ಸ್ಯಾಂಡಲ್ವುಡ್ ಕಿಂಗ್ ಶಿವಣ್ಣ ಅನಾರೋಗ್ಯಕ್ಕೊಳಗಾಗಿದ್ದು ಶಸ್ತ್ರ ಚಿಕಿತ್ಸೆಗಾಗಿ ಅಮೇರಿಕಾಗೆ ಪ್ರಯಾಣದ ಬೆಳೆಸಿದ್ದಾರೆ. ಶಿವರಾಜಕುಮಾರ್ ಶಸ್ತ್ರ ಚಿಕಿತ್ಸೆ ನಿನ್ನೆ ( ಡಿಸೆಂಬರ್ 24 ) ಸಂಜೆ 6 ಗಂಟೆಗೆ ನಿಗದಿಯಾಗಿತ್ತು.
ಸದ್ಯ ಶಸ್ತ್ರಚಿಕಿತ್ಸೆ ಕುರಿತು ಶಿವರಾಜಕುಮಾರ್ ಕುಟುಂಬಸ್ಥರು ಹಾಗೂ ಆಪ್ತ ವಲಯ ಮಾಹಿತಿ ಹಂಚಿಕೊಂಡಿದ್ದು, ನಾಲ್ಕರಿಂದ ಐದು ಗಂಟೆಗಳ ಕಾಲ ನಡೆದ ಈ ಶಸ್ತ್ರ ಚಿಕಿತ್ಸೆ ಯಶಸ್ವಿಯಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಫಲಿಸಿದ ಅಭಿಮಾನಿಗಳ ಪ್ರಾರ್ಥನೆ
ಶಿವರಾಜ್‌ಕುಮಾರ್ ಅವರ ಆಪರೇಷನ್ ಯಶಸ್ವಿಯಾಗಿ ಆಗಬೇಕು ಎಂದು ಅವರ ಅಭಿಮಾನಿಗಳು ಹಾಗೂ ಕುಟುಂಬಸ್ಥರು ಹೋಮ – ಹವನ ಹಾಗೂ ಪೂಜೆಗಳನ್ನು ಮಾಡಿದ್ದರು. ಕರ್ನಾಟಕದ ವಿವಿಧ ಭಾಗದಲ್ಲಿ ಅನ್ನಸಂತರ್ಪಣೆ ಸಹ ಮಾಡಲಾಗಿತ್ತು. ರಾಜ್ಯದ ನಟ, ನಟಿಯರು ಸಹ ಶಿವಣ್ಣ ಆರೋಗ್ಯವಾಗಿ ಹಿಂದಿರುಗಬೇಕು ಎಂದು ಪ್ರಾರ್ಥನೆ ಮಾಡಿದ್ದರು. ಅಲ್ಲದೆ ದೇಶದ ಹಲವು ಗಣ್ಯರು ಹಾಗೂ ಸಿನಿಮಾ ನಟ – ನಟಿಯರು ಶಿವರಾಜ್ ಕುಮಾರ್ ಅವರಿಗೆ ಧೈರ್ಯ ತುಂಬಿದ್ದರು. ಬೇಗ ಗುಣಮುಖರಾಗಿ ಬರಲಿ ಎಂದು ಆಶಿಸಿದ್ದರು. ಈ ಎಲ್ಲಾ ಪ್ರಾರ್ಥನೆ ಇದೀಗ ಈಡೇರಿದ್ದು ಶಿವಣ್ಣ ಅಭಿಮಾನಿಗಳು ಸಂತಸ ವ್ಯಕ್ತಪಡಿಸಿದ್ದಾರೆ.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


