ಬೆಂಗಳೂರು: ಯಾವುದೇ ಆದಾಯವಿಲ್ಲದ 34,165 ಸಿ ವರ್ಗದ ಐತಿಹಾಸಿಕ ದೇವಾಲಯಗಳಲ್ಲಿ ಮೂಲಭೂತ ಸೌಕರ್ಯಗಳ ಅಭಿವೃದ್ಧಿಪಡಿಸುವ ಸಂಬಂಧ ವಿವಿಧ ಕ್ಷೇತ್ರಗಳಲ್ಲಿನ ಗಣ್ಯರು ಹಾಗೂ ಮುಜರಾಯಿ ಇಲಾಖೆಯ ಪ್ರತಿನಿಧಿಗಳನ್ನೊಳಗೊಂಡ ವಿಷನ್ ಗ್ರೂಪ್ ರಚಿಸಿ ತಾತ್ವಿಕ ಅನುಮೋದನೆ ನೀಡಲಾಗಿದೆ.
ವಿಷನ್ ಗ್ರೂಪ್‌ನಲ್ಲಿ ಮಾಜಿ ರಾಜ್ಯಸಭಾ ಸದಸ್ಯರಾದ ಸಿ.ಕೆ.ರಾಮಮೂರ್ತಿ, ಕೆ.ಇ.ರಾಧಾಕೃಷ್ಣ, ಮಾಜಿ ಶಾಸಕಿ ಶಕುಂತಲಾ ಶೆಟ್ಟಿ, ಡಾ.ಮಹಂತೇಶ್ ಬಿರಾದಾರ್, ಡಾ.ಶ್ರೀಪಾದ.ಪಿ.ಸಿ ಮತ್ತು ಯತಿರಾಜ್ ಸಂಪತ್‌ಕುಮಾರ್ ಅವರುಗಳು ಸಮಿತಿಯ ಸದಸ್ಯರಾಗಿದ್ದಾರೆ.ಸಿ ವರ್ಗ ವ್ಯಾಪ್ತಿಗೆ ಬರುವ 34,165 ದೇವಸ್ಥಾನಗಳಲ್ಲಿ ದೇವಾಲಯಗಳ ಜೀರ್ಣೋದ್ಧಾರ ಹಾಗೂ ಅಭಿವೃದ್ಧಿ ಸಂದರ್ಭದಲ್ಲಿ ಅಗತ್ಯ ಸಲಹೆ ಮತ್ತು ಸೂಚನೆಗಳನ್ನು ವಿಷನ್ ಗ್ರೂಪ್ ನೀಡಲಿದೆ.
ದೇವಾಲಯಗಳಿಗೆ ಬರುವ ಭಕ್ತರಿಗೆ ಕಾಲ ಕಾಲಕ್ಕೆ ಅಗತ್ಯವಿರುವ ಮೂಲಭೂತ ಸೌಲಭ್ಯಗಳನ್ನು ದೇವಾಲಯದ ಪರಂಪರೆಗೆ ಧಕ್ಕೆ ಬಾರದ ರೀತಿಯಲ್ಲಿ ರೂಪಿಸುವುದು, ಸಂಪನೂಲಗಳ ಕ್ರೌಢೀಕರಣ, ದಾನಿಗಳಿಂದ ಸಂಪನೂಲಗಳನ್ನು ಕ್ರೌಡೀಕರಿಸುವುದು, ದೇವಾಲಯಗಳ ಸಂರಕ್ಷಣೆ, ಜೀರ್ಣೋದ್ಧಾರ ಸೇರಿದಂತೆ ಅಗತ್ಯ ರೂಪುರೇಷೆಗಳನ್ನು ರೂಪಿಸಲಿದೆ.
ದೇವಾಲಯಗಳಲ್ಲಿ ಅಗತ್ಯ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲು ಸಲಹೆ ನೀಡುವುದು. ದೇವಾಲಯಗಳ ಸಂರಕ್ಷಣೆ, ಸೌಲಭ್ಯಗಳನ್ನು ಕಲ್ಪಿಸಲು ಸಂಪನೂಲ ಸಂಗ್ರಹಣೆ, ಇದಕ್ಕಾಗಿ ದಾನಿಗಳನ್ನು ಸಂಪರ್ಕಿಸುವುದು ಹಾಗೂ ಇಲಾಖೆಯೊಂದಿಗೆ ಸಮನ್ವಯ ಸಾಧಿಸುವುದು ವಿಷನ್ ಗ್ರೂಪ್‌ನ ಉದ್ದೇಶವಾಗಿದೆ.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


