ಕ್ಯಾಮೆರಾ, ಲೈಟ್ಸ್, ಮೇಕಪ್ ಜತೆಗಿದ್ದ ಸಿನಿ ಕಲಾವಿದರು ಬ್ಯಾಟ್, ಬಾಲ್ ಕೈಗೆತ್ತಿಕೊಂಡು ಮೈದಾನದಲ್ಲಿ ಮತ್ತೊಮ್ಮೆ ಸೆಣಸಾಡಲು ಮುಂದಾಗಿದ್ದು, ಸೆಲೆಬ್ರಿಟಿ ಕ್ರಿಕೆಟ್ ಲೀಗ್‌ನ 11ನೇ ಆವೃತ್ತಿ ಇದೇ ಫೆಬ್ರವರಿ 8ರಿಂದ ಆರಂಭಗೊಳ್ಳಲಿದೆ.
ಭಾರತದ ವಿವಿಧ ಚಿತ್ರರಂಗಗಳ ಒಟ್ಟು ಏಳು ತಂಡಗಳು ಈ ಟೂರ್ನಿಯಲ್ಲಿ ಭಾಗವಹಿಸಲಿದ್ದು, ಸದ್ಯ ಕರ್ನಾಟಕ ಬುಲ್ಡೋಜರ್ಸ್ ಟೂರ್ನಿಗಾಗಿ ತನ್ನ ತಂಡವನ್ನು ಪ್ರಕಟಿಸಿದೆ. ಈ ಬಾರಿಯೂ ಕಿಚ್ಚ ಸುದೀಪ್ ಸಾರಥ್ಯದಲ್ಲಿ ಕಣಕ್ಕಿಳಿಯಲಿರುವ ಕರ್ನಾಟಕ ಬುಲ್ಡೋಜರ್ಸ್ ತಂಡದಲ್ಲಿ ಯಾರೆಲ್ಲಾ ಇದ್ದಾರೆ ಎಂಬ ಮಾಹಿತಿ ಮುಂದಿದೆ.
ಕರ್ನಾಟಕ ಬುಲ್ಡೋಜರ್ಸ್ ಸಂಪೂರ್ಣ ಸ್ಕ್ವಾಡ್: ಸುದೀಪ್ (ನಾಯಕ), ಗಣೇಶ್, ಡಾರ್ಲಿಂಗ್ ಕೃಷ್ಣ, ಕಾರ್ತಿಕ್ ಜಯರಾಮ್, ಸುನಿಲ್ ರಾವ್, ರಾಜೀವ್ ಹನು, ಚಂದನ್ ಕುಮಾರ್, ಪ್ರತಾಪ್ ನಾರಾಯಣ್, ನಿರುಪ್ ಭಂಡಾರಿ, ಅನುಪ್ ಭಂಡಾರಿ, ಕರಣ್ ಆರ್ಯನ್, ಮಂಜುನಾಥ್ ಗೌಡ, ಸಾಗರ್ ಗೌಡ, ಅಲಕ್‌ನಂದ ಮತ್ತು ಸಿದ್ದು ಮೂಲಿಮನಿ.
ಸಪೋರ್ಟ್ ಸ್ಟಾಫ್: ರಿತೇಶ್ ಭಟ್ಕಳ್ (ಹೆಡ್ ಕೋಚ್), ಎನ್‌ಸಿ ಅಯ್ಯಪ್ಪ (ಅಸಿಸ್ಟೆಂಟ್ ಕೋಚ್), ರಂಜನ್ ಮ್ಯಾನುಯೆಲ್ (ಅಸಿಸ್ಟೆಂಟ್ ಕೋಚ್), ಅಜಯ್ (ಫಿಸಿಯೊ), ಮಯೂಖ ದೇವಾಂಗಿ (ಎವಿಪಿ) ಮತ್ತು ಹೇಮಂತ್ (ಮ್ಯಾನೇಜರ್)
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


