Wednesday, September 2, 2026
spot_img
More
    spot_img
    HomeLatest newsಸಾರಿಗೆ ನೌಕರರಿಗೆ ಯಡಿಯೂರಪ್ಪ ಎಸ್ಮಾ ಜಾರಿ ಮಾಡಿದ್ದಕ್ಕೆ ಕಿಡಿಕಾರಿದ್ದ ಸಿದ್ದು ಮಾಡಿದ್ದು ಅದೇ ಕೆಲಸ!

    ಸಾರಿಗೆ ನೌಕರರಿಗೆ ಯಡಿಯೂರಪ್ಪ ಎಸ್ಮಾ ಜಾರಿ ಮಾಡಿದ್ದಕ್ಕೆ ಕಿಡಿಕಾರಿದ್ದ ಸಿದ್ದು ಮಾಡಿದ್ದು ಅದೇ ಕೆಲಸ!

    ರಾಜ್ಯ ಸಾರಿಗೆ ನಿಗಮದ ನೌಕರರು ಬಾಕಿ ಇರುವ ವೇತನ, ಭತ್ಯೆ ಹಾಗೂ ಇತರೆ ಬೇಡಿಕೆಗಳನ್ನು ಈಡೇರಿಸುವಂತೆ ಸರ್ಕಾರಕ್ಕೆ ಆಗ್ರಹಿಸಿದ್ದು, ಆಗಸ್ಟ್‌ 5ರಿಂದ ಮುಷ್ಕರ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದೆ.

    Advertisement

    ಸಾರಿಗೆ ನೌಕರರ ಈ ನಿರ್ಧಾರಕ್ಕೆ ಸರ್ಕಾರ ಎಸ್ಮಾ ಜಾರಿ ಮಾಡುವ ಮೂಲಕ ಕೆಲಸಕ್ಕೆ ಹಾಜರಾಗುವಂತೆ ಹಿಡಿತ ಸಾಧಿಸಲು ಮುಂದಾಗಿತ್ತು. ಆದರೆ ಇದ್ಯಾವುದಕ್ಕೂ ಜಗ್ಗದ ಸಾರಿಗೆ ನೌಕರರು ತಮ್ಮ ಹೋರಾಟವನ್ನು ಮುಂದುವರಿಸಿದ್ದು, ಎಸ್ಮಾಗೂ ಬಗ್ಗದೇ ಮುನ್ನಡೆದಿದ್ದಾರೆ.

    ಹೀಗೆ ಸಿದ್ದರಾಮಯ್ಯ ಸರ್ಕಾರ ಎಸ್ಮಾ ಜಾರಿ ಮಾಡಿರುವುದರ ಕುರಿತು ಸಾಮಾಜಿಕ ಕಾರ್ಯಕರ್ತ ಎನ್‌. ಶ್ರೀನಿವಾಸ್‌ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಪತ್ರ ಬರೆದಿದ್ದು, ಈ ಹಿಂದೆ ವಿಧಾನಸಭಾ ಚುನಾವಣೆ ವೇಳೆ ಸಾರಿಗೆ ನೌಕರರ ಮೇಲೆ ಎಸ್ಮಾ ಜಾರಿ ಮಾಡಿದ್ದ ಯಡಿಯೂರಪ್ಪ ವಿರುದ್ಧ ಸ್ವತಃ ತಾವೇ ಕಿಡಿಕಾರಿದ್ದನ್ನು ನೆನಪಿಸಿದ್ದಾರೆ.

    ʼತಾವು ಈ ಹಿಂದೆ ನಡೆದ ವಿಧಾನ ಸಭಾ ಚುನಾವಣೆಯ ಸಂದರ್ಭದಲ್ಲಿ ಶ್ರೀ ಯಡಿಯೂರಪ್ಪ ರವರನ್ನು ಉದ್ದೇಶಿಸಿ ಏನಪ್ಪ ಯಡೆಯೂರಪ್ಪ ಸಾರಿಗೆ ನೌಕರರ ಮೇಲೆ ಎಸ್ಮಾ ಹಾಕುತ್ತೀಯಾ, ಸಸ್ಪೆಂಡ್ ಮಾಡುತ್ತೀಯಾ, ವರ್ಗಾವಣೆ ಮಾಡುತ್ತೀಯಾ, ಡಿಸ್‌ಮಿಸ್ ಮಾಡುತ್ತೀಯಾ ಎಂದು ಸಾರಿಗೆ ನೌಕರರ ಪರವಾಗಿ ಬ್ಯಾಂಟಿಗ್ ಮಾಡಿದ್ದೀರಿ. ಅದರ ಪರಿಣಾಮ ನಮ್ಮ ಕಾಂಗ್ರೆಸ್ ಪಕ್ಷ ದಾಖಲೆಯ ೧೩೬ ವಿಧಾನ ಸಭಾ ಕ್ಷೇತಗಳಲ್ಲಿ ಗೆಲುವು ಸಾಧಿಸಲು ಸಾಧ್ಯವಾಯಿತು. ತಾವು ಅಧಿಕಾರ ವಹಿಸಿಕೊಂಡ ಎರಡೂವರೆ ವರ್ಷಕ್ಕೆ ತಾವು
    ಆಡಿದ ಮಾತು ತಮಗೆ ಮರೆತು ಹೋಯಿತಾ? ಸಾರಿಗೆ ಸಂಸ್ಥೆಯ ನಾಲ್ಕು ನಿಗಮಗಳ ನೌಕರರು ಹಗಲಿರುಳು ಬೇಸಿಗೆ, ಮಳೆ, ಚಳಿಯೆನ್ನದೆ ದುಡಿದು ಸರ್ಕಾರಕ್ಕೆ ಸಂಸ್ಥೆಗೆ ಹಾಗೂ ರಾಜ್ಯಕ್ಕೆ ದೇಶಕ್ಕೆ ಕೀರ್ತಿ ತಂದ ನೌಕರರಿಗೆ ತಾವು ಕೊಡುತ್ತಿರುವ ಬೆಲೆ ಇದೇನಾ? ತಾವೇ ಸ್ವತಃ ಭಾಷಣದಲ್ಲಿ ಸಾರಿಗೆ ನೌಕರರ ಮೇಲೆ ಎಸ್ಮಾ ಜಾರಿ ಮಾಡುತ್ತೀಯಾ ಯಡಿಯೂರಪ್ಪ ಎಂದು ಬಾಷಣ ಮಾಡಿ, ಇಂದು ನೀವೇ ಸಾರಿಗೆ ನೌಕರರ ಮೇಲೆ ಎಸ್ಮಾ ಜಾರಿ ಮಾಡಿದ್ದೀರಿ ಇದು ನಿಮ್ಮ ವ್ಯಕ್ತಿತ್ವಕ್ಕೆ ಶೋಭೆ ತರುತ್ತದೆಯೆ?ʼ ಎಂದು ಪ್ರಶ್ನಿಸಿದ್ದಾರೆ.

    ಅಲ್ಲದೇ ಈ ರೀತಿ ಭಾಷಣ ಮಾಡಿ ಮತ ಪಡೆದು ಈಗ ಸಾರಿಗೆ ನೌಕರರ ವಿರುದ್ಧವೇ ಎಸ್ಮಾ ಜಾರಿ ಮಾಡುವುದು ಎಷ್ಟು ಸರಿ ಎಂದು ಪ್ರಶ್ನಿಸಿ ಸಾರಿಗೆ ನೌಕರರ ಬೇಡಿಕೆಗಳನ್ನು ಪಟ್ಟಿ ಮಾಡಿ ಅವುಗಳನ್ನು ಈಡೇರಿಸುವಂತೆ ಆಗ್ರಹಿಸಿದ್ದಾರೆ. ಇನ್ನು ಶ್ರೀನಿವಾಸ್‌ ಪತ್ರವನ್ನು ಸಿಎಂ ಕಚೇರಿಗೆ ಮೇಲ್‌ ಮಾಡುವ ಯತ್ನ ಮಾಡಿದ್ದಾರಾದರೂ ಮೇಲ್‌ ಸ್ವೀಕಾರವಾಗುತ್ತಿಲ್ಲ ಎಂದೂ ಸಹ ಆರೋಪಿಸಿದ್ದಾರೆ.

    ಹಾವೇರಿ: ವಿದ್ಯುತ್‌ ತಂತಿ ಬಿದ್ದು 12 ವರ್ಷದ ಬಾಲಕ ಸಾವು; ಇಬ್ಬರು ಗಂಭೀರ

    ಎಐ ಕನ್ನಡ ಕೃಷಿ ವೆಬ್‌ಸೈಟ್‌ಗಾಗಿ ಇಲ್ಲಿ ಕ್ಲಿಕ್‌ ಮಾಡಿ


    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe to get the latest posts sent to your email.

    Leave a Reply

    Related News

    ಎಸ್‌ಐಆರ್ ಅಕ್ರಮ: ಎನ್‌ಡಿಎ ನಿಯೋಗ ಮುಖ್ಯ ಚುನಾವಣಾ ಆಯುಕ್ತರಿಗೆ ದೂರು

    ಕರ್ನಾಟಕದಲ್ಲಿ ಎಸ್‌ಐಆರ್ ಪ್ರಕ್ರಿಯೆ ದುರುಪಯೋಗದ ಆರೋಪದೊಂದಿಗೆ ಕುಮಾರಸ್ವಾಮಿ ಮತ್ತು ಪ್ರಲ್ಹಾದ ಜೋಶಿ ನೇತೃತ್ವದ ಎನ್‌ಡಿಎ ನಿಯೋಗ ನವದೆಹಲಿಯಲ್ಲಿ ಮುಖ್ಯ ಚುನಾವಣಾ ಆಯುಕ್ತರಿಗೆ ದಾಖಲೆ ಸಮೇತ ದೂರು ಸಲ್ಲಿಸಿತು.

    ಮಾದಪಟ್ಟಣ ಕ್ವಾರಿ ದುರಂತ: ಅಶೋಕ ತಲಾ ₹50 ಲಕ್ಷ ಪರಿಹಾರ ಆಗ್ರಹ

    ಬೆಂಗಳೂರು ಮಾದಪಟ್ಟಣ ಕ್ವಾರಿಯಲ್ಲಿ ಬಂಡೆ ಬಿದ್ದು 7 ಕಾರ್ಮಿಕರು ಮೃತಪಟ್ಟ ಘಟನೆಗೆ ಪ್ರತಿಪಕ್ಷ ನಾಯಕ ಆರ್.ಅಶೋಕ ರಾಜ್ಯ ಸರ್ಕಾರದ ನಿರ್ಲಕ್ಷ್ಯವೇ ಕಾರಣ ಎಂದು ದೂರಿ ತಲಾ ₹50 ಲಕ್ಷ ಪರಿಹಾರ ಒತ್ತಾಯಿಸಿದ್ದಾರೆ.

    Most Popular

    Recent Comments

    Home
    Play
    Notification
    Search

    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe now to keep reading and get access to the full archive.

    Continue reading