ಬೆಳ್ತಂಗಡಿ: ಧರ್ಮಸ್ಥಳದಲ್ಲಿ ಸರಣಿ ಕೊಲೆ ಹಾಗೂ ಅತ್ಯಾಚಾರ ಕೊಲೆಗಳು ನಡೆದಿವೆ ಎಂಬ ಗಂಭೀರ ಆರೋಪ ಮಾಡಿರುವ ಅನಾಮಧೇಯ ವ್ಯಕ್ತಿಯೊಬ್ಬ ಜುಲೈ 11ರಂದು ದೂರನ್ನೂ ಸಹ ನೀಡಿದ್ದ.
ಇನ್ನು ಈ ಕೊಲೆಗಳ ಹೆಣಗಳನ್ನು ತಾನೇ ಹೂತು ಹಾಕಿದ್ದು, ಪಾಪಪ್ರಜ್ಞೆ ಕಾಡುತ್ತಿರುವ ಕಾರಣ ಅವುಗಳ ಅಸ್ತಿಪಂಜರವನ್ನು ಸಮಾಧಿ ಅಗೆದು ತೋರಿಸುವುದಾಗಿ ಹೇಳಿದ್ದ.
ಇನ್ನು ಜುಲೈ 11ರಂದು ಎಫ್‌ಐಆರ್ ದಾಖಲಾದ ಬಳಿಕ ಜುಲೈ 16ರಂದು ಮತ್ತೆ ಧರ್ಮಸ್ಥಳಕ್ಕೆ ಆಗಮಿಸಿದ್ದ ಈತ ಸಮಾಧಿ ತೋರಿಸಲು ಸಿದ್ಧನಿದ್ದ. ಆದರೆ ಅಂದು ಪೊಲೀಸರು ತನಿಖೆ ನಡೆಸದ ಕಾರಣ ಬರಿಗೈನಲ್ಲಿ ವಾಪಸ್ ಆಗಿದ್ದ.
ಬಳಿಕ ರಾಜ್ಯ ಸರ್ಕಾರ ಈ ಕುರಿತು ತನಿಖೆ ನಡೆಸಲು ವಿಶೇಷ ತನಿಖಾ ತಂಡವನ್ನು ರಚಿಸಿದ್ದು, ಇಂದು ( ಜುಲೈ 25 ) ಈ ತಂಡ ಬೆಳ್ತಂಗಡಿ ಪೊಲೀಸ್ ಠಾಣೆಗೆ ಬಂದು ಪ್ರಕರಣವನ್ನು ವರ್ಗಾಯಿಸಿಕೊಂಡ ಬಳಿಕ ನ್ಯಾಯಾಲಯದ ಅನುಮತಿ ಪಡೆದು ದೂರುದಾರನನ್ನು ಭೇಟಿಯಾಗಲಿದೆ.
ಸದ್ಯ ಎಸ್‌ಐಟಿ ತಂಡಕ್ಕೆ ಆ ಅನಾಮಧೇಯ ದೂರುದಾರ ಇರುವ ಸ್ಥಳ ಪತ್ತೆಯಾಗಿದ್ದು, ಭದ್ರತಾ ದೃಷ್ಟಿಯಿಂದ ಆತ ಕೇರಳದಲ್ಲಿದ್ದಾನೆ ಎನ್ನಲಾಗಿದೆ. ಜುಲೈ 16ರ ಬಳಿಕ ಯಾರ ಕಣ್ಣಿಗೂ ಕಾಣಿಸಿಕೊಳ್ಳದ ಆತ ತನ್ನ ವಕೀಲರ ಸಂಪರ್ಕದಲ್ಲಿದ್ದಾನೆ ಎನ್ನಲಾಗಿದೆ.
ಟಿ. ನರಸೀಪುರದಲ್ಲಿ ಭಾರೀ ಗೋಲ್‌ಮಾಲ್; ಬ್ಯಾಂಕ್ ನಕಲಿ ಸೀಲ್ ಬಳಸಿ ಜನರ ತೆರಿಗೆ ಹಣ ಗುಳುಂ!
ಎಐ ಕನ್ನಡ ಕೃಷಿ ವೆಬ್‌ಸೈಟ್‌ಗಾಗಿ ಇಲ್ಲಿ ಕ್ಲಿಕ್ ಮಾಡಿ
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


