ನವೆಂಬರ್ 23ರ ಭಾನುವಾರ ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ ಭಾರತದ ಕ್ರಿಕೆಟ್ ಆಟಗಾರ್ತಿ ಸ್ಮೃತಿ ಮಂಧಾನ ಹಾಗೂ ಸಂಗೀತ ನಿರ್ದೇಶಕ ಪಲಾಶ್ ಮುಚ್ಚಲ್ ವೈವಾಹಿಕ ಜೀವನಕ್ಕೆ ಕಾಲಿಡಬೇಕಿತ್ತು. ಆದರೆ ಅಂದು ಬೆಳಗ್ಗೆ ತಿಂಡಿ ಮುಗಿಸಿದ ಬಳಿಕ ಸ್ಮೃತಿ ಮಂಧಾನ ತಂದೆ ಶ್ರೀನಿವಾಸ್ ಮಂಧಾನ ಅನಾರೋಗ್ಯದಿಂದ ಕುಸಿದುಬಿದ್ದಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ.
ಈ ಕಾರಣಕ್ಕೆ ಸ್ಮೃತಿ ಮಂಧಾನ ಹಾಗೂ ಪಲಾಶ್ ಮುಚ್ಚಲ್ ವಿವಾಹ ಮುಂದೂಡಲ್ಪಟ್ಟಿದ್ದು, ಇದರ ಮಾರನೇ ದಿನವೇ ಪಲಾಶ್ ಮುಚ್ಚಲ್ ಸಹ ಅನಾರೋಗ್ಯಕ್ಕೊಳಗಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ವರದಿಯಾಗಿದೆ. ಹೀಗೆ ವಿವಾಹ ಕುಟುಂಬ ಮುಖ್ಯಸ್ಥ ತಂದೆಯ ಅನಾರೋಗ್ಯ ಕಾರಣದಿಂದಾಗಿ ಮುಂದೂಡಲ್ಪಟ್ಟಿದ್ದು, ಇದರ ಬೆನ್ನಲ್ಲೇ ಸ್ಮೃತಿ ಮಂಧಾನ ಭಾವಿ ಪತಿ ಪಲಾಶ್ ನೃತ್ಯ ಸಂಯೋಜಕಿ ಜತೆ ಇದ್ದಾಗ ಸಿಕ್ಕಿಬಿದ್ದಿದ್ದಾರೆ, ವಿವಾಹ ಮುಂದೂಡಲು ಇದೂ ಸಹ ಕಾರಣ ಎಂದು ಆರೋಪಗಳು ಕೇಳಿಬರುತ್ತಿವೆ.
ಅಷ್ಟೇ ಅಲ್ಲದೇ ಇದೀಗ ಎಕ್ಸ್ ವೇದಿಕೆಯಲ್ಲಿ ಪಲಾಶ್ ಮುಚ್ಚಲ್ ಮೇರಿಡಿಸ್ಕೊಟ ಎಂಬ ಯುವತಿ ಜತೆ ಚಾಟ್ ಮಾಡಿದ್ದಾರೆ ಎನ್ನಲಾದ ಸ್ಕ್ರೀನ್ಶಾಟ್ ವೈರಲ್ ಆಗಿವೆ. ಈ ಫೋಟೊಗಳಲ್ಲಿ ಯುವತಿಯನ್ನು ಡೇಟಿಂಗ್ಗೆ ಕರೆದಿರುವ ಪಲಾಶ್ ಮುಚ್ಚಲ್ ಸ್ಮೃತಿ ಮಂಧಾನ ಜತೆ ನೀವು ಲವ್ನಲ್ಲಿದ್ದೀರ ಅಲ್ಲವೇ ಎಂದು ಯುವತಿ ಪ್ರಶ್ನಿಸಿದಾಗ ಆಕೆ ಸಿಗುವುದೇ ಮೂರ್ನಾಲ್ಕು ತಿಂಗಳಿಗೊಮ್ಮೆ, ಈ ಹಿಂದೆ ಆಕೆಯ ಜತೆ ತೆರಳಿ ಬೆಂಬಲ ನೀಡುತ್ತಿದ್ದೆ, ಆದರೆ ಈಗ ಅದು ತಲೆನೋವಾಗಿಬಿಟ್ಟಿದೆ ಎಂದಿದ್ದಾನೆ.
ಹೀಗೆ ಪಲಾಶ್ ಮುಚ್ಚಲ್ರದ್ದು ಎನ್ನಲಾದ ಹಲವು ಚಾಟ್ಗಳನ್ನು ನಾನೇ ಮಾಡಿದ್ದು ಎಂದು ಆ ಯುವತಿ ತನ್ನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಬರೆದುಕೊಂಡಿದ್ದು, ಸದ್ಯ ಮದುವೆ ಮುರಿದು ಬೀಳಲು ಕಾರಣಳಾದ ನೃತ್ಯಗಾರ್ತಿ ತಾನೇ ಎಂದು ಎಲ್ಲರೂ ತಿಳಿದುಕೊಳ್ಳುತ್ತಿದ್ದಾರೆ, ಆದರೆ ಅದು ತಾನಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ. ಅಲ್ಲದೇ ಪಲಾಶ್ ತನ್ನ ಜತೆ ಚಾಟ್ ಮಾಡಿದ್ದು ಇದೇ ವರ್ಷದ ಮೇ ತಿಂಗಳಿನಲ್ಲಿ, ಆತ ಯಾವ ರೀತಿಯ ಮನುಷ್ಯ ಎಂಬುದನ್ನು ತಿಳಿದುಕೊಳ್ಳಲು ಚಾಟ್ ಮಾಡಿದೆ, ಆದರೆ ತಾನು ಆತನನ್ನು ಭೇಟಿ ಮಾಡಲಿಲ್ಲ, ತಾನು ಸ್ಮೃತಿ ಮಂಧಾನ ಅಭಿಮಾನಿ, ಈ ಸಂದರ್ಭದಲ್ಲಿ ಈ ಸ್ಪಷ್ಟನೆ ನೀಡುವ ಅಗತ್ಯವಿದ್ದ ಕಾರಣ ಎಲ್ಲವನ್ನೂ ಬಿಚ್ಚಿಟ್ಟೆ ಎಂದು ಬರೆದುಕೊಂಡಿದ್ದಾಳೆ.
ಸದ್ಯ ಇಂತಹ ಬೃಹತ್ ಆರೋಪಗಳು ಕೇಳಬರುತ್ತಿದ್ದು, ಸ್ಮೃತಿ ಮಂಧಾನ ಮುಂದಿನ ನಡೆ ಕಡೆ ಇದೀಗ ಎಲ್ಲರ ಚಿತ್ತ ನೆಟ್ಟಿದೆ.
ಮೈಸೂರು: ಸರ್ಕಾರಿ ಶಾಲೆಯ ಮಕ್ಕಳಿಂದ ಶೌಚಾಲಯ ಸ್ವಚ್ಛತೆ
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


