Thursday, November 5, 2026
spot_img
More
    spot_img
    HomeStateBBK 11: ಬಿಗ್‌ಬಾಸ್‌ನಿಂದ ಎಲಿಮಿನೇಟ್‌ ಆದ ಭವ್ಯಾ ಗೌಡಗೆ ಸಿಕ್ಕ ಹಣವೆಷ್ಟು? ಪಡೆದ ಮತಗಳೆಷ್ಟು?

    BBK 11: ಬಿಗ್‌ಬಾಸ್‌ನಿಂದ ಎಲಿಮಿನೇಟ್‌ ಆದ ಭವ್ಯಾ ಗೌಡಗೆ ಸಿಕ್ಕ ಹಣವೆಷ್ಟು? ಪಡೆದ ಮತಗಳೆಷ್ಟು?

    ಬಿಗ್‌ಬಾಸ್‌ ಸೀಸನ್‌ 11 ಮುಕ್ತಾಯದ ಹಂತಕ್ಕೆ ಬಂದು ತಲುಪಿದ್ದು, ಫಿನಾಲೆ ವಾರಕ್ಕೆ ತಲುಪಿದ್ದ ಭವ್ಯಾ ಗೌಡ ನಿನ್ನೆ (ಜನವರಿ 25) ಎಲಿಮಿನೇಟ್‌ ಆಗಿದ್ದಾರೆ. ಈ ಮೂಲಕ ಭವ್ಯಾ ಗೌಡ ಆರನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದಾರೆ.

    ನಿನ್ನೆಯ ಸಂಚಿಕೆ ಆರಂಭದಲ್ಲಿ ತಾನು ಎಲಿಮಿನೇಟ್‌ ಆಗುವುದಿಲ್ಲ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದ ಭವ್ಯಾ ಗೌಡ ಮನೆಯಲ್ಲಿರುವ ಆರು ಸ್ಪರ್ಧಿಗಳ ಪೈಕಿ ಕಡಿಮೆ ವೋಟ್‌ ಪಡೆದುಕೊಂಡ ಕಾರಣ ಎಲಿಮಿನೇಷನ್‌ಗೆ ಒಳಗಾಗಿದ್ದಾರೆ.

    64 ಲಕ್ಷದ 48 ಸಾವಿರದ 853 ಮತಗಳನ್ನು ಪಡೆದುಕೊಂಡ ಭವ್ಯಾ ಗೌಡ ಗ್ರಾಂಡ್‌ ಫಿನಾಲೆ ತಲುಪುವಲ್ಲಿ ವಿಫಲರಾಗಿ ಮನೆಯಿಂದ ಹೊರನಡೆದಿದ್ದಾರೆ. ಇನ್ನು ವರದಿಗಳ ಪ್ರಕಾರ ಭವ್ಯಾ ಗೌಡ ಅವರಿಗೆ ಬಿಗ್‌ಬಾಸ್‌ ಮನೆಯಲ್ಲಿ ವಾರಕ್ಕೆ 40 ಸಾವಿರ ಸಂಭಾವನೆ ನೀಡಲಾಗುತ್ತಿತ್ತು ಎನ್ನಲಾಗಿದ್ದು, ಈ ಮೂಲಕ ಭವ್ಯಾ ಗೌಡ 17 ವಾರಕ್ಕೆ 6 ಲಕ್ಷದ 80 ಸಾವಿರ ಸಂಭಾವನೆ ಪಡೆದಂತಾಗಿದೆ.

    ಇದಷ್ಟೇ ಅಲ್ಲದೇ ಬಿಗ್‌ಬಾಸ್‌ ಪ್ರಾಯೋಜಕರಾದ ಶ್ರೀ ಕೃಷ್ಣ ತುಪ್ಪ ಕಡೆಯಿಂದ 2 ಲಕ್ಷ, ಸುದರ್ಶನ್‌ ಸಿಲ್ಕ್ಸ್‌ ಕಡೆಯಿಂದ 1 ಲಕ್ಷ ಹಾಗೂ ಎಕೋ ಪ್ಲಾನೆಟ್‌ ಕಡೆಯಿಂದ 50 ಸಾವಿರ ನಗದು ಬಹುಮಾನ ಸಹ ಭವ್ಯಾಗೆ ದೊರೆತಿದೆ.


    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe to get the latest posts sent to your email.

    LEAVE A REPLY

    Related News

    ಮಹಾಲಯ ಅಮಾವಾಸ್ಯೆ 2026: ಅಕ್ಟೋಬರ್ 10ರಂದು ಆಚರಣೆ; ಪಿತೃಪೂಜೆಯ ಮಹತ್ವವೇನು?

    ಹಿಂದೂ ಧರ್ಮದಲ್ಲಿ ಮಹಾಲಯ ಅಮಾವಾಸ್ಯೆಗೆ ವಿಶೇಷ ಸ್ಥಾನವಿದೆ. ಪಿತೃಪಕ್ಷದ ಕೊನೆಯ ದಿನವಾದ ಈ ಸಂದರ್ಭದಲ್ಲಿ ಪೂರ್ವಜರನ್ನು ಸ್ಮರಿಸಿ, ಅವರ ಆತ್ಮಕ್ಕೆ ಶಾಂತಿ ಕೋರಿ ವಿವಿಧ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಲಾಗುತ್ತದೆ. ಈ ದಿನ ಶ್ರಾದ್ಧ,...

    ಕರ್ನಾಟಕಕ್ಕೆ ಗುಡ್‌ನ್ಯೂಸ್: ಯುಬಿಯಿಂದ ₹4,500 ಕೋಟಿ ಕೊಡುಗೆ, 36 ಸಾವಿರಕ್ಕೂ ಹೆಚ್ಚು ಉದ್ಯೋಗ

    ಬೆಂಗಳೂರು: ದೇಶದ ಅತಿದೊಡ್ಡ ಬಿಯರ್ ಉತ್ಪಾದನಾ ಸಂಸ್ಥೆ ಹಾಗೂ ಹೈನೆಕನ್‌ ಕಂಪನಿಯ ಭಾಗವಾಗಿರುವ ಬೆಂಗಳೂರು ಮೂಲದ 'ಯುನೈಟೆಡ್ ಬ್ರೂವರೀಸ್ ಲಿಮಿಟೆಡ್' (ಯುಬಿಎಲ್‌), ಕರ್ನಾಟಕದ ಆರ್ಥಿಕತೆ ಮತ್ತು ಉದ್ಯೋಗ ಸೃಷ್ಟಿಯಲ್ಲಿ ಮಹತ್ವದ ಪಾತ್ರ ವಹಿಸುತ್ತಿದೆ...

    Most Popular

    Recent Comments

    Home
    Play
    Notification
    Search