ಇಂದು ವಿಶ್ವದಾದ್ಯಂತ ಸಂಭ್ರಮದ ಕ್ರಿಸ್‌ಮಸ್ ಆಚರಣೆ ಜರುಗಿದೆ. ರಜಾ ದಿನವಾದ ಇಂದು ವಿವಿಧ ಭಾಷೆಯ ಹಲವು ಸಿನಿಮಾಗಳು ಬಿಡುಗಡೆಗೊಂಡಿದ್ದು ಸಿನಿ ರಸಿಕರ ಜೋಶ್ ಅನ್ನು ದುಪ್ಪಟ್ಟು ಮಾಡಿವೆ.
ಇನ್ನು ಸೆಲೆಬ್ರಿಟಿಗಳು ಹಬ್ಬದ ಪ್ರಯುಕ್ತ ತಮ್ಮ ಚಿತ್ರದ ಪೋಸ್ಟರ್ ಹಾಗೂ ಅಪ್‌ಡೇಟ್‌ಗಳನ್ನು ಹಂಚಿಕೊಳ್ಳುತ್ತಿದ್ದರೆ, ಅತ್ತ ತಮಿಳು ನಟಿ ತ್ರಿಶಾ ಮಾತ್ರ ಸಾಮಾಜಿಕ ಜಾಲತಾಣದಲ್ಲಿ ಕಣ್ಣೀರಿಟ್ಟಿದ್ದಾರೆ.
“ನನ್ನ ಮಗನಾದ ಝೋರೋ ಕ್ರಿಸ್‌ಮಸ್ ದಿನವೇ ಅಗಲಿದ್ದಾನೆ” ಎಂದು ತಮ್ಮ ಸಾಕು ನಾಯಿ ಸಾವಿನ ಬಗ್ಗೆ ಹಂಚಿಕೊಂಡಿದ್ದಾರೆ.
“ನನ್ನ ಮಗ ಝೊರೋ ಕ್ರಿಸ್‌ಮಸ್ ದಿನವಾದ ಇಂದು ಅಗಲಿದ್ದಾನೆ. ನನ್ನನ್ನು ಹತ್ತಿರದಿಂದ ಬಲ್ಲವರಿಗೆ ಝೊರೋ ಇಲ್ಲದ ದಿನ ಝೀರೋ ಎಂದು ಗೊತ್ತಿದೆ. ನಾನು ಹಾಗೂ ನನ್ನ ಕುಟುಂಬ ಹೃದಯ ಒಡೆದು ಹೋಗಿದೆ. ಹಾಗೇ ಶಾಕ್‌ನಲ್ಲಿ ಇದ್ದೇವೆ. ಹೀಗಾಗಿ ಕೆಲಸದಿಂದ ಕೆಲವು ದಿನಗಳು ದೂರು ಇಳಿಯಲಿದ್ದೇನೆ. ಹಾಗೇ ಯಾರ ಕೈಗೂ ಸಿಗುವುದಿಲ್ಲ” ಎಂದು ಎಕ್ಸ್ ಖಾತೆಯಲ್ಲಿ ತಿಳಿಸಿದ್ದಾರೆ.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


