Friday, November 6, 2026
spot_img
More
    spot_img
    HomeEntertainmentRoyal Movie Collection: ಕೆಟ್ಟ ವಿಮರ್ಶೆಗಳ ನಡುವೆ ದಿನಕರ್‌ ನಿರ್ದೇಶನದ ʼರಾಯಲ್‌ʼ ಮೊದಲ 2 ದಿನ...

    Royal Movie Collection: ಕೆಟ್ಟ ವಿಮರ್ಶೆಗಳ ನಡುವೆ ದಿನಕರ್‌ ನಿರ್ದೇಶನದ ʼರಾಯಲ್‌ʼ ಮೊದಲ 2 ದಿನ ಗಳಿಸಿದ್ದೆಷ್ಟು?

    ದಿನಕರ್‌ ತೂಗುದೀಪ ಏಳು ವರ್ಷಗಳ ಬಳಿಕ ನಿರ್ದೇಶನದತ್ತ ಮುಖ ಮಾಡಿದ್ದು, ರಾಯಲ್‌ ಎಂಬ ಫ್ಯಾಮಿಲಿ ಎಂಟರ್‌ಟೈನರ್‌ ಜತೆ ಪ್ರೇಕ್ಷಕರ ಮುಂದೆ ಬಂದಿದ್ದಾರೆ. ಚಿತ್ರ ಮೊನ್ನೆ (ಜನವರಿ 24) ಬಿಡುಗಡೆಗೊಂಡಿದ್ದು, ಒಳ್ಳೆಯ ರೆಸ್ಪಾನ್ಸ್‌ ಪಡೆದುಕೊಳ್ಳುತ್ತಿದೆ.

    ಇನ್ನು ರಾಯಲ್‌ ಚಿತ್ರದಲ್ಲಿ ನಾಯಕನಾಗಿ ವಿರಾಟ್‌ ಹಾಗೂ ನಾಯಕಿಯಾಗಿ ಸಂಜನಾ ಆನಂದ್‌ ಅಭಿನಯಿಸಿದ್ದು, ಜಯಣ್ಣ ಬಂಡವಾಳ ಹೂಡಿದ್ದಾರೆ. ಚಿತ್ರ ಬಿಡುಗಡೆಗೊಂಡ ದಿನವೇ ಬುಕ್‌ಮೈಶೋನಲ್ಲಿ ಚಿತ್ರಕ್ಕೆ ಅಪಾರವಾದ ನೆಗೆಟಿವ್‌ ವಿಮರ್ಶೆಗಳು ಹರಿದುಬಂದ ಕಾರಣ ಮೊದಲ ದಿನ ಚಿತ್ರದ ರೇಟಿಂಗ್‌ ಹತ್ತಕ್ಕೆ ಕೇವಲ 3 ಇತ್ತು.

    ಹೀಗೆ ಬೇಕಂತಲೇ ಚಿತ್ರಕ್ಕೆ ಕಡಿಮೆ ರೇಟಿಂಗ್‌ ಹಾಕುವ ಮೂಲಕ ಚಿತ್ರಕ್ಕೆ ಅಪಪ್ರಚಾರ ಮಾಡುವ ಕೆಲಸವನ್ನು ಮಾಡಿದ್ದರು ಕಿಡಿಗೇಡಿಗಳು. ಇದರ ಕುರಿತು ಸ್ವತಃ ದಿನಕರ್‌ ಸಹ ಚಿತ್ರಮಂದಿರವೊಂದರಲ್ಲಿ ಮಾತನಾಡಿ ದರ್ಶನ್‌ ಮೇಲಿನ ಕೋಪವನ್ನು ನನ್ನ ಮೇಲೆ ತೋರಿಸುತ್ತಿದ್ದಾರೆ ಎಂದು ಬೇಸರ ಹೊರಹಾಕಿದ್ದರು.

    ಇಷ್ಟೆಲ್ಲಾ ವಿರೋಧವನ್ನು ಎದುರಿಸಿದ ರಾಯಲ್‌ ಮೊದಲ ದಿನ 19 ಲಕ್ಷ ರೂಪಾಯಿ ಗ್ರಾಸ್‌ ಕಲೆಕ್ಷನ್ ಮಾಡಿದ್ದು, ಎರಡನೇ ದಿನ 21 ಲಕ್ಷ ರೂಪಾಯಿ ಗ್ರಾಸ್‌ ಕಲೆಕ್ಷನ್‌ ಮಾಡಿದೆ. ಈ ಮೂಲಕ ರಾಯಲ್‌ ಚಿತ್ರ ಮೊದಲ ಎರಡು ದಿನಗಳಲ್ಲಿ 39 ಲಕ್ಷ ರೂಪಾಯಿ ಗ್ರಾಸ್‌ ಕಲೆಕ್ಷನ್‌ ಮಾಡಿದೆ ಎಂದು ಜನಪ್ರಿಯ ಬಾಕ್ಸ್‌ ಆಫೀಸ್‌ ಟ್ರ್ಯಾಕಿಂಗ್‌ ವೆಬ್‌ಸೈಟ್‌ ಸ್ಯಾಕ್‌ನಿಕ್‌ ವರದಿ ಮಾಡಿದೆ.


    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe to get the latest posts sent to your email.

    LEAVE A REPLY

    Related News

    ಮಹಾಲಯ ಅಮಾವಾಸ್ಯೆ 2026: ಅಕ್ಟೋಬರ್ 10ರಂದು ಆಚರಣೆ; ಪಿತೃಪೂಜೆಯ ಮಹತ್ವವೇನು?

    ಹಿಂದೂ ಧರ್ಮದಲ್ಲಿ ಮಹಾಲಯ ಅಮಾವಾಸ್ಯೆಗೆ ವಿಶೇಷ ಸ್ಥಾನವಿದೆ. ಪಿತೃಪಕ್ಷದ ಕೊನೆಯ ದಿನವಾದ ಈ ಸಂದರ್ಭದಲ್ಲಿ ಪೂರ್ವಜರನ್ನು ಸ್ಮರಿಸಿ, ಅವರ ಆತ್ಮಕ್ಕೆ ಶಾಂತಿ ಕೋರಿ ವಿವಿಧ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಲಾಗುತ್ತದೆ. ಈ ದಿನ ಶ್ರಾದ್ಧ,...

    ಕರ್ನಾಟಕಕ್ಕೆ ಗುಡ್‌ನ್ಯೂಸ್: ಯುಬಿಯಿಂದ ₹4,500 ಕೋಟಿ ಕೊಡುಗೆ, 36 ಸಾವಿರಕ್ಕೂ ಹೆಚ್ಚು ಉದ್ಯೋಗ

    ಬೆಂಗಳೂರು: ದೇಶದ ಅತಿದೊಡ್ಡ ಬಿಯರ್ ಉತ್ಪಾದನಾ ಸಂಸ್ಥೆ ಹಾಗೂ ಹೈನೆಕನ್‌ ಕಂಪನಿಯ ಭಾಗವಾಗಿರುವ ಬೆಂಗಳೂರು ಮೂಲದ 'ಯುನೈಟೆಡ್ ಬ್ರೂವರೀಸ್ ಲಿಮಿಟೆಡ್' (ಯುಬಿಎಲ್‌), ಕರ್ನಾಟಕದ ಆರ್ಥಿಕತೆ ಮತ್ತು ಉದ್ಯೋಗ ಸೃಷ್ಟಿಯಲ್ಲಿ ಮಹತ್ವದ ಪಾತ್ರ ವಹಿಸುತ್ತಿದೆ...

    Most Popular

    Recent Comments

    Home
    Play
    Notification
    Search