ಬೆಂಗಳೂರು: ಭಾರತೀಯ ಮಾರುಕಟ್ಟೆಯಲ್ಲಿ ಅಮೂಲ್ಯ ಲೋಹಗಳ ಬೆಲೆ ಏರಿಕೆಯ ಮುಂದುವರಿದಿದ್ದು, ದಿನದಿಂದ ದಿನಕ್ಕೆ ಹೊಸ ದಾಖಲೆಗಳನ್ನು ನಿರ್ಮಿಸುತ್ತಿದೆ. ಪ್ರಸ್ತುತ ಚಿನ್ನ ಮತ್ತು ಬೆಳ್ಳಿ ಬೆಲೆಗಳು ಸಾಮಾನ್ಯ ಜನರ ಕಲ್ಪನೆಗೂ ಮೀರಿ ಏರುತ್ತಿರುವುದು ಆಭರಣ ಪ್ರಿಯರಿಗೆ ಹಾಗೂ ವ್ಯಾಪಾರಸ್ಥರಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.
ಅಮೂಲ್ಯ ಲೋಹಗಳ ಬೆಲೆ ಏರಿಕೆಗೆ ಸದ್ಯ ಇಂದು (ಗುರುವಾರ, ಡಿಸೆಂಬರ್ 25) ಚಿನ್ನದ ಬೆಲೆಯಲ್ಲಿ ಅಲ್ಪ ಪ್ರಮಾಣದ ಏರಿಕೆ ಕಂಡುಬಂದಿದೆ. ನಿನ್ನೆ ಗ್ರಾಮ್‌ಗೆ 30 ರೂಪಾಯಿ ಏರಿಕೆಯಾಗಿದ್ದ ಚಿನ್ನದ ಬೆಲೆ, ಇಂದೂ ಕೂಡ ಅದೇ ಪ್ರಮಾಣದಲ್ಲಿ ಹೆಚ್ಚಳವಾಗಿದೆ.ಬೆಂಗಳೂರಿನಲ್ಲಿ 10 ಗ್ರಾಮ್ ಚಿನ್ನದ ಬೆಲೆ ₹1,27,650 ತಲುಪಿದೆ.ಪ್ರತಿ ಗ್ರಾಮ್‌ಗೆ ₹13,925 ರಂತಿದ್ದು, ಇಂದು 32 ರೂಪಾಯಿ ಏರಿಕೆಯಾಗಿದೆ. ಇದರೊಂದಿಗೆ 10 ಗ್ರಾಮ್ ಶುದ್ಧ ಚಿನ್ನದ ಬೆಲೆ ಬರೋಬ್ಬರಿ ₹1,39,250 ಕ್ಕೆ ಏರಿದೆ.
ಬಂಗಾರದ ಬೆಲೆ ಏರಿಕೆಯ ಬೆನ್ನಲ್ಲೇ ಬಿಳಿ ಲೋಹ ಬೆಳ್ಳಿಯೂ ಕೂಡ ತನ್ನ ಮೌಲ್ಯವನ್ನು ಹೆಚ್ಚಿಸಿಕೊಂಡಿದೆ. ಬೆಳ್ಳಿ ಬೆಲೆಯಲ್ಲಿ ಒಂದೇ ದಿನದಲ್ಲಿ 1,000 ರೂಪಾಯಿ ಜಿಗಿತ ಕಂಡಿದ್ದು, ಹೂಡಿಕೆದಾರರನ್ನು ಬೆರಗುಗೊಳಿಸಿದೆ.ಇಂದು ಪ್ರತಿ ಗ್ರಾಮ್ ಬೆಳ್ಳಿ ಬೆಲೆ ₹234 ರಷ್ಟಿದ್ದು, ಕೆಜಿ ಬೆಳ್ಳಿ ಬೆಲೆ ₹2,34,000 ಕ್ಕೆ ತಲುಪಿದೆ.
ಬೆಂಗಳೂರು ಸೇರಿದಂತೆ ಪ್ರಮುಖ ನಗರಗಳಲ್ಲಿ 24 ಕ್ಯಾರೆಟ್ ಚಿನ್ನದ ಬೆಲೆ
ಬೆಂಗಳೂರು ₹1,39,250
ನಾಗ್ಪುರ ₹1,39,250
ಮುಂಬೈ ₹1,39,250
ಚೆನ್ನೈ ₹1,39,250
ಕೋಲ್ಕತ್ತಾ ₹1,39,250
ಪಾಟ್ನಾ ₹1,39,300
ಸೂರತ್ ₹1,39,300
ಚಂಡೀಗಢ ₹1,39,400
ಲಕ್ನೋ ₹1,39,400
ಇಂದಿನ ಮಾರುಕಟ್ಟೆ ದರ
ಚಿನ್ನದ ದರ (ಪ್ರತಿ 1 ಗ್ರಾಮ್‌ಗೆ):
24 ಕ್ಯಾರಟ್ (ಅಪ್ಪಟ ಚಿನ್ನ): ₹13,925
22 ಕ್ಯಾರಟ್ (ಆಭರಣ ಚಿನ್ನ): ₹12,765
18 ಕ್ಯಾರಟ್ (ಸಣ್ಣ ಆಭರಣಗಳಿಗೆ): ₹10,444
ಬೆಳ್ಳಿ ದರ:
ಪ್ರತಿ 1 ಗ್ರಾಮ್‌ಗೆ: ₹234
ಪ್ರತಿ 1 ಕೆಜಿಗೆ: ₹2,34,000
ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ
24 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 13,925 ರೂ
22 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 12,765 ರೂ
ಬೆಳ್ಳಿ ಬೆಲೆ 1 ಗ್ರಾಂಗೆ: 234 ರೂ
ಚಿತ್ರದುರ್ಗದಲ್ಲಿ ಭೀಕರ ಬಸ್ ದುರಂತ;ಸೀಬರ್ಡ್ ಬಸ್-ಲಾರಿ ಭೀಕರ ಡಿಕ್ಕಿ, 17 ಮಂದಿ ಸಜೀವ ದಹನ!
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


