Tuesday, November 3, 2026
spot_img
More
    spot_img
    HomeStateಸರ್ಕಾರಿ ನೌಕರರ ಕಡ್ಡಾಯ ಕನಿಷ್ಠ ಮಾಸಿಕ ವಿಮೆ: ಹೊಸ ಸುತ್ತೋಲೆ

    ಸರ್ಕಾರಿ ನೌಕರರ ಕಡ್ಡಾಯ ಕನಿಷ್ಠ ಮಾಸಿಕ ವಿಮೆ: ಹೊಸ ಸುತ್ತೋಲೆ

    ಕರ್ನಾಟಕ ಸರ್ಕಾರಿ ವಿಮಾ ಇಲಾಖೆ ಸುತ್ತೋಲೆಯೊಂದನ್ನು ಹೊರಡಿಸಿದೆ. ಇದು ಕಡ್ಡಾಯ ಜೀವ ವಿಮಾ ನಿಯಮ 8 ರಂತೆ ಕನಿಷ್ಠ ಮಾಸಿಕ ವಿಮಾಕಂತಿನ ಪಾಲನೆ, ಪರಿಶೀಲನೆ ಮತ್ತು ಕ್ರಮಕೈಗೊಳ್ಳುವ ಬಗ್ಗೆ ಎಂಬ ವಿಷಯವನ್ನು ಒಳಗೊಂಡಿದೆ.

    ಶೋಭಾ ಬಿ. ನಿರ್ದೇಶಕರು, ವಿಮಾ ಇಲಾಖೆ ಈ ಸುತ್ತೋಲೆಯನ್ನು ಎಲ್ಲಾ ಜಿಲ್ಲಾ ವಿಮಾಧಿಕಾರಿಗಳಿಗೆ ಕಳಿಸಿದ್ದಾರೆ. ಕೆ.ಜಿ.ಐ.ಡಿ. ವೆಬ್‌ಸೈಟ್‌ನಲ್ಲಿಯೂ ಇದನ್ನು ಕಡ್ಡಾಯವಾಗಿ ಪ್ರಕಟಿಸಬೇಕು ಎಂದು ಉಲ್ಲೇಖಿಸಲಾಗಿದೆ.

    ಸುತ್ತೋಲೆ ವಿವರಗಳು: ಈ ವಿಷಯಕ್ಕೆ ಸಂಬಂಧಿಸಿದಂತೆ, ಕರ್ನಾಟಕ ನಾಗರೀಕ ಸೇವಾ (ಪರಿಷ್ಕೃತ ವೇತನ) ನಿಯಮಗಳ ಮೇರೆಗೆ ಪ್ರತೀ ಸರ್ಕಾರಿ ನೌಕರರು ಹೊಂದಿರುವ ಹುದ್ದೆಗಳಿಗೆ ಗೊತ್ತುಪಡಿಸಲಾದ ವೇತನಶ್ರೇಣಿಯನ್ವಯ ವಿಮಾ ಇಲಾಖೆಯ ಕಡ್ಡಾಯ ಜೀವ ವಿಮಾ ನಿಯಮ 8 ರಲ್ಲಿ ಅಗತ್ಯ ತಿದ್ದುಪಡಿ ಮಾಡಿರುವಂತೆ, ಪ್ರತಿಯೊಬ್ಬ ಅರ್ಹ ಸರ್ಕಾರಿ ನೌಕರರು ಅವರು ಹೊಂದಿರುವ ಹುದ್ದೆಗಳ ವೇತನ ಶ್ರೇಣಿಯ ಸರಾಸರಿ ವೇತನದ 6.25% ರಷ್ಟು ಕನಿಷ್ಠ ಮಾಸಿಕ ವಿಮೆಯನ್ನು ಕಡ್ಡಾಯವಾಗಿ ಹೊಂದಿರತಕ್ಕದ್ದು.

    ಆದರೆ, ಇತ್ತೀಚೆಗೆ ನಡೆದ ಪರಿಶೀಲನೆಯಂತೆ, ಸುಮಾರು 82,256 ನೌಕರರು ಕನಿಷ್ಠ ಮಾಸಿಕ ವಿಮಾಕಂತನ್ನು ಹೊಂದಿಲ್ಲದಿರುವುದು ಗಮನಕ್ಕೆ ಬಂದಿರುತ್ತದೆ. ಕಡ್ಡಾಯ ಜೀವ ವಿಮಾ ನಿಯಮವನ್ನು ಸಮರ್ಪಕವಾಗಿ ನಿರ್ವಹಿಸಲು, ಇಲಾಖೆಯ ಎಲ್ಲಾ ಉಪ ನಿರ್ದೇಶಕರುಗಳು ಹಾಗೂ ಜಿಲ್ಲಾ ವಿಮಾಧಿಕಾರಿಗಳು ಕ್ರಮ ಕೈಗೊಂಡು ತಮ್ಮ ಜಿಲ್ಲೆಯ ವ್ಯಾಪ್ತಿಯಲ್ಲಿ ಬರುವ ವೇತನ ಬಟವಾಡೆ ಅಧಿಕಾರಿಗಳೊಂದಿಗೆ ಹಾಗೂ ಖಜಾನೆ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸಿ, ಅವರವರ ಕಛೇರಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ನೌಕರರ ಮಾಸಿಕ ವಿಮಾಕಂತನ್ನು ಆಗಿಂದಾಗ್ಗೆ ಪರಿಶೀಲಿಸಿ ಕನಿಷ್ಠ ದರಕ್ಕಿಂತ ಕಡಿಮೆ ದರದಲ್ಲಿ ವಿಮೆ ಮಾಡಿಸಿದ್ದಲ್ಲಿ ಅವರ ವೇತನ ಶ್ರೇಣಿಗೆ ನಿಗದಿಪಡಿಸಲಾದಂತೆ ಕಡಿಮೆ ವಿಮೆ ಮಾಡಿಸಿದ್ದಲ್ಲಿ, ಕನಿಷ್ಠ ಮಾಸಿಕ ಮೊಬಲಗಿಗೆ ಅನುಸಾರವಾಗಿ ಉಂಟಾಗುವ ವ್ಯತ್ಯಾಸದ ಮೊತ್ತಕ್ಕಾಗಿ ಹೆಚ್ಚಿನ ವಿಮೆ ಮಾಡಿಸುವಂತೆ ಅವರುಗಳಿಂದ ಕಡ್ಡಾಯವಾಗಿ ಪ್ರಸ್ತಾವನೆಯನ್ನು ಪಡೆದು ನಿಯಮಾನುಸಾರ ಕಾರ್ಯಗತಗೊಳಿಸಲು ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ.

    ಮುಂದುವರೆದು, ಕನಿಷ್ಟ ವಿಮಾ ಕಂತನ್ನು ಹೊಂದಿಲ್ಲದ ನೌಕರರ ಜಿಲ್ಲಾವಾರು/ ಇಲಾಖಾವಾರು ಮಾಹಿತಿಯನ್ನು ಪಟ್ಟಿಮಾಡಿ ತಮ್ಮ ಮಾಹಿತಿಗಾಗಿ ಹಾಗೂ ಮುಂದಿನ ಕ್ರಮಕ್ಕಾಗಿ ಲಗತ್ತಿಸಲಾಗಿದೆ. ಸದರಿ ಪಟ್ಟಿಯನ್ನು ಪರಿಶೀಲಿಸಿ, ಸಂಬಂಧಪಟ್ಟ ಡಿ.ಡಿ.ಓ. ಗಳಿಗೆ ಈ ಕುರಿತು ತಕ್ಷಣವೇ ಕ್ರಮಕೈಗೊಳ್ಳಲು ಸೂಚಿಸುವಂತೆ ತಿಳಿಸಲಾಗಿದೆ ಎಂದು ಹೇಳಿದೆ.

    ಸುತ್ತೋಲೆಯಲ್ಲಿ ಯಾವ ಜಿಲ್ಲೆಯಲ್ಲಿ ಎಷ್ಟು ನೌಕರರು ಕನಿಷ್ಠ ವಿಮಾ ಕಂತನ್ನು ಹೊಂದಿಲ್ಲ ಎಂದು ಸಹ ಮಾಹಿತಿ ನೀಡಲಾಗಿದೆ. ಜಿಲ್ಲಾವಾರು ಒಟ್ಟು 82,256 ನೌಕರರು ಕನಿಷ್ಠ ವಿಮಾ ಕಂತನ್ನು ಹೊಂದಿಲ್ಲ.

    ಇವುಗಳಲ್ಲಿ ಬೆಂಗಳೂರು ನಗರ 13,692. ಕಲಬುರಗಿ 4020. ವಿಜಯಪುರ 4,192. ತುಮಕೂರು 3,913. ರಾಯಚೂರು 2497 ನೌಕರರಿದ್ದಾರೆ.

    ಬಾಗಲಕೋಟೆ 2,362. ಬಳ್ಳಾರಿ 3,412. ಬೆಳಗಾವಿ 6,202. ಬೆಂಗಳೂರು ಗ್ರಾಮಾಂತರ 827. ಬೀದರ್ 3,301. ಚಾಮರಾಜನಗರ 1,628. ಚಿಕ್ಕಬಳ್ಳಾಪುರ 1,406.

    ಚಿಕ್ಕಮಗಳೂರು 1504. ಚಿತ್ರದುರ್ಗ 2452. ದಕ್ಷಿಣ ಕನ್ನಡ 1542. ದಾವಣಗೆರೆ 1911. ಧಾರವಾಡ 3828. ಗದಗ 1546. ಹಾಸನ 2464. ಹಾವೇರಿ 2462. ಕೊಡಗು 772.

    ಕೋಲಾರ 2042. ಕೊಪ್ಪಳ 2229. ಮಂಡ್ಯ 1087. ಮೈಸೂರು 3269. ರಾಮನಗರ 1282. ಶಿವಮೊಗ್ಗ 2674. ಉಡುಪಿ 481. ಉತ್ತರ ಕನ್ನಡ 1481. ವಿಜಯಪುರ 4192. ಯಾದಗಿರಿ 1703 ನೌಕರರು.


    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe to get the latest posts sent to your email.

    LEAVE A REPLY

    Related News

    ಮಹಾಲಯ ಅಮಾವಾಸ್ಯೆ 2026: ಅಕ್ಟೋಬರ್ 10ರಂದು ಆಚರಣೆ; ಪಿತೃಪೂಜೆಯ ಮಹತ್ವವೇನು?

    ಹಿಂದೂ ಧರ್ಮದಲ್ಲಿ ಮಹಾಲಯ ಅಮಾವಾಸ್ಯೆಗೆ ವಿಶೇಷ ಸ್ಥಾನವಿದೆ. ಪಿತೃಪಕ್ಷದ ಕೊನೆಯ ದಿನವಾದ ಈ ಸಂದರ್ಭದಲ್ಲಿ ಪೂರ್ವಜರನ್ನು ಸ್ಮರಿಸಿ, ಅವರ ಆತ್ಮಕ್ಕೆ ಶಾಂತಿ ಕೋರಿ ವಿವಿಧ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಲಾಗುತ್ತದೆ. ಈ ದಿನ ಶ್ರಾದ್ಧ,...

    ಕರ್ನಾಟಕಕ್ಕೆ ಗುಡ್‌ನ್ಯೂಸ್: ಯುಬಿಯಿಂದ ₹4,500 ಕೋಟಿ ಕೊಡುಗೆ, 36 ಸಾವಿರಕ್ಕೂ ಹೆಚ್ಚು ಉದ್ಯೋಗ

    ಬೆಂಗಳೂರು: ದೇಶದ ಅತಿದೊಡ್ಡ ಬಿಯರ್ ಉತ್ಪಾದನಾ ಸಂಸ್ಥೆ ಹಾಗೂ ಹೈನೆಕನ್‌ ಕಂಪನಿಯ ಭಾಗವಾಗಿರುವ ಬೆಂಗಳೂರು ಮೂಲದ 'ಯುನೈಟೆಡ್ ಬ್ರೂವರೀಸ್ ಲಿಮಿಟೆಡ್' (ಯುಬಿಎಲ್‌), ಕರ್ನಾಟಕದ ಆರ್ಥಿಕತೆ ಮತ್ತು ಉದ್ಯೋಗ ಸೃಷ್ಟಿಯಲ್ಲಿ ಮಹತ್ವದ ಪಾತ್ರ ವಹಿಸುತ್ತಿದೆ...

    Most Popular

    Recent Comments

    Home
    Play
    Notification
    Search