿ ದರ್ಶನ್‌ ಪಾರ್ಟಿ

    ಮಂಗಳೂರು ಹಮೀದ್‌ ಕೊಲೆ ಆರೋಪಿ ಜತೆ ಥೈಲ್ಯಾಂಡ್‌ನಲ್ಲಿ ದರ್ಶನ್‌ ಪಾರ್ಟಿ

    ನಟ ದರ್ಶನ್‌ ಡೆವಿಲ್‌ ಚಿತ್ರದ ವಿದೇಶಿ ಚಿತ್ರೀಕರಣಕ್ಕೆಂದು ನ್ಯಾಯಾಲಯದಿಂದ ವಿದೇಶಿ ಪ್ರವಾಸದ ಅನುಮತಿ ಪಡೆದು ಥೈಲ್ಯಾಂಡ್‌ಗೆ ಹಾರಿದ್ದು, ಶೂಟಿಂಗ್‌ ಮುಗಿಸಿದ ಬಳಿಕ ಥೈಲ್ಯಾಂಡ್‌ ಪ್ರವಾಸದಲ್ಲಿ ನಿರತರಾಗಿದ್ದಾರೆ.

    ಥೈಲ್ಯಾಂಡ್‌ ಬೀದಿ ಬೀದಿಗಳಲ್ಲಿ ಕುಟುಂಬದವರ ಜೊತೆ ಸುತ್ತಾಡಿ ಎಂಜಾಯ್‌ ಮಾಡಿದ ದರ್ಶನ್‌ ಫೋಟೊಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದ್ದವು. ಇವುಗಳನ್ನು ಕಂಡ ದರ್ಶನ್‌ ಅಭಿಮಾನಿಗಳು ಎಷ್ಟೋ ದಿನಗಳ ಬಳಿಕ ನಮ್ಮ ಬಾಸ್‌ ಇಷ್ಟು ಸಂತಸದಿಂದ ಕಾಣಿಸಿಕೊಂಡಿದ್ದಾರೆ ಎಂದು ಸಂತಸಪಟ್ಟರು.

    Advertisement

    ಆದರೆ ಈ ಫೋಟೊಗಳು ವೈರಲ್‌ ಆಗುತ್ತಿದ್ದಂತೆ ದರ್ಶನ್‌ ಕೊಲೆ ಆರೋಪಿ ಜತೆ ಪಾರ್ಟಿ ಮಾಡಿದ್ದಾರೆ ಎಂಬ ಅಂಶ ಬೆಳಕಿಗೆ ಬಂದಿದೆ. ಹೌದು, 2014ರಲ್ಲಿ ಮಂಗಳೂರಿನಲ್ಲಿ 40 ವರ್ಷದ ಅಬ್ದುಲ್‌ ಹಮೀದ್‌ ಕೊಲೆಗೆ ಸುಪಾರಿ ನೀಡಿದ್ದ ಬಿಪಿನ್‌ ರೈ ಜತೆ ದರ್ಶನ್‌ ಪಾರ್ಟಿ ಮಾಡಿದ್ದಾರೆ.

    ಸದ್ಯ ಇದರ ಫೋಟೊ ಹಾಗೂ ವಿಡಿಯೊಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿವೆ. ಬಿಪಿನ್‌ ರೈ ಹಣಕಾಸು ವಿಚಾರಕ್ಕೆ ಅಬ್ದುಲ್‌ ಹಮೀದ್ ಕೊಲೆಗೆ ಸುಪಾರಿ ನೀಡಿದ್ದ. ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ದೇಶ ಬಿಟ್ಟ ವಿದೇಶಕ್ಕೆ ಹಾರಿದ್ದ. ಸದ್ಯ ಥೈಲ್ಯಾಂಡ್‌ನಲ್ಲಿ ಬಿಪಿನ್‌ ರೈ ಉದ್ಯಮಿಯಾಗಿದ್ದಾರೆ.

    ಜುಲೈ 26ರಂದು ಶನಿವಾರ ಬೆಂಗಳೂರಿನ ಈ ಪ್ರದೇಶಗಳಲ್ಲಿ ಪವರ್‌ ಕಟ್‌

    ಎಐ ಕನ್ನಡ ಕೃಷಿ ವೆಬ್‌ಸೈಟ್‌ಗಾಗಿ ಇಲ್ಲಿ ಕ್ಲಿಕ್‌ ಮಾಡಿ


    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe to get the latest posts sent to your email.

    Leave a Reply

    Related News

    ಎಸ್‌ಐಆರ್ ಅಕ್ರಮ: ಎನ್‌ಡಿಎ ನಿಯೋಗ ಮುಖ್ಯ ಚುನಾವಣಾ ಆಯುಕ್ತರಿಗೆ ದೂರು

    ಕರ್ನಾಟಕದಲ್ಲಿ ಎಸ್‌ಐಆರ್ ಪ್ರಕ್ರಿಯೆ ದುರುಪಯೋಗದ ಆರೋಪದೊಂದಿಗೆ ಕುಮಾರಸ್ವಾಮಿ ಮತ್ತು ಪ್ರಲ್ಹಾದ ಜೋಶಿ ನೇತೃತ್ವದ ಎನ್‌ಡಿಎ ನಿಯೋಗ ನವದೆಹಲಿಯಲ್ಲಿ ಮುಖ್ಯ ಚುನಾವಣಾ ಆಯುಕ್ತರಿಗೆ ದಾಖಲೆ ಸಮೇತ ದೂರು ಸಲ್ಲಿಸಿತು.

    ಮಾದಪಟ್ಟಣ ಕ್ವಾರಿ ದುರಂತ: ಅಶೋಕ ತಲಾ ₹50 ಲಕ್ಷ ಪರಿಹಾರ ಆಗ್ರಹ

    ಬೆಂಗಳೂರು ಮಾದಪಟ್ಟಣ ಕ್ವಾರಿಯಲ್ಲಿ ಬಂಡೆ ಬಿದ್ದು 7 ಕಾರ್ಮಿಕರು ಮೃತಪಟ್ಟ ಘಟನೆಗೆ ಪ್ರತಿಪಕ್ಷ ನಾಯಕ ಆರ್.ಅಶೋಕ ರಾಜ್ಯ ಸರ್ಕಾರದ ನಿರ್ಲಕ್ಷ್ಯವೇ ಕಾರಣ ಎಂದು ದೂರಿ ತಲಾ ₹50 ಲಕ್ಷ ಪರಿಹಾರ ಒತ್ತಾಯಿಸಿದ್ದಾರೆ.

    Most Popular

    Recent Comments

    Home
    Play
    Notification
    Search

    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe now to keep reading and get access to the full archive.

    Continue reading