ಬೆಂಗಳೂರು: ದಿವಂಗತ ನಟ ಅಂಬರೀಶ್ ಏಳನೇ ವರ್ಷದ ಪುಣ್ಯಸ್ಮರಣೆ ಪ್ರಯುಕ್ತ ಅವರ ಪುಣ್ಯಭೂಮಿಯಲ್ಲಿ ಪೂಜೆಗಳು ನೆರವೇರಿದವು. ಸಮಾಧಿಗೆ ಪತ್ನಿ ಸುಮಲತಾ ಅಂಬರೀಶ್ ಪೂಜೆ ಸಲ್ಲಿಸಿದರು. ಕಲಿಯುಗದ ಕರ್ಣನ ಅಭಿಮಾನಿಗಳು ಸಾಲಾಗಿ ಬಂದು ಸಮಾಧಿ ದರ್ಶನ ಪಡೆದರು.
ಪೂಜೆ ಬಳಿಕ ಮಾಧ್ಯಮದವರ ಜತೆ ಮಾತನಾಡಿದ ಸುಮಲತಾ ಅಂಬರೀಶ್ ರಾಜಕೀಯದಲ್ಲಿ ತಮ್ಮ ಮುಂದಿನ ನಡೆ ಏನೆಂಬುದನ್ನು ತಿಳಿಸಿದರು. 2018ರ ಲೋಕಸಭಾ ಚುನಾವಣೆಯಲ್ಲಿ ಮಂಡ್ಯ ಕ್ಷೇತ್ರದಿಂದ ಸ್ಪರ್ಧಿಸಿ ಪಕ್ಷೇತರ ಅಭ್ಯರ್ಥಿಯಾಗಿ ಗೆಲುವು ಸಾಧಿಸಿದ್ದ ತಾವು ಈಗ ಬಿಜೆಪಿಯಲ್ಲಿ ಗುರುತಿಸಿಕೊಂಡಿದ್ದು, ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಕಣಕ್ಕಿಳಿಯಲಿದ್ದೇನೆ ಎಂದಿದ್ದಾರೆ.
ತಾವು ಯಾವ ಕ್ಷೇತ್ರದಿಂದ ಸ್ಪರ್ಧಿಸಬೇಕು ಎಂಬುದನ್ನು ಬಿಜೆಪಿ ವರಿಷ್ಠರು ತೀರ್ಮಾನ ಮಾಡಲಿದ್ದು, ಮದ್ದೂರು ತನ್ನ ಮೊದಲ ಆಯ್ಕೆಯ ಕ್ಷೇತ್ರವಾಗಿದೆ ಎಂದರು. ತಾವಾಗಲಿ ಅಥವಾ ಅಭಿಷೇಕ್ ಅಂಬರೀಶ್ ಆಗಲಿ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಿದರೆ ಅದು ಮದ್ದೂರು ಕ್ಷೇತ್ರದಿಂದಲೇ ಎಂದು ತಿಳಿಸಿದರು.
ಇನ್ನು ಚಿತ್ರರಂಗದ ಕುರಿತು ಮಾತನಾಡಿದ ಸುಮಲತಾ ಅಂಬರೀಶ್ ಅಂಬರೀಶ್ ಅವರು ಇರುವ ತನಕ ಚಿತ್ರರಂಗಕ್ಕೆ ನಾಯಕರಿದ್ದರು ಎಂದು ಹೇಳಿದ್ದು, ಸದ್ಯ ಚಿತ್ರರಂಗಕ್ಕೆ ಯಾರಾದರೂ ಒಬ್ಬರ ಲೀಡರ್ಶಿಪ್ ಬೇಕಿದೆ ಎಂದಿದ್ದಾರೆ.
ಮೈಸೂರು: ಸರ್ಕಾರಿ ಶಾಲೆಯ ಮಕ್ಕಳಿಂದ ಶೌಚಾಲಯ ಸ್ವಚ್ಛತೆ
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


