Wednesday, September 23, 2026
spot_img
More
    spot_img
    HomeLatest newsಗೋಧಿ ಮೀಡಿಯಾ ಹಾಗೂ ಮೋದಿ ಸರ್ಕಾರ ಕನ್ನಡಿಗರನ್ನು ದೇಶದ್ರೋಹಿಗಳೆಂದು ಬಿಂಬಿಸುತ್ತಿವೆ; ಸಿದ್ದರಾಮಯ್ಯ ಕಿಡಿ

    ಗೋಧಿ ಮೀಡಿಯಾ ಹಾಗೂ ಮೋದಿ ಸರ್ಕಾರ ಕನ್ನಡಿಗರನ್ನು ದೇಶದ್ರೋಹಿಗಳೆಂದು ಬಿಂಬಿಸುತ್ತಿವೆ; ಸಿದ್ದರಾಮಯ್ಯ ಕಿಡಿ

    ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಇತ್ತೀಚಿನ ಟ್ವೀಟ್‌ನಲ್ಲಿ ಕಳೆದ 11 ವರ್ಷಗಳಿಂದ ದೇಶ ಅಘೋಷಿತ ತುರ್ತು ಪರಿಸ್ಥಿತಿಯನ್ನು ಎದುರಿಸುತ್ತಿದೆ ಎಂದು ಆರೋಪಿಸಿದ್ದಾರೆ.

    ಇದು ಕೇಂದ್ರ ಸರ್ಕಾರದ ವಿರುದ್ಧ ತೀವ್ರ ವಿಮರ್ಶೆಯಾಗಿದೆ.ನಿನ್ನೆ ( ಜೂನ್ 25 ) ಇಂದಿರಾ ಗಾಂಧಿ ಪ್ರಧಾನಿಯಾಗಿದ್ದಾಗ ಘೋಷಿಸಿದ್ದ ಎಮರ್ಜನ್ಸಿಗೆ 50 ವರ್ಷವಾದ ಹಿನ್ನೆಲೆ ಮೋದಿ ಹಾಗೂ ಬಿಜೆಪಿ ನಾಯಕರು ಎಮರ್ಜೆನ್ಸಿ ಕುರಿತು ಬರೆದುಕೊಂಡು ಟೀಕಿಸಿದ್ದರು. ಇದಕ್ಕೆ ತಿರುಗೇಟು ನೀಡಿದ ಸಿದ್ದರಾಮಯ್ಯ ಕಳೆದ 11 ವರ್ಷಗಳಿಂದ ರಾಜ್ಯದ ಮೇಲೆ ನಿರಂತರವಾಗಿ ದಾಳಿ ಮಾಡುತ್ತಿರುವ ಮೋದಿ ಸರ್ಕಾರದ್ದು ನಿಜವಾದ ತುರ್ತು ಪರಿಸ್ಥಿತಿ ಅಲ್ಲವೇ? ಎಂದು ಪ್ರಶ್ನಿಸಿದ್ದಾರೆ.

    ಸಿದ್ದರಾಮಯ್ಯ ಅವರು ಐಟಿ ಮತ್ತು ಇಡಿ ಸೇರಿದಂತೆ ಸ್ವಾಯತ್ತ ತನಿಖಾ ಸಂಸ್ಥೆಗಳು ಕೇಂದ್ರದ ಆಜ್ಞೆಯಂತೆ ಕರ್ನಾಟಕದ ವಿರುದ್ಧ ಕಾರ್ಯನಿರ್ವಹಿಸುತ್ತಿವೆ ಎಂದು ಆರೋಪಿಸಿದ್ದಾರೆ. ಕನ್ನಡಿಗರ ಶ್ರಮದಿಂದ ಕಟ್ಟಿದ ಬ್ಯಾಂಕ್‌ಗಳನ್ನು ಉತ್ತರ ಭಾರತದ ಬ್ಯಾಂಕ್ ಗಳ ಜತೆ ವಿಲೀನ ಮಾಡಿ ನಾಶಪಡಿಸಲಾಗಿದೆ ಎಂದು ಅವರು ಉಲ್ಲೇಖಿಸಿದ್ದಾರೆ.

     ಗೋಧಿ ಮಿಡಿಯಾಗಳ ಮೂಲಕ ಕರ್ನಾಟಕದ ಸಣ್ಣ ಸಮಸ್ಯೆಗಳನ್ನು ದೊಡ್ಡದಾಗಿ ತೋರಿಸಿ, ರಾಜ್ಯದ ಖ್ಯಾತಿಗೆ ಹಾನಿ ಮಾಡಲಾಗುತ್ತಿದೆ. ಇದಲ್ಲದೆ, ಕನ್ನಡ ಪರ ಹೋರಾಟಗಾರರನ್ನು ಅವಮಾನಿಸಿ ತಮ್ಮ ಧ್ವನಿಯನ್ನು ದಬ್ಬಾಳಿಕೆ ಮಾಡಲಾಗುತ್ತಿದೆ ಎಂದು ಆರೋಪಿಸಿದ್ದಾರೆ.

    ಅಲ್ಲದೇ ಐಟಿ ಸೆಲ್ ಮೂಲಕ ಭಾಷಭಿಮಾನ ವ್ಯಕ್ತ ಪಡಿಸುವ ಕನ್ನಡಿಗರನ್ನು ಕಿಡಿಗೇಡಿಗಳು ಹಾಗೂ ದೇಶದ್ರೋಹಿಗಳು ಎಂದು ಬಿಂಬಿಸಲಾಗುತ್ತಿದೆ ಎಂದು ಸಿದ್ದು ಕಿಡಿಕಾರಿದ್ದಾರೆ.

     ಇದೇ ನಿಜವಾದ ತುರ್ತುಪರಿಸ್ಥಿತಿ ಎಂಡಿದ್ದಾರೆ.

    ಅವರ ಸಹವಾಸದಿಂದ ಮೂಲೆಗುಂಪಾದೆ; ಸತ್ಯ ಒಪ್ಪಿಕೊಂಡ ಪೃಥ್ವಿ ಶಾ

    ಎಐ ಅಡ್ವೋಕೇಟ್‌ ಅಸಿಸ್ಟೆಂಟ್‌ ವೆಬ್‌ಸೈಟ್‌ಗಾಗಿ ಇಲ್ಲಿ ಕ್ಲಿಕ್‌ ಮಾಡಿ

    ಸಿದ್ದರಾಮಯ್ಯ ಅವರು ಐಟಿ ಮತ್ತು ಇಡಿ ಸೇರಿದಂತೆ ಸ್ವಾಯತ್ತ ತನಿಖಾ ಸಂಸ್ಥೆಗಳು ಕೇಂದ್ರದ ಆಜ್ಞೆಯಂತೆ ಕರ್ನಾಟಕದ ವಿರುದ್ಧ ಕಾರ್ಯನಿರ್ವಹಿಸುತ್ತಿವೆ ಎಂದು ಆರೋಪಿಸಿದ್ದಾರೆ. ಕನ್ನಡಿಗರ ಶ್ರಮದಿಂದ ಕಟ್ಟಿದ ಬ್ಯಾಂಕ್‌ಗಳನ್ನು ಉತ್ತರ ಭಾರತದ ಬ್ಯಾಂಕ್ ಗಳ ಜತೆ ವಿಲೀನ ಮಾಡಿ ನಾಶಪಡಿಸಲಾಗಿದೆ ಎಂದು ಅವರು ಉಲ್ಲೇಖಿಸಿದ್ದಾರೆ. ಗೋಧಿ ಮಿಡಿಯಾಗಳ ಮೂಲಕ ಕರ್ನಾಟಕದ ಸಣ್ಣ ಸಮಸ್ಯೆಗಳನ್ನು ದೊಡ್ಡದಾಗಿ ತೋರಿಸಿ, ರಾಜ್ಯದ ಖ್ಯಾತಿಗೆ ಹಾನಿ ಮಾಡಲಾಗುತ್ತಿದೆ. ಇದಲ್ಲದೆ, ಕನ್ನಡ ಪರ ಹೋರಾಟಗಾರರನ್ನು ಅವಮಾನಿಸಿ ತಮ್ಮ ಧ್ವನಿಯನ್ನು ದಬ್ಬಾಳಿಕೆ ಮಾಡಲಾಗುತ್ತಿದೆ ಎಂದು ಆರೋಪಿಸಿದ್ದಾರೆ. ಅಲ್ಲದೇ ಐಟಿ ಸೆಲ್ ಮೂಲಕ ಭಾಷಭಿಮಾನ ವ್ಯಕ್ತ ಪಡಿಸುವ ಕನ್ನಡಿಗರನ್ನು ಕಿಡಿಗೇಡಿಗಳು ಹಾಗೂ ದೇಶದ್ರೋಹಿಗಳು ಎಂದು ಬಿಂಬಿಸಲಾಗುತ್ತಿದೆ ಎಂದು ಸಿದ್ದು ಕಿಡಿಕಾರಿದ್ದಾರೆ. ಇದೇ ನಿಜವಾದ ತುರ್ತುಪರಿಸ್ಥಿತಿ ಎಂಡಿದ್ದಾರೆ.


    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe to get the latest posts sent to your email.

    Leave a Reply

    Related News

    ಎಸ್‌ಐಆರ್ ಅಕ್ರಮ: ಎನ್‌ಡಿಎ ನಿಯೋಗ ಮುಖ್ಯ ಚುನಾವಣಾ ಆಯುಕ್ತರಿಗೆ ದೂರು

    ಕರ್ನಾಟಕದಲ್ಲಿ ಎಸ್‌ಐಆರ್ ಪ್ರಕ್ರಿಯೆ ದುರುಪಯೋಗದ ಆರೋಪದೊಂದಿಗೆ ಕುಮಾರಸ್ವಾಮಿ ಮತ್ತು ಪ್ರಲ್ಹಾದ ಜೋಶಿ ನೇತೃತ್ವದ ಎನ್‌ಡಿಎ ನಿಯೋಗ ನವದೆಹಲಿಯಲ್ಲಿ ಮುಖ್ಯ ಚುನಾವಣಾ ಆಯುಕ್ತರಿಗೆ ದಾಖಲೆ ಸಮೇತ ದೂರು ಸಲ್ಲಿಸಿತು.

    ಮಾದಪಟ್ಟಣ ಕ್ವಾರಿ ದುರಂತ: ಅಶೋಕ ತಲಾ ₹50 ಲಕ್ಷ ಪರಿಹಾರ ಆಗ್ರಹ

    ಬೆಂಗಳೂರು ಮಾದಪಟ್ಟಣ ಕ್ವಾರಿಯಲ್ಲಿ ಬಂಡೆ ಬಿದ್ದು 7 ಕಾರ್ಮಿಕರು ಮೃತಪಟ್ಟ ಘಟನೆಗೆ ಪ್ರತಿಪಕ್ಷ ನಾಯಕ ಆರ್.ಅಶೋಕ ರಾಜ್ಯ ಸರ್ಕಾರದ ನಿರ್ಲಕ್ಷ್ಯವೇ ಕಾರಣ ಎಂದು ದೂರಿ ತಲಾ ₹50 ಲಕ್ಷ ಪರಿಹಾರ ಒತ್ತಾಯಿಸಿದ್ದಾರೆ.

    Most Popular

    Recent Comments

    Home
    Play
    Notification
    Search

    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe now to keep reading and get access to the full archive.

    Continue reading