Sunday, September 20, 2026
spot_img
More
    spot_img
    HomeTop Storyಮುನಿರತ್ನ ತಲೆಗೆ ಕೆಮಿಕಲ್‌ ಮಾದರಿ ಪದಾರ್ಥದಿಂದ ಹೊಡೆದಿದ್ದಾರೆ: ಡಾ. ಸಿ.ಎನ್ ಮಂಜುನಾಥ್‌

    ಮುನಿರತ್ನ ತಲೆಗೆ ಕೆಮಿಕಲ್‌ ಮಾದರಿ ಪದಾರ್ಥದಿಂದ ಹೊಡೆದಿದ್ದಾರೆ: ಡಾ. ಸಿ.ಎನ್ ಮಂಜುನಾಥ್‌

    ಬೆಂಗಳೂರು: ಬಿಜೆಪಿ ಶಾಸಕ ಮುನಿರತ್ನ ಮೇಲೆ ಮೊಟ್ಟೆ ಎಸೆತ ಪ್ರಕರಣವೂ ಒಳ್ಳೆಯ ರಾಜಕಾರಣದ ಲಕ್ಷಣವಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಆರೋಗ್ಯಕರ ರಾಜಕೀಯ ಮಾಡಬೇಕು ಎಂದು ಸಂಸದ ಡಾ.ಸಿ.ಎನ್‌. ಮಂಜುನಾಥ್‌ ಬೇಸರ ವ್ಯಕ್ತಪಡಿಸಿದ್ದಾರೆ.

    Advertisement

    ಮೊಟ್ಟೆ ಎಸೆತದಿಂದ ಗಂಭೀರ ಗಾಯಗೊಂಡಿರುವ ಶಾಸಕ ಮುನಿರತ್ನ ಕೆ.ಸಿ.ಜನರಲ್‌ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಾಗಿದ್ದಾರೆ. ಆಸ್ಪತ್ರೆಗೆ ಭೇಟಿ ನೀಡಿದ ಸಂಸದ ಸಿ.ಎನ್.ಮಂಜುನಾಥ್‌ ಅವರುನ ಮುನಿರತ್ನ ಆರೋಗ್ಯ ವಿಚಾರಿಸಿದ್ದಾರೆ.

    ಬಳಿಕ ಮಾಧ್ಯಮಗಳೊಂದಿಗೆ ಪ್ರತಿಕ್ರಿಯೆ ನೀಡಿದ ಅವರು, ನಾನು ಮುನಿರತ್ನ ಅವರನ್ನು ಪರೀಕ್ಷಿಸಿದ್ದೇನೆ. ಸಾಮಾನ್ಯವಾಗಿ ತಲೆಗೆ ಪೆಟ್ಟು ಬಿದ್ದಾಗ ವಾಂತಿ ಮತ್ತು ತಲೆ ಸುತ್ತು ಬರುವುದು ಸಹಜ. ಮುನಿರತ್ನ ಅವರ ತಲೆಯ ಹಿಂಭಾಗದಲ್ಲಿ ತೀವ್ರ ಪೆಟ್ಟು ಬಿದ್ದಿದೆ. ಕೆಮಿಕಲ್‌ ಮಾದರಿ ಪದಾರ್ಥದಿಂದ ಹೊಡೆದಿದ್ದಾರೆ. ಹೀಗಾಗಿ ಫಿಜಿ಼ಶಿಯನ್‌ಗೆ ಸಿಟಿ ಸ್ಕ್ಯಾನ್‌ ಮಾಡಲು ತಿಳಿಸಿದ್ದೇನೆ. ಸ್ಕ್ಯಾನ್‌ ಮಾಡಿದ ಬಳಿಕ ಎಲ್ಲಾ ಗೊತ್ತಾಗುತ್ತದೆ ಎಂದು ಹೇಳಿದರು.

    ನಮ್ಮ ದೇಶಕ್ಕೆ ಸಂವಿಧಾನ ಬಂದು 75 ವರ್ಷಗಳು ಕಳೆದಿವೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಂವಿಧಾನಕ್ಕೆ ಗೌರವ ನೀಡಬೇಕು. ಚುನಾವಣೆಯಲ್ಲಿ ಸ್ಪರ್ಧಾತ್ಮಕವಾಗಿದ್ದು, ಸೋಲು-ಗೆಲುವು ಸಹಜ. ಯಾರೇ ಆಗಲಿ ಸಂವಿಧಾನಕ್ಕೆ ಬೆಲೆ ಮತ್ತು ಗೌರವ ನೀಡುವಂತೆ ನಡೆದುಕೊಳ್ಳಬೇಕು. ಹೀಗಿದ್ದರೂ ಇಂತಹ ಘಟನೆಗಳು ನಡೆದಿದೆ ಎಂದರೆ ಇದು ಬಹಳ ಖಂಡನೀಯವಾಗಿದೆ. ಎಲ್ಲೋ ಒಂದು ಕಡೆ ಸರ್ಕಾರದ ವ್ಯವಸ್ಥೆ ಹಾದಿ ತಪ್ಪುತ್ತಿದೆ ಎಂದು ಹೇಳಿದ್ದಾರೆ.


    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe to get the latest posts sent to your email.

    Leave a Reply

    Related News

    ಎಸ್‌ಐಆರ್ ಅಕ್ರಮ: ಎನ್‌ಡಿಎ ನಿಯೋಗ ಮುಖ್ಯ ಚುನಾವಣಾ ಆಯುಕ್ತರಿಗೆ ದೂರು

    ಕರ್ನಾಟಕದಲ್ಲಿ ಎಸ್‌ಐಆರ್ ಪ್ರಕ್ರಿಯೆ ದುರುಪಯೋಗದ ಆರೋಪದೊಂದಿಗೆ ಕುಮಾರಸ್ವಾಮಿ ಮತ್ತು ಪ್ರಲ್ಹಾದ ಜೋಶಿ ನೇತೃತ್ವದ ಎನ್‌ಡಿಎ ನಿಯೋಗ ನವದೆಹಲಿಯಲ್ಲಿ ಮುಖ್ಯ ಚುನಾವಣಾ ಆಯುಕ್ತರಿಗೆ ದಾಖಲೆ ಸಮೇತ ದೂರು ಸಲ್ಲಿಸಿತು.

    ಮಾದಪಟ್ಟಣ ಕ್ವಾರಿ ದುರಂತ: ಅಶೋಕ ತಲಾ ₹50 ಲಕ್ಷ ಪರಿಹಾರ ಆಗ್ರಹ

    ಬೆಂಗಳೂರು ಮಾದಪಟ್ಟಣ ಕ್ವಾರಿಯಲ್ಲಿ ಬಂಡೆ ಬಿದ್ದು 7 ಕಾರ್ಮಿಕರು ಮೃತಪಟ್ಟ ಘಟನೆಗೆ ಪ್ರತಿಪಕ್ಷ ನಾಯಕ ಆರ್.ಅಶೋಕ ರಾಜ್ಯ ಸರ್ಕಾರದ ನಿರ್ಲಕ್ಷ್ಯವೇ ಕಾರಣ ಎಂದು ದೂರಿ ತಲಾ ₹50 ಲಕ್ಷ ಪರಿಹಾರ ಒತ್ತಾಯಿಸಿದ್ದಾರೆ.

    Most Popular

    Recent Comments

    Home
    Play
    Notification
    Search

    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe now to keep reading and get access to the full archive.

    Continue reading