ಬೆಂಗಳೂರು: ನಿನ್ನೆ ( ಸೆಪ್ಟೆಂಬರ್ 24 ) ದುಬೈ ಕ್ರೀಡಾಂಗಣದಲ್ಲಿ ನಡೆದ ಏಷ್ಯಾ ಕಪ್ 2025 ( Asia Cup 2025 ) ಟೂರ್ನಿಯ ಸೂಪರ್ 4 ಪಂದ್ಯದಲ್ಲಿ ಭಾರತ ತಂಡ ಬಾಂಗ್ಲಾದೇಶದ ವಿರುದ್ಧ 41 ರನ್‌ಗಳ ಗೆಲುವನ್ನು ದಾಖಲಿಸಿ ಫೈನಲ್‌ಗೆ ಲಗ್ಗೆ ಇಟ್ಟಿದೆ.
ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಭಾರತದ 6 ವಿಕೆಟ್ ಕಳೆದುಕೊಂಡು 168 ರನ್ ಕಲೆಹಾಕಿತು. ಆದರೆ ಅಂತಿಮ ಓವರ್‌ಗಳಲ್ಲಿ ಭಾರತ ತಂಡದ ಬ್ಯಾಟಿಂಗ್ ಆರ್ಡರ್ ಸದ್ಯ ಭಾರೀ ವಿವಾದಕ್ಕೆ ಎಡೆ ಮಾಡಿಕೊಟ್ಟಿದ್ದು, ಟೀಮ್ ಇಂಡಿಯಾದಲ್ಲಿ ರಾಜಕೀಯ ನಡೆಯುತ್ತಿದೆ ಎಂಬ ಮಾತುಗಳು ಕೇಳಿಬರುತ್ತಿವೆ.
ಇದಕ್ಕೆ ಕಾರಣ ಆರಂಭಿಕನಾಗಿ ಹಲವು ಪಂದ್ಯಗಳಲ್ಲಿ ಕಣಕ್ಕಿಳಿದು ತನ್ನ ಸಾಮರ್ಥ್ಯವನ್ನು ಸಾಬೀತುಪಡಿಸಿಕೊಂಡಿರುವ ಸಂಜು ಸ್ಯಾಮ್ಸನ್ ಅವರನ್ನು ಎಂಟನೇ ಕ್ರಮಾಂಕದಲ್ಲಿ ಕಣಕ್ಕಿಳಿಸಲು ನಿರ್ಧರಿಸಿದ್ದು. ಹೌದು, ಕನಿಷ್ಟವೆಂದರೂ ಐದನೇ ಕ್ರಮಾಂಕದಲ್ಲಾದರೂ ಕಣಕ್ಕಿಳಿಸಬೇಕಿದ್ದ ಸಂಜು ಸ್ಯಾಮ್ಸನ್ ರೀತಿಯ ಬ್ಯಾಟ್ಸ್‌ಮನ್‌ಗೂ ಮುನ್ನ ನಿನ್ನೆ ಶಿವಮ್ ದುಬೆ ಹಾಗೂ ಅಕ್ಷರ್ ಪಟೇಲ್ ರೀತಿಯ ಆಲ್‌ರೌಂಡರ್ ಆಟಗಾರರನ್ನು ಕಣಕ್ಕಿಳಿಸುವ ಮೂಲಕ ಕೋಚ್ ಗೌತಮ್ ಗಂಭೀರ್ ಹಾಗೂ ನಾಯಕ ಸೂರ್ಯಕುಮಾರ್ ಯಾದವ್ ಭಾರೀ ಟೀಕೆಗೆ ಗುರಿಯಾಗಿದ್ದಾರೆ.
ತಂಡ ಆರನೇ ವಿಕೆಟ್ ಕಳೆದುಕೊಂಡಾಗ ಈಗಲಾದರೂ ಸಂಜು ಸ್ಯಾಮ್ಸನ್ ಅವರನ್ನು ಕಣಕ್ಕಿಳಿಸಬಹುದು ಎಂದುಕೊಂಡರೆ ಅಕ್ಷರ್ ಪಟೇಲ್‌ರನ್ನು ಕಣಕ್ಕಿಳಿಸಿದ ಭಾರತ ಕ್ರಿಕೆಟ್ ಪ್ರೇಮಿಗಳ ಆಕ್ರೋಶಕ್ಕೆ ಕಾರಣವಾಯಿತು. ಅನೇಕರು ಇದನ್ನು ತಂಡದ ಒಳ ರಾಜಕೀಯ ಎಂದು ಟೀಕಿಸುತ್ತಿದ್ದರೆ ಈ ರೀತಿಯ ಅವಮಾನ ಸಂಜು ಸ್ಯಾಮ್ಸನ್‌ಗೆ ಈ ಹಿಂದಿನಿಂದಲೂ ನಡೆಯುತ್ತಲೇ ಬಂದಿದೆ ಎಂದು ಅಸಮಾಧಾನ ಹೊರಹಾಕಿದ್ದಾರೆ.
ಸಂಜು ಸ್ಯಾಮ್ಸನ್‌ಗೆ ಸರಿಯಾದ ಅವಕಾಶ ಸಿಕ್ಕಿಲ್ಲ ಎಂಬ ದೊಡ್ಡ ಕೂಗು ಹಿಂದಿನಿಂದಲೂ ಇದ್ದು, ಅವಕಾಶ ಕೊಟ್ಟಾಗ ಈ ರೀತಿ ನಡೆಸಿಕೊಂಡು ಅವಮಾನಿಸುತ್ತಾರೆ ಎಂಬ ಅಪವಾದವೂ ಸಹ ಹುಟ್ಟಿಕೊಂಡಿದೆ.
ರೈಲ್ವೆ ನೌಕರರಿಗೆ ದಸರಾ ಗಿಫ್ಟ್: ಬೋನಸ್ ಘೋಷಿಸಿದ ಕೇಂದ್ರ ಸರ್ಕಾರ
ಎಐ ಅಡ್ವೋಕೇಟ್ ಅಸಿಸ್ಟೆಂಟ್ ವೆಬ್‌ಸೈಟ್‌ಗಾಗಿ ಇಲ್ಲಿ ಕ್ಲಿಕ್ ಮಾಡಿ
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


