ಹೊಸದಿಲ್ಲಿ: ಇಲ್ಲಿನ ಕರ್ನಾಟಕ ಭವನದಲ್ಲಿ ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿಗಳ ವಿಶೇಷ ಕರ್ತವ್ಯಾಧಿಕಾರಿಗಳ ನಡುವೆ ಕಿತ್ತಾಟ ನಡೆದಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯನವರ ಕರ್ತವ್ಯಾಧಿಕಾರಿ ಮೋಹನ್ ಕುಮಾರ್ ಸಿ ವಿರುದ್ಧ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹೆಚ್. ಆಂಜನೇಯ ನಡುವೆ ಕಿತ್ತಾಟ ನಡೆದಿದೆ.
ಈ ಸಂಬಂಧ ಹೆಚ್. ಆಂಜನೇಯ ಮುಖ್ಯಮಂತ್ರಿಗಳ ಕರ್ತವ್ಯಾಧಿಕಾರಿ ಮೋಹನ್ ಕುಮಾರ್ ಸಿ ತನಗೆ ಬೆದರಿಕೆಯನ್ನು ಹಾಕಿದರು ಎಂದು ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರಿಗೆ ದೂರನ್ನು ಸಹ ಸಲ್ಲಿಸಿದ್ದಾರೆ.
ಮೂರ್ನಾಲ್ಕು ದಿನಗಳ ಹಿಂದೆ ಕರ್ನಾಟಕ ಭವನದೊಳಗೆ ಇಬ್ಬರ ನಡುವೆ ಮಾತಿನ ಚಕಮಕಿ ನಡೆದು ಈ ಸಂದರ್ಭದಲ್ಲಿ ಅಧಿಕಾರದ ದರ್ಪದಲ್ಲಿ ತನ್ನ ಮೇಲೆ ದಬ್ಬಾಳಿಕೆ ನಡೆಸಿ ಬೆದರಿಕೆ ಹಾಕಿದ್ದಾರೆ ಎಂದು ಹೇಳಿಕೊಂಡಿದ್ದಾರೆ.
ರಾಜಸ್ಥಾನ: ಶಾಲಾ ಕಟ್ಟಡ ಕುಸಿದು ನಾಲ್ವರು ಮಕ್ಕಳು ಸಾವು; ಅವಶೇಷಗಳಡಿ ಸಿಲುಕಿದ 60 ಮಕ್ಕಳು
ಎಐ ಕನ್ನಡ ಕೃಷಿ ವೆಬ್‌ಸೈಟ್‌ಗಾಗಿ ಇಲ್ಲಿ ಕ್ಲಿಕ್ ಮಾಡಿ
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


