ಬೆಂಗಳೂರು: ನಿನ್ನೆ ( ಜುಲೈ 24 ) ಭೀಮನ ಅಮಾವಾಸ್ಯೆ ಸಂಭ್ರಮಾಚರಣೆಯಲ್ಲಿದ್ದ ಸ್ಪಂದನಾ ತನ್ನ ಗಂಡನ ಜೊತೆ ಆಚರಣೆ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಫೋಟೊ ಹಂಚಿಕೊಂಡು ಖುಷಿಯಿಂದಲೇ ಇದ್ದಳು. ಆದರೆ ತಡರಾತ್ರಿ ಇದ್ದಕ್ಕಿದ್ದಂತೆ ತನ್ನ ತಂಗಿಗೆ ತನ್ನ ಸಾವಿಗೆ ಪತಿ ಅಭಿ, ಆತನ ಕುಟುಂಬ ಹಾಗೂ ಆತನ ಆಫೀಸ್‌ನವರು ಕಾರಣ ಎಂದು ಸಂದೇಶ ಕಳುಹಿಸಿ ಆತ್ಮಹತ್ಯೆಗೆ ಶರಣಾಗಿದ್ದಾಳೆ ಎನ್ನಲಾಗಿದೆ.
ಕನಕಪುರ ನಿವಾಸಿಯಾದ ಸ್ಪಂದನಾ ಬೆಂಗಳೂರಿನಲ್ಲಿ ಪಿಜಿ ವ್ಯಾಸಂಗ ಮಾಡುವಾಗ ಅಭಿ ಎಂಬಾತನ ಪರಿಚಯವಾಗಿದೆ. ಬಳಿಕ ಇಬ್ಬರೂ ಪರಸ್ಪರ ಪ್ರೀತಿಸಿ ಪೋಷಕರ ವಿರೋಧದ ನಡುವೆ ರಿಜಿಸ್ಟರ್ ಮದುವೆಯನ್ನೂ ಸಹ ಆಗಿದ್ದಾರೆ. ಹೀಗೆ ಮದುವೆಯಾಗಿ ಒಂದು ವರ್ಷ ತುಂಬಿದ್ದ ಈ ಜೋಡಿ ನಿನ್ನೆ ಭೀಮನ ಅಮಾವಾಸ್ಯೆ ಆಚರಿಸಿದ ಕೂಡಲೇ ಪತಿ ಅಭಿಗೆ ತನ್ನ ಕಚೇರಿಯ ಮಹಿಳೆಯ ಕರೆ ಬಂದಿದೆ.
ಈ ಕರೆ ಬಂದ ಕೂಡಲೇ ಸ್ಪಂದನಾ ಅಭಿ ನಡುವೆ ಗಲಾಟೆ ನಡೆದಿದೆ. ಅನುಮಾನಗೊಂಡ ಸ್ಪಂದನಾ ಆಕೆ ಯಾರೆಂದು ಕೇಳಿದ್ದು ಇಬ್ಬರ ನಡುವೆ ಜಗಳ ನಡೆದು ಆತ್ಮಹತ್ಯೆ ಮಾಡಿಕೊಂಡಳು ಎನ್ನಲಾಗಿದೆ. ಇನ್ನು 12 ಗಂಟೆ ಸಮಯಕ್ಕೆ ಸಾವಿನ ಬಗ್ಗೆ ಸಂದೇಶ ಕಳುಹಿಸಿರುವ ಸ್ಪಂದನಾ ತಡರಾತ್ರಿ ಎರಡೂವರೆಗೆ ಆತ್ಮಹತ್ಯೆಗೆ ಶರಣಾಗಿದ್ದು, ಆಕೆಯನ್ನು ತಾನೇ ಕೆಳಗಿಳಿಸಿ ಆಕೆಯ ಮನೆಯವರಿಗೆ ಕರೆ ಮಾಡಿದೆ ಎಂದು ಅಭಿ ಹೇಳಿದ್ದಾನೆ.
ಅತ್ತ ಸ್ಪಂದನಾ ಮನೆಯವರು ಇದು ಕೊಲೆ ಎಂದು ಆರೋಪಿಸುತ್ತಿದ್ದು, ಮಗಳ ಮೈ ಮೇಲೆ ಗಾಯದ ಕಲೆಗಳಿವೆ, ಅಲ್ಲದೇ ಅಭಿ ಹಾಗೂ ಕುಟುಂಬದವರು ತಮ್ಮ ಮಗಳಿಗೆ ವರದಕ್ಷಿಣೆ ಕಿರುಕುಳ ನೀಡುತ್ತಿದ್ದರು, ಅಭಿ ತಾನೇ ಹೆಣ ಕೆಳಗಿಳಿಸಿದೆ ಎಂದು ಹೇಳುತ್ತಿರುವುದು ಅನುಮಾಸ್ಪದವಾಗಿದೆ ಎಂದು ಆರೋಪಿಸಿ ಎಫ್‌ಐಆರ್ ಸಹ ದಾಖಲಿಸಿದ್ದಾರೆ. ಸದ್ಯ ಸ್ಪಂದನಾ ಮೃತದೇಹವನ್ನು ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿದ್ದು, ವರದಿ ಬಂದಮೇಲೆ ಸಾವಿನ ಕುರಿತು ತಿಳಿಯಲಿದೆ.
Disclaimer: ಯಾವುದೇ ಸಮಸ್ಯೆಗೂ ಸಾವೊಂದೇ ಪರಿಹಾರವಲ್ಲ. ಆತ್ಮಹತ್ಯೆಯ ಯೋಚನೆ ಬಂದರೆ ನಿಮ್ಮ ನೆಚ್ಚಿನ ವ್ಯಕ್ತಿ ಜೊತೆ ಮಾತನಾಡಿ ಪರಿಹಾರ ಕಂಡುಕೊಳ್ಳಿ. ಇಲ್ಲವೇ ಈ ಸಹಾಯವಾಣಿಗೆ ಕರೆಮಾಡಿ: 9152987821
ಚಿನ್ನಸ್ವಾಮಿ ಕಾಲ್ತುಳಿತ: ಆರ್‌ಸಿಬಿ, ಕೆಎಸ್‌ಸಿಎ, ಡಿಎನ್‌ಎ ಫೋಟೊ ಪ್ರಸಾರ ಮಾಡದಂತೆ ಅರ್ಜಿ!
ಎಐ ಕನ್ನಡ ಕೃಷಿ ವೆಬ್‌ಸೈಟ್‌ಗಾಗಿ ಇಲ್ಲಿ ಕ್ಲಿಕ್ ಮಾಡಿ
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


