Wednesday, November 4, 2026
spot_img
More
    spot_img
    HomeSportsCricketAsia Cup 2025: ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ಎಡವಿದ ಪಾಕ್; ಬಾಂಗ್ಲಾ ಫೈನಲ್‌ಗೆ?

    Asia Cup 2025: ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ಎಡವಿದ ಪಾಕ್; ಬಾಂಗ್ಲಾ ಫೈನಲ್‌ಗೆ?

    ದುಬೈ: ಏಷ್ಯಾ ಕಪ್‌ 2025 ( Asia Cup 2025 ) ಟೂರ್ನಿಯ ಸೂಪರ್‌ 4 ಹಂತದ ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ಪಾಕಿಸ್ತಾನ ಹಾಗೂ ಬಾಂಗ್ಲಾದೇಶ ತಂಡಗಳು ದುಬೈ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯುತ್ತಿದೆ.

    ಸೂಪರ್‌ 4 ಹಂತದಲ್ಲಿ ತಲಾ 2 ಪಂದ್ಯಗಳನ್ನಾಡಿ 1 ಪಂದ್ಯವನ್ನು ಮಾತ್ರ ಗೆದ್ದಿರುವ ಇತ್ತಂಡಗಳ ನಡುವಿನ ಈ ಕದನದಲ್ಲಿ ಗೆಲ್ಲುವ ತಂಡ ಫೈನಲ್‌ ಪ್ರವೇಶಿಸಲಿದ್ದು, ಈ ಪಂದ್ಯ ಯಾರು ಫೈನಲ್‌ ಪ್ರವೇಶಿಸುತ್ತಾರೆ ಹಾಗೂ ಯಾರು ಟೂರ್ನಿಯಿಂದ ಹೊರಬೀಳುತ್ತಾರೆ ಎಂಬುದನ್ನು ನಿರ್ಧರಿಸಲಿದೆ.

    ಇಂತಹ ಮಹತ್ವದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿರುವ ಪಾಕಿಸ್ತಾನ 20 ಓವರ್‌ಗಳಲ್ಲಿ 8 ವಿಕೆಟ್‌ ಕಳೆದುಕೊಂಡು ಕೇವಲ 135 ರನ್‌ ಕಲೆಹಾಕಿ ಬಾಂಗ್ಲಾದೇಶಕ್ಕೆ 136 ರನ್‌ಗಳ ಗುರಿಯನ್ನು ನೀಡಿದೆ. ಹೀಗೆ ಪಾಕ್‌ ಅಲ್ಪ ಮೊತ್ತದ ಗುರಿಯನ್ನು ನೀಡಿದ್ದು, ಬಾಂಗ್ಲಾದೇಶ ಈ ಮೊತ್ತವನ್ನು ಬೆನ್ನತ್ತಿ ಫೈನಲ್‌ಗೆ ಲಗ್ಗೆ ಇಡಲಿದೆಯಾ ಎಂಬುದನ್ನು ಕಾದು ನೋಡಬೇಕಿದೆ.

    ಪಾಕ್‌ ಪರ ಶಹಿಬ್‌ಜಾದಾ ಫರಾನ್‌ 4, ಫಖರ್‌ ಜಮಾನ್‌ 13, ಸೈಮ್‌ ಅಯುಬ್‌ 0, ಸಲ್ಮಾನ್‌ ಆಘ 19, ಹುಸೈನ್‌ ತಲತ್‌ 3, ಮೊಹಮ್ಮದ್‌ ಹ್ಯಾರಿಸ್‌ 31, ಶಾಹಿನ್‌ ಅಫ್ರಿದಿ 19, ಮೊಹಮ್ಮದ್‌ ನವಾಜ್‌ 25, ಫಾಹೀಮ್‌ ಅಶ್ರಫ್‌ ಅಜೇಯ 14 ಹಾಗೂ ಹ್ಯಾರಿಸ್‌ ರೌಫ್‌ ಅಜೇಯ 3 ರನ್‌ ಗಳಿಸಿದರು.

    ಬಾಂಗ್ಲಾದೇಶದ ಪರ ಟಸ್ಕಿನ್‌ ಅಹ್ಮದ್‌ 3 ವಿಕೆಟ್‌, ಮಹೆದಿ ಹಸನ್‌ 2 ವಿಕೆಟ್‌, ರಿಷದ್‌ ಹೊಸೈನ್‌ 2 ವಿಕೆಟ್‌ ಹಾಗೂ ಮುಸ್ತಫಿಜರ್‌ ರಹ್ಮಾನ್‌ 1 ವಿಕೆಟ್‌ ಪಡೆದರು.

    ನಾಳೆ ಮೈಸೂರಿನ ಚಾಮುಂಡಿಬೆಟ್ಟದ ತಪ್ಪಲಿನ ಬಳಿ ಎಸ್.ಎಲ್ ಭೈರಪ್ಪ ಅಂತ್ಯಕ್ರಿಯೆ

    ಎಐ ಅಡ್ವೋಕೇಟ್‌ ಅಸಿಸ್ಟೆಂಟ್‌ ವೆಬ್‌ಸೈಟ್‌ಗಾಗಿ ಇಲ್ಲಿ ಕ್ಲಿಕ್‌ ಮಾಡಿ


    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe to get the latest posts sent to your email.

    LEAVE A REPLY

    Related News

    ಮಹಾಲಯ ಅಮಾವಾಸ್ಯೆ 2026: ಅಕ್ಟೋಬರ್ 10ರಂದು ಆಚರಣೆ; ಪಿತೃಪೂಜೆಯ ಮಹತ್ವವೇನು?

    ಹಿಂದೂ ಧರ್ಮದಲ್ಲಿ ಮಹಾಲಯ ಅಮಾವಾಸ್ಯೆಗೆ ವಿಶೇಷ ಸ್ಥಾನವಿದೆ. ಪಿತೃಪಕ್ಷದ ಕೊನೆಯ ದಿನವಾದ ಈ ಸಂದರ್ಭದಲ್ಲಿ ಪೂರ್ವಜರನ್ನು ಸ್ಮರಿಸಿ, ಅವರ ಆತ್ಮಕ್ಕೆ ಶಾಂತಿ ಕೋರಿ ವಿವಿಧ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಲಾಗುತ್ತದೆ. ಈ ದಿನ ಶ್ರಾದ್ಧ,...

    ಕರ್ನಾಟಕಕ್ಕೆ ಗುಡ್‌ನ್ಯೂಸ್: ಯುಬಿಯಿಂದ ₹4,500 ಕೋಟಿ ಕೊಡುಗೆ, 36 ಸಾವಿರಕ್ಕೂ ಹೆಚ್ಚು ಉದ್ಯೋಗ

    ಬೆಂಗಳೂರು: ದೇಶದ ಅತಿದೊಡ್ಡ ಬಿಯರ್ ಉತ್ಪಾದನಾ ಸಂಸ್ಥೆ ಹಾಗೂ ಹೈನೆಕನ್‌ ಕಂಪನಿಯ ಭಾಗವಾಗಿರುವ ಬೆಂಗಳೂರು ಮೂಲದ 'ಯುನೈಟೆಡ್ ಬ್ರೂವರೀಸ್ ಲಿಮಿಟೆಡ್' (ಯುಬಿಎಲ್‌), ಕರ್ನಾಟಕದ ಆರ್ಥಿಕತೆ ಮತ್ತು ಉದ್ಯೋಗ ಸೃಷ್ಟಿಯಲ್ಲಿ ಮಹತ್ವದ ಪಾತ್ರ ವಹಿಸುತ್ತಿದೆ...

    Most Popular

    Recent Comments

    Home
    Play
    Notification
    Search