Friday, November 6, 2026
spot_img
More
    spot_img
    HomeSportsCricketFact Check: ಮದುವೆಯ ಎಲ್ಲ ಪೋಸ್ಟ್‌ ಡಿಲಿಟ್;‌ ತಾಳಿ ಕಟ್ಟುವ ವೇಳೆ ಮುರಿದುಬಿದ್ದ ಸ್ಮೃತಿ ಮಂಧಾನ...

    Fact Check: ಮದುವೆಯ ಎಲ್ಲ ಪೋಸ್ಟ್‌ ಡಿಲಿಟ್;‌ ತಾಳಿ ಕಟ್ಟುವ ವೇಳೆ ಮುರಿದುಬಿದ್ದ ಸ್ಮೃತಿ ಮಂಧಾನ ವಿವಾಹ!

    ವಿಶ್ವಕಪ್ ವಿಜೇತ ತಂಡದ ಆಟಗಾರ್ತಿ ಸ್ಮೃತಿ ಮಂಧಾನ ವಿವಾಹ ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ ಇದೇ ಭಾನುವಾರದಂದು ( ನವೆಂಬರ್‌ 23 ) ಮುಗಿದುಹೋಗಿರುತ್ತಿತ್ತು. ಆದರೆ ಅದೇ ದಿನ ಬೆಳಗಿನ ಸಮಯ ತಿಂಡಿ ಮುಗಿಸಿ ಕುಳಿತಿದ್ದ ಸ್ಮೃತಿ ಮಂಧಾನ ತಂದೆ ಶ್ರೀನಿವಾಸ್‌ ಮಂಧಾನ ಕುಸಿದುಬಿದ್ದಿದ್ದು, ತಕ್ಷಣವೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು.

    ಹೀಗೆ ತನ್ನ ಜೀವನದಲ್ಲಿ ಸಾಧನೆ ಮಾಡಲು ಕಾರಣರಾದ ತಂದೆ ಅನಾರೋಗ್ಯಕ್ಕೆ ಒಳಗಾಗಿ ಆಸ್ಪತ್ರೆ ಸೇರಿದ ಕಾರಣ ಮೊನ್ನೆ ನಡೆಯಬೇಕಿದ್ದ ವಿವಾಹ ಮುಂದೂಡಲ್ಪಟ್ಟಿತು. ಬಳಿಕ ಸ್ಮೃತಿ ಮಂಧಾನ ಭಾವಿ ಪತಿ ಪಲಾಶ್‌ ಮುಚ್ಚಲ್‌ ಸಹ ಅನಾರೋಗ್ಯಕ್ಕೊಳಗಾಗಿ ಮಾರನೇ ದಿನ ಆಸ್ಪತ್ರೆಗೆ ದಾಖಲಾಗಿದ್ದರು.

    ಆ ಬಳಿಕ ಸ್ಮೃತಿ ಮಂಧಾನ ವಿವಾಹದ ಕುರಿತು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗಿದ್ದ ವಿಡಿಯೊ ಹಾಗೂ ಫೋಟೊಗಳು ಮಾಯವಾದವು. ಸ್ಮೃತಿ ಮಂಧಾನ ಸೇರಿದಂತೆ ಆಕೆಯ ಸಹಆಟಗಾರ್ತಿಯರು ಹಾಗೂ ಸಂಬಂಧಿಕರು ಹಂಚಿಕೊಂಡಿದ್ದ ವಿವಾಹಕ್ಕೆ ಸಂಬಂಧಿಸಿದ ಫೋಟೊ ಹಾಗೂ ವಿಡಿಯೊಗಳನ್ನು ಡಿಲಿಟ್‌ ಮಾಡಲಾಗಿದೆ.

    ಈ ವಿಷಯವನ್ನು ಇಟ್ಟುಕೊಂಡು ಎಕ್ಸ್‌ ವೇದಿಕೆಯಲ್ಲಿ ಕೆಲವರು ತೆರೆಯ ಹಿಂದೆ ಏನೇನೋ ಬೆಳವಣಿಗೆಗಳು ನಡೆದಿದ್ದು, ಸ್ಮೃತಿ ಮಂಧಾನ ಮದುವೆ ಮುಂಡೂಲ್ಪಡಲು ನಿಜವಾದ ಕಾರಣ ಬೇರೆ ಏನೋ ಇದೆ ಎಂದು ಅನುಮಾನ ಹೊರಹಾಕಿದ್ದಾರೆ.

    ಅಲ್ಲದೇ ಸ್ಮೃತಿ ಮಂಧಾನ ಪಲಾಶ್‌ ಮುಚ್ಚಲ್‌ ಜತೆಗಿನ ಎಲ್ಲ ಫೋಟೊಗಳನ್ನು ಡಿಲಿಟ್‌ ಮಾಡಿರುವುದು ಈ ಅನುಮಾನವನ್ನು ಹೆಚ್ಚಿಸಿವೆ ಎಂದು ಬರೆದುಕೊಂಡಿದ್ದಾರೆ.

    ಆದರೆ ಅಸಲಿಯತ್ತಿಗೆ ಈ ಕುರಿತು ಹಂಚಿಕೊಳ್ಳುತ್ತಿರುವ ಪೋಸ್ಟ್‌ಗಳು ಸುಳ್ಳು. ಏಕೆಂದರೆ ಸ್ಮೃತಿ ಮಂಧಾನ ಹಾಗೂ ಆಕೆಯ ಸಹ ಆಟಗಾರ್ತಿಯರು ಕೇವಲ ವಿವಾಹಕ್ಕೆ ಸಂಬಂಧಿಸಿದ ಪೋಸ್ಟ್‌ಗಳನ್ನು ತೆಗೆದುಹಾಕಿದ್ದಾರೆ. ಆದರೆ ಸ್ಮೃತಿ ಮಂಧಾನ ಈ ಹಿಂದೆ ಪಲಾಶ್‌ ಮುಚ್ಚಲ್‌ ಕುರಿತು ಹಂಚಿಕೊಂಡಿದ್ದ ಎಲ್ಲ ಪೋಸ್ಟ್‌ಗಳು ಹಾಗೇ ಇವೆ.

    ಇನ್ನು ವಿವಾಹ ಸಂದರ್ಭದಲ್ಲಿ ತಂದೆ ಅನಾರೋಗ್ಯಕ್ಕೊಳಗಾಗಿದ್ದು, ಇಂತಹ ಸಂದರ್ಭದಲ್ಲಿ ತಾವು ಯಾರೂ ಸಂಭ್ರಮದ ಪೋಸ್ಟ್‌ಗಳನ್ನು ಹಂಚಿಕೊಳ್ಳುವುದು ಬೇಡ ಎಂದು ಸ್ಮೃತಿ ಮಂಧಾನ ಹೀಗೆ ಮಾಡಿದ್ದಾರೆಯೇ ಹೊರತು. ವಿವಾಹ ಮುರಿದುಬಿದ್ದಿದೆ ಎನ್ನುವುದು ಸತ್ಯಕ್ಕೆ ದೂರವಾದದ್ದು. ಇಬ್ಬರ ನಡುವಿನ ಹಳೆಯ ಫೋಟೊಗಳು ಹಾಗೆಯೇ ಇವೆ ಹಾಗೂ ಒಬ್ಬೊರನ್ನೊಬ್ಬರು ಸಾಮಾಜಿಕ ಜಾಲತಾಣದಲ್ಲಿ ಫಾಲೊ ಮಾಡುತ್ತಿದ್ದಾರೆ.


    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe to get the latest posts sent to your email.

    LEAVE A REPLY

    Related News

    ಮಹಾಲಯ ಅಮಾವಾಸ್ಯೆ 2026: ಅಕ್ಟೋಬರ್ 10ರಂದು ಆಚರಣೆ; ಪಿತೃಪೂಜೆಯ ಮಹತ್ವವೇನು?

    ಹಿಂದೂ ಧರ್ಮದಲ್ಲಿ ಮಹಾಲಯ ಅಮಾವಾಸ್ಯೆಗೆ ವಿಶೇಷ ಸ್ಥಾನವಿದೆ. ಪಿತೃಪಕ್ಷದ ಕೊನೆಯ ದಿನವಾದ ಈ ಸಂದರ್ಭದಲ್ಲಿ ಪೂರ್ವಜರನ್ನು ಸ್ಮರಿಸಿ, ಅವರ ಆತ್ಮಕ್ಕೆ ಶಾಂತಿ ಕೋರಿ ವಿವಿಧ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಲಾಗುತ್ತದೆ. ಈ ದಿನ ಶ್ರಾದ್ಧ,...

    ಕರ್ನಾಟಕಕ್ಕೆ ಗುಡ್‌ನ್ಯೂಸ್: ಯುಬಿಯಿಂದ ₹4,500 ಕೋಟಿ ಕೊಡುಗೆ, 36 ಸಾವಿರಕ್ಕೂ ಹೆಚ್ಚು ಉದ್ಯೋಗ

    ಬೆಂಗಳೂರು: ದೇಶದ ಅತಿದೊಡ್ಡ ಬಿಯರ್ ಉತ್ಪಾದನಾ ಸಂಸ್ಥೆ ಹಾಗೂ ಹೈನೆಕನ್‌ ಕಂಪನಿಯ ಭಾಗವಾಗಿರುವ ಬೆಂಗಳೂರು ಮೂಲದ 'ಯುನೈಟೆಡ್ ಬ್ರೂವರೀಸ್ ಲಿಮಿಟೆಡ್' (ಯುಬಿಎಲ್‌), ಕರ್ನಾಟಕದ ಆರ್ಥಿಕತೆ ಮತ್ತು ಉದ್ಯೋಗ ಸೃಷ್ಟಿಯಲ್ಲಿ ಮಹತ್ವದ ಪಾತ್ರ ವಹಿಸುತ್ತಿದೆ...

    Most Popular

    Recent Comments

    Home
    Play
    Notification
    Search