ಕಾಸರಗೋಡು: ಹೆತ್ತ ತಾಯಿಯನ್ನೇ ಮಗ ಭೀಕರವಾಗಿ ಸುಟ್ಟು ಕೊಲೆ ಮಾಡಿರುವ ಘಟನೆ ಮಂಜೇಶ್ವರದಲ್ಲಿ ನಡೆದಿದೆ.
ಮೆಲ್ವಿನ್ ಎಂಬಾತ ತನ್ನ 60 ವರ್ಷದ ತಾಯಿ ಹಿಲ್ಡಾರ ಅವರನ್ನು ಸುಟ್ಟು ಕೊಲೆ ಮಾಡಿದ್ದಾನೆ. ರಾತ್ರಿ ಒಂದು ಗಂಟೆ ಸಮಯಕ್ಕೆ ತಾಯಿಯನ್ನು ಅಡುಗೆ ಮನೆಗೆ ಕರೆದೊಯ್ದ ಮೆಲ್ವಿನ್ ಪೆಟ್ರೋಲ್ ಸುರಿದು ಸುಟ್ಟುಹಾಕಿದ್ದಾನೆ. ಬಳಿಕ ಚಿಕ್ಕಮ್ಮ ಲೊಲಿಟಾ ಬಳಿ ಹೋಗಿ ತಾಯಿ ಕಾಣೆಯಾಗಿದ್ದಾಳೆ ಎಂದು ಹೇಳಿ ಸುಳ್ಳು ಹೇಳಿದ್ದಾನೆ.
ಆದರೆ ಇದರಿಂದ ಅನುಮಾನಗೊಂಡ ಲೊಲಿಟಾ ಮನೆಗೆ ಹೋಗಿ ನೋಡೋಣ ಎಂದಾಗ ಎಲ್ಲಿ ತನ್ನ ಕೃತ್ಯ ಗೊತ್ತಾಗಿಬಿಡುತ್ತೋ ಎಂದು ಆಕೆಯ ಮೇಲೂ ಸಹ ಮೆಲ್ವಿನ್ ಹಲ್ಲೆ ಮಾಡಿ ಪೆಟ್ರೋಲ್ ಸುರಿದು ಕೊಲೆ ಯತ್ನ ಮಾಡಿದ್ದಾನೆ. ಆದರೆ ಚಿಕ್ಕಮ್ಮ ಲೊಲಿಟಾ ಕೂಗಿಕೊಂಡ ಕಾರಣ ಅಕ್ಕಪಕ್ಕದ ಜನ ಬಂದು ಆಕೆಯನ್ನು ರಕ್ಷಿಸಿದ್ದಾರೆ. ಸದ್ಯ ಆಕೆ ಮಂಗಳೂರಿನ ಯೆನಪೋಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇನ್ನು ಜನ ಬರುತ್ತಿದ್ದಂತೆ ಮೆಲ್ವಿನ್ ಸ್ಥಳದಿಂದ ಕಾಲ್ಕಿತ್ತಿದ್ದು, ಕರ್ನಾಟಕದ ಕಡೆ ಬಂದಿರುವುದಾಗಿ ಮಾಹಿತಿ ಇದೆ. ಪೊಲೀಸರು ಆತನ ಬೆನ್ನತ್ತಿದ್ದಾರೆ.
ರಾಜ್ಯದಲ್ಲಿ ಅಬ್ಬರಿಸಿ ಬೊಬ್ಬಿರಿಯುತ್ತಿರುವ ಮುಂಗಾರು: ಭರ್ತಿ ಹಂತಕ್ಕೆ ತಲುಪಿದ ಜಲಾಶಯಗಳು
ಎಐ ಅಡ್ವೋಕೇಟ್ ಅಸಿಸ್ಟೆಂಟ್ ವೆಬ್‌ಸೈಟ್‌ಗಾಗಿ ಇಲ್ಲಿ ಕ್ಲಿಕ್ ಮಾಡಿ
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


