144 ವರ್ಷಗಳ ಬಳಿಕ ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಮಹಾಕುಂಭಮೇಳಕ್ಕೆ ಇಂದು (ಫೆಬ್ರವರಿ 26) ಅದ್ಧೂರಿಯಾಗಿ ತೆರೆಬೀಳಲಿದೆ. ಇಂದು ಮಹಾಶಿವರಾತ್ರಿಯ ಹಿನ್ನೆಲೆಯಲ್ಲಿ ಕೊನೆಯ ಪುಣ್ಯಸ್ನಾನ ನಡೆಯಲಿದೆ.
ಹೀಗೆ ಈ ಬಾರಿಯ ಕುಂಭಮೇಳಕ್ಕೆ ತೆರೆ ಬೀಳಲಿದ್ದು, ಕಳೆದ ಒಂದೂವರೆ ತಿಂಗಳಿನಿಂದ ಸದಾ ಸುದ್ದಿಯಲ್ಲಿದ್ದ ಕುಂಭಮೇಳ ಸಂಪನ್ನವಾಗಲಿದೆ. ಇನ್ನು ಕುಂಭಮೇಳ ಕುರಿತಾಗಿ ಸುದ್ದಿಯಾದವುಗಳಲ್ಲಿ ಕೆಲವು ದೈವಿಕತೆಯನ್ನು ಒಳಗೊಂಡಿದ್ದರೆ, ಇನ್ನೂ ಕೆಲವು ಹಾಸ್ಯ ಹಾಗೂ ಮನರಂಜನೆ ಸಂಬಂಧಿಸಿದ್ದವೂ ಸಹ ಆಗಿತ್ತು.
ಐಐಟಿ ಬಾಬಾ, ಮೊನಾಲಿಸಾ, ಟೀ ಬಾಬಾ, ಮುಳ್ಳಿನ ಹಾಸಿಗೆ ಬಾಬಾ ಹೀಗೆ ಹಲವರ ವಿಡಿಯೊಗಳು ವೈರಲ್ ಆದವು. ಅವುಗಳ ಜತೆ ಸಾಮಾನ್ಯ ಜನರ ವಿಡಿಯೊಗಳೂ ಸಹ ವೈರಲ್ ಆಗಿದ್ದು, ಆ ಪಟ್ಟಿಗೆ ಇದೀಗ ಮಹಿಳೆಯೊಬ್ಬರು ವಿಡಿಯೊ ಕಾಲ್ ಮಾಡಿ ಮೊಬೈಲ್ ಅನ್ನು ನದಿಗೆ ಮುಳುಗಿಸಿ ಎತ್ತುವ ಮೂಲಕ ಆನ್‌ಲೈನ್ ಪುಣ್ಯಸ್ನಾನ ಮಾಡಿಸಿದ್ದಾರೆ.
ಸದ್ಯ ಈ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ಡಿಜಿಟಲ್ ಇಂಡಿಯಾ ಎಂದರೆ ಇದು ಎಂದು ಟ್ರೋಲ್ ಮಾಡುತ್ತಿದ್ದಾರೆ.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


